Home Advertisement
Home ತಾಜಾ ಸುದ್ದಿ ಗ್ಯಾರಂಟಿಗಳು ಇನ್ನೆಷ್ಟು ವರ್ಷ

ಗ್ಯಾರಂಟಿಗಳು ಇನ್ನೆಷ್ಟು ವರ್ಷ

0
129

ಹಾಸನ: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಇನ್ನೆಷ್ಟು ವರ್ಷ ಇರುತ್ತವೆ ನೋಡೋಣ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ವ್ಯಂಗ್ಯವಾಗಿ ಟೀಕಿಸಿದರು.
ಸಂಸದರ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು ಗೃಹಲಕ್ಷಿö್ಮ ಯೋಜನೆ ಚಾಲನೆ ವೇಳೆ ಚಾಮುಂಡೇಶ್ವರಿಗೂ ೨ ಸಾವಿರ ರೂ. ಕೊಟ್ಟಿದ್ದಾರೆ. ಆ ತಾಯಿಗೂ ಎರಡು ಸಾವಿರ ಕೊಟ್ಟು ಯೋಜನೆಗೆ ಶಕ್ತಿ ತುಂಬಲು ಬೇಡಿದ್ದಾರೆ, ಆದರೆ ಹುಂಡಿಗೆ ಹಣ ಹಾಕಲಿಲ್ಲ. ಹೀಗಾಗಿ ಈ ಯೋಜನೆಗಳು ಎಷ್ಟು ವರ್ಷ ಇರುತ್ತವೆ ನೋಡೋಣ. ಮೂರು ನಾಲ್ಕು ತಿಂಗಳಲ್ಲೇ ಅದರ ಬಗ್ಗೆ ವ್ಯಾಖ್ಯಾನಿಸುವ ಪರಿಸ್ಥಿತಿ ಬರಬಹುದು ಎಂದು ಸೂಚ್ಯವಾಗಿ ಹೇಳಿದರು.
ಆಯ್ದ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತೇನೆ. ನನ್ನ ಜೀವನದ ಅಂತ್ಯದಲ್ಲಿ ಪ್ರಾದೇಶಿಕ ಪಕ್ಷಕ್ಕಾಗಿ ಹೋರಾಡುತ್ತಿದ್ದೇನೆ. ಕೊನೆ ಉಸಿರಿರೋವರೆಗೆ ಪಕ್ಷಕ್ಕಾಗಿ ಹೋರಾಡುತ್ತೇನೆ ಎಂದು ಗೌಡರು ಭಾವುಕರಾದರು.
ಬಿಬಿಎಂಪಿಯಲ್ಲಿ ಎಷ್ಟು ಅಕ್ರಮ ನಡೆದಿದೆ ತನಿಖೆ ಮಾಡ್ತೀವಿ ಅಂದ್ರಿ… ಈಗ ನೀವೇ ಅಧಿಕಾರದಲ್ಲಿದ್ದೀರಿ. ಏಕೆ ತನಿಖೆ ಮಾಡುತ್ತಿಲ್ಲ? ಯಾವುದೇ ಮಾಹಿತಿಯನ್ನು ಹೊರ ಹಾಕದಂತೆ ನೀರಾವರಿ ಮಂತ್ರಿಗಳು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ನೀರಾವರಿ ವಿವರವನ್ನು ಅಧಿಕಾರಿಗಳು ಕೊಡ್ತಿಲ್ಲ ಎಂದು ಗೌಡರು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಇತರರು ಉಪಸ್ಥಿತರಿದ್ದರು.

Previous articleಸೆ. 4ರಿಂದ ಹಾವೇರಿ ಜಿಲ್ಲೆಯಲ್ಲಿ ಮೋಡಬಿತ್ತನೆ
Next articleಕಲ್ಯಾಣ ಕರ್ನಾಟಕ ಶೈಕ್ಷಣಿಕ ಫಲಿತಾಂಶ ವೃದ್ಧಿಗೆ ಪಣ