ಘಟಕಾಂಬಳೆ ಮನೆಗೆ ಪೇಜಾವರ ಶ್ರೀ ಭೇಟಿ

0
18

ವಿಜಯಪುರ : ಮಹಾನಗರ ಪಾಲಿಕೆ ಮಾಜಿ ಉಪಮೇಯರ್ ಗೋಪಾಲ ಘಟಕಾಂಬಳೆ ಅವರ ಮನೆಗೆ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗೋಪಾಲ ಘಟಕಾಂಬಳೆ ಪರಿವಾರದ ಸದಸ್ಯರು ಶ್ರೀಗಳಿಗೆ ಪಾದಪೂಜೆ ನೆರವೇರಿಸಿದರು.
ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಶ್ರೀರಾಮಮಂದಿರದಲ್ಲಿ ಪೂಜೆಯಾದ ಪವಿತ್ರ ಮಂತ್ರಾಕ್ಷತೆಯನ್ನು ವಿವಿಧ ಭಕ್ತರ ಮನೆಗಳಿಗೆ ತೆರಳಿ ವಿತರಿಸಿ ಅನುಗ್ರಹಿಸಿದರು. ಇದಕ್ಕೂ ಮುನ್ನ ನಗರದ ಜ್ಞಾನಯೋಗಾಶ್ರಮಕ್ಕೆ ತೆರಳಿದ ಪೇಜಾವರ ಶ್ರೀಗಳು ಸಿದ್ದೇಶ್ವರ ಶ್ರೀಗಳಿಗೆ ನಮನ ಸಲ್ಲಿಸಿದರು.

Previous articleದತ್ತಪೀಠ ಆವರಣದ ಗೋರಿ ಹಾನಿ: 14 ಜನ ಆರೋಪಿಗಳಿಗೆ ಸಮನ್ಸ್
Next articleಮೈಷುಗರ್ 121 ಕೋಟಿ ನುಂಗಿದ ನಾಗರಾಜಪ್ಪ