Home Advertisement
Home ಅಪರಾಧ ಕಲಬುರಗಿ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ

ಕಲಬುರಗಿ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ

0
81

ಕಲಬುರಗಿ: ಇಲ್ಲಿಯ ಕೇಂದ್ರ ಕಾರಾಗೃಹದಲ್ಲಿ ಖೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದ್ದು, ಜೈಲಿನಿಂದಲೇ ಖೈದಿಗಳು ಗಾಂಜಾ ಹೊಡೆಯುತ್ತ ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿರುವ ದೃಶ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
ವಿವಿಧ ಪ್ರಕರಣಗಳಲ್ಲಿ ಜೈಲು ಸೇರಿದ ಖೈದಿಗಳಾದ ವಿಶಾಲ, ಸಾಗರ ಮತ್ತು ಸೋನು ಎಂಬುವರು ಜೈಲಿನಲ್ಲಿ ಸ್ಮಾರ್ಟ್ ಪೋನ್ ಮತ್ತು ಗಾಂಜಾ ಪಡೆದು ರಾಜಾತಿಥ್ಯ ಪಡೆಯುತ್ತಿದ್ದು, ಸೋಮವಾರ ತಮ್ಮ ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿ ಗಾಂಜಾ ಹೊಡೆಯುತ್ತ ಪೋಸ್ ನೀಡಿ ಸೆಲ್ಫಿ ನೀಡುತ್ತಿರುವ ದೃಶ್ಯ ವೈರಲ್ ಆಗಿದೆ.
ಹಣ ಕೊಟ್ಟರೆ ಜೈಲಿನಲ್ಲಿರುವ ಖೈದಿಗಳಿಗೆ ಸ್ಮಾರ್ಟ್ ಪೋನ್ ಮತ್ತು ಗಾಂಜಾ ಸಿಗುತ್ತದೆ ಎಂಬುದು ಸಾಬೀತಾಗಿದ್ದು, ಖೈದಿಗಳು ಹೈಫೈ ಲೈಫ್ ಮಾಡಲು ಜೈಲಿನ ಸಿಬ್ಬಂದಿ ಸಹಕರಿಸುತ್ತಿರುವುದಕ್ಕೆ ಸಾರ್ವಜನಿಕರಿಂದೆ ಆಕ್ರೋಶ ವ್ಯಕ್ತವಾಗಿದೆ.
ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಪ್ರಕರಣ ಹಿನ್ನಲೆ ದರ್ಶನ್ ಆಪ್ತ ಸಹಾಯಕ ನಾಗರಾಜ್ ಕಲಬುರಗಿ ಜೈಲಿಗೆ ಶಿಫ್ಟ್ ಆದ ಬಳಿಕ ನಾಗರಾಜನೊಂದಿಗೆ ಇಲ್ಲಿರುವ ಖೈದಿಗಳಿಗೆ ರಾಜಾತಿಥ್ಯ ಸಿಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

Previous articleಸಂಡೂರು ನಾರಿಹಳ್ಳಕ್ಕೆ ಆಗಮಿಸಿದ ಸಿಎಂ
Next articleನಾರಿ ಹಳ್ಳ‌ ಜಲಾಶಯಕ್ಕೆ ಸಿಎಂ ಬಾಗೀನ