ಚಂದ್ರಯಾನ ಯಶಸ್ವಿಗೆ ಸೀರೆಯಲ್ಲಿ ನೇಯ್ಗೆ

0
9

ಇಳಕಲ್: ಇಸ್ರೋ ಕೈಗೊಂಡ ಚಂದ್ರಯಾನ ಯಶಸ್ವಿಯಾಗಲಿ ಎಂದು ಇಳಕಲ್‌ನ ನೇಕಾರ ಮೇಘರಾಜ ಗುದ್ದಾಟಿ ಸೀರೆಯಲ್ಲಿ ಸುಂದರವಾಗಿ ನೇಯ್ದಿದ್ದಾರೆ.
ಇಸ್ರೋ ಉಡಾವಣೆ ಮಾಡಿದ ರಾಕೆಟ್ ಆಗಸ್ಟ್ ೨೩ರಂದು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಲಿ ಇಡೀ ವಿಶ್ವವೇ ಬೆರಗಾಗುವಂತೆ ನಡೆದ ಈ ಉಡಾವಣೆಯಿಂದ ದೇಶಕ್ಕೆ ಮತ್ತು ಇಸ್ರೋಗೆ ಜಯ ಸಿಗಲಿ ಎಂಬ ದೇಶದ ಧ್ವಜವನ್ನು ಮತ್ತು ರಾಕೆಟ್‌ನ್ನು ಸೀರೆಯ ಸೆರಗಿನಲ್ಲಿ ಆಕರ್ಷಕವಾಗಿ ಬಿಡಿಸಿದ್ದಾರೆ. ಈಗಾಗಲೇ ಇವರು ಇಂತಹ ಹಲವಾರು ನೇಯ್ಗೆಗಳನ್ನು ಮಾಡಿ ಇಡೀ ರಾಜ್ಯಾದ್ಯಂತ ಹೆಸರು ಮಾಡಿರುವದನ್ನು ಇಲ್ಲಿ ಸ್ಮರಿಸಬಹುದು.

Previous articleಅಂಗಡಿಯಲ್ಲೇ ಆತ್ಮಹತ್ಯೆಗೆ ಶರಣಾದ ಮಾಲಕಿ
Next articleಮುಳುಗುತ್ತಿದ್ದವನನ್ನು ಹೊರ ತಂದ ಯುವಕ: ಸಾವಿರಾರು ಜನರಿಗೆ ಔತನಕೂಟ