ಕಾರು ಟೆಂಪೋ ಡಿಕ್ಕಿ: ೨೮ ಮಂದಿಗೆ ಗಾಯ

0
32

ಮಂಡ್ಯ: ಕಾರು ಮತ್ತು ಗೂಡ್ಸ್ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ೨೮ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಗುರುವಾರ ಭಾರತೀನಗರ ತಾಲ್ಲೂಕಿನ ಸಮೀಪದ ಮಣಿಗೆರೆ ಗ್ರಾಮದ ಬಳಿ ನಡೆದಿದೆ.ಮೂಗ ನಕೊಪ್ಪಲು ಗ್ರಾಮದಲ್ಲಿನ ಸಾವಿನ ಕಾರ್ಯಕ್ಕೆ ತೊರೆ ಬೊಮ್ಮನಹಳ್ಳಿ ಗ್ರಾಮದಿಂದ ಗೂಡ್ಸ್ ಟೆಂಪೋದಲ್ಲಿ ೨೫ ಮಂದಿ ತೆರಳುತ್ತಿದ್ದಾಗ, ಮಣಿಗೆರೆ ಬಳಿ ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗಿ ವಾಪಸ್ಸಾಗುತ್ತಿದ್ದ ಬೆಂಗಳೂರು ಬನ ಶಂಕರಿ ನಿವಾಸಿಗಳಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿ ಘಟನೆ ಸಂಭವಿಸಿದೆ. ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Previous article25ರಿಂದ ಮೊಟ್ಟೆ, ಬಾಳೇಹಣ್ಣು ವಿತರಣೆ
Next articleಜಾತಿ ನಿಂದನೆ: ಮುನಿರತ್ನಗೆ ಜಾಮೀನು