ಜಗಳೂರು ಜಾತ್ರೆ : ಗ್ರಾಮಸ್ಥರ ಮೇಲೆ ಲಾಠಿ ಪ್ರಹಾರ

0
14
ಜಗಳೂರು

ದಾವಣಗೆರೆ : ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಮಾರಿಕಾಂಬ ಜಾತ್ರೆ ನಿಮಿತ್ತ ಗ್ರಾಮದ ಸುತ್ತಲೂ ದೇವಿಯ ಮೆರವಣಿಗೆ ಮಾಡುತ್ತಾ ಚರಗವನ್ನು ಚೆಲ್ಲುವಾಗ ಬೇರೆ ಊರಿನವರು ಗ್ರಾಮದೊಳಗೆ ಪ್ರವೇಶ ಮಾಡುವುದಾಗಲೀ ಅಥವಾ ಗ್ರಾಮದೊಳಗಿರುವ ಜನರು ಹೊರಗೆ ಹೋಗುವುದಾಗಲೀ ಮಾಡುವಂತಿಲ್ಲ. ಈ ಸಂಪ್ರದಾಯವನ್ನು ಮೀರಿದ ಕೆಂಗಾಪುರದ ರಾಮಲಿಂಗೇಶ್ವರ ಸ್ವಾಮೀಜಿಯ ಕಾರನ್ನೇ ಗ್ರಾಮದ ಯುವಕರು ಜಖಂ ಮಾಡಿರುವ ಘಟನೆ ಜಗಳೂರಿನಲ್ಲಿ ನಡೆದಿದೆ.
ಜಖಂ ಮಾಡಿದ ಯುವಕರನ್ನು ಬಂಧಿಸಲು ಪೋಲಿಸರು ಬಂದಿಸಿ ಯುವಕರನ್ನು ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿದೆ. ಇದನ್ನು ಪ್ರಶ್ನೆ ಮಾಡಲು ಹೋದ ಗ್ರಾಮಸ್ಥರ ಮೇಲೆ ಪೊಲೀಸ್‌ ಠಾಣೆಯ ಬಳಿಯೂ ಲಾಠಿಯಿಂದ ಹೊಡೆದು ಕಳುಹಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Previous articleಬಿಜೆಪಿ ಅಭ್ಯರ್ಥಿ ಪರ ದರ್ಶನ್ ಪ್ರಚಾರ
Next articleಮೋದಿ ಅಂದರೆ ವಿಷದ ಹಾವು