ಕಾಂಗ್ರೆಸ್ ತೆಕ್ಕೆಗೆ ವಿಜಯಪುರ ಮಹಾನಗರ ಪಾಲಿಕೆ

0
14

ವಿಜಯಪುರ: ಜಿಲ್ಲೆಯ ನೂತನ ಮಹಾಪೌರ ಹಾಗೂ ಉಪಮಹಾಪೌರರಿಗೆ ಸಚಿವ ಎಂ. ಬಿ, ಪಾಟೀಲ ಶುಭ ಹಾರೈಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದರೂ ಮೇಯರ್, ಉಪಮೇಯರ್ ಸ್ಥಾನಗಳು ಕಾಂಗ್ರೆಸ್ ಪಕ್ಷದ ಪಾಲಾಗಿದೆ.
ಇಂದು ನಡೆದ ಮೇಯರ್ ಚುನಾವಣೆಯಲ್ಲಿ ಮೇಯರ್ ಅವರಾಗಿ ಶ್ರೀಮತಿ ಮಹೆಜಬೀನ್ ಅಬ್ಸುಲ್ ರಜಾಕ್ ಹೊರ್ತಿ ಹಾಗೂ ಶ್ರೀ ದಿನೇಶ ಹಳ್ಳಿ ಅವರು ಉಪಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಮಹಾಪೌರರಿಗೆ ಹಾಗೂ ಉಪಮಹಾಪೌರರಿಗೆ ಅಭಿನಂದನೆಗಳು. ನಿಮ್ಮ ಆಡಳಿತಾವಧಿಯಲ್ಲಿ ವಿಜಯಪುರ ಮಹಾನಗರ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

Previous articleರೈತರಿಗೆ ನ್ಯಾಯ ಕೊಡದಿರುವ ಸರ್ಕಾರ ಬಹಳ ದಿನ ಉಳಿಯುವುದಿಲ್ಲ
Next articleಖಾರದ ಪುಡಿ ಎರಚಿ 30 ಹಂದಿಗಳ ಕಳವು