ಕ್ಯಾಂಟರ್ ಅಡ್ಡಗಟ್ಟಿ, ಖಾರದ ಪುಡಿ ಎರಚಿ 32 ಲಕ್ಷ ರೂ. ದರೋಡೆ

0
6

ವಿಜಯಪುರ: ಕ್ಯಾಂಟರ್ ಅಡ್ಡಗಟ್ಟಿ, ಖಾರದ ಪುಡಿ ಎರಚಿ, ಹಲ್ಲೆ ನಡೆಸಿ 32 ಲಕ್ಷ ರೂ. ಹಣ ದೋಚಿದ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆ ಕೊಲ್ಹಾರ ಪಟ್ಟಣದ ಹೊರ ಭಾಗದಲ್ಲಿ ನಿನ್ನೆ ತಡರಾತ್ರಿ ಹತ್ತಿ ಮಾರಾಟ ಮಾಡಿ ವಾಪಸ್ ಹಣ ತೆಗೆದುಕೊಂಡು ಹೋಗುತ್ತಿದ್ದಾಗ ದರೋಡೆ ನಡೆದಿದೆ, ಕಲಬುರಗಿ ಜಿಲ್ಲೆ ಜೀವರ್ಗಿ ಪಟ್ಟಣದ ಹತ್ತಿ ವ್ಯಾಪಾರಿ ಚಂದ್ರಕಾಂತ ಕುಂಬಾರ ಎಂಬುವವರ ಹಣವನ್ನು ದರೋಡೆ ಮಾಡಿದ್ದಾರೆ. ಚಂದ್ರಕಾಂತ ಅವರು ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದಲ್ಲಿರುವ ಕಾರ್ಖಾನೆಗೆ ಹತ್ತಿ ಮಾರಾಟ ಮಾಡಿ 32 ಲಕ್ಷ ರೂ. ನಗದು ಜತೆಗೆ ವಾಪಸ್ ಜೀವರ್ಗಿಗೆ ತೆರಳುತ್ತಿದ್ದರು.
ಕೊಲ್ಹಾರ ಪಟ್ಟಣದ ಬಳಿ ಬರುವಾಗ ಬುಲೆರೋ ವಾಹನದಿಂದ ಬಂದ ದರೋಡೆಕೋರರು ಕ್ಯಾಂಟರ್‌ ವಾಹನಕ್ಕೆ ಅಡ್ಡಗಟ್ಟಿದ್ದಾರೆ. ನಂತರ ಏಕಾಏಕಿ ಕ್ಯಾಂಟರ್‌ ಗಾಜಿಗೆ ಕಲ್ಲು ಎಸೆದು, ರಾಡ್‌ನಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ನಂತರ ಕಣ್ಣಿಗೆ ಖಾರದ ಪುಡಿ ಎರಚಿ ಕ್ಯಾಂಟರ್‌ನಲ್ಲಿಟ್ಟಿದ್ದ 32 ಲಕ್ಷ ರೂಪಾಯಿ ದರೋಡೆ ಮಾಡಿ ಪರಾರಿ ಆಗಿದ್ದಾರೆ. ದರೋಡೆಕೋರರಿಂದ ಹಲ್ಲೆಗೀಡಾದ ವ್ಯಾಪಾರಿ ಚಂದ್ರಕಾಂತ ಅವರ ಕ್ಯಾಂಟರ್ ಚಾಲಕ ಮಹಾಂತೇಶ ಕುಂಬಾರ ಹಾಗೂ ಸಹಾಯಕ ಮಲ್ಲು ಕೊಡಚಿ ಅವರನ್ನು ಕೊಲ್ಹಾರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Previous articleಪವಿತ್ರಾ ಜಯರಾಂ ಸಾವಿನ ಬೆನ್ನಲ್ಲೇ ನಟ ಚಂದ್ರಕಾಂತ್ ಆತ್ಮಹತ್ಯೆ!
Next articleರೈಲಿನಲ್ಲಿ ಚಾಕು ಇರಿತ ಪ್ರಕರಣ: ಕೊಲೆ ಮಾಡಿ ಪರಾರಿಯಾದವನ ರೇಖಾಚಿತ್ರ ಬಿಡುಗಡೆ