ಕರ್ನಾಟಕದಲ್ಲಿಯೂ ನಡೆಯಲ್ಲ ಕಾಂಗ್ರೆಸ್ ಗ್ಯಾರಂಟಿ

0
23

ಬಾಗಲಕೋಟೆ(ಇಳಕಲ್): ಐದು ಗ್ಯಾರಂಟಿಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಎಲ್ಲೆಲ್ಲಿ ಚುನಾವಣೆಯನ್ನು ಎದುರಿಸಿದೆಯೋ ಎಲ್ಲಡೆ ಅದು ಸೋಲು ಅನುಭವಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು.
ವೀರಮಣಿ ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಅಸ್ಸಾಂ ಮಣಿಪುರ ತ್ರಿಪುರ ಮುಂತಾದಡೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅದು ಈಗಾಗಲೇ ಸೋಲು ಅನುಭವಿಸಿದೆ. ಇಲ್ಲಿಯೂ ಸಹ ರಾಹುಲ್ ಬಾಬಾ ಆಟ ನಡೆಯದೇ ಸೋಲುತ್ತದೆ ಎಂದರು.
ಕೇಂದ್ರ ಸರಕಾರ ಸಾಕಷ್ಟು ಸೌಲಭ್ಯಗಳನ್ನು ಮತ್ತು ಅನುದಾನವನ್ನು ಕರ್ನಾಟಕ ರಾಜ್ಯಕ್ಕೆ ನೀಡಿದೆ ಲಿಂಗಾಯತ ಮುಖ್ಯಮಂತ್ರಿಗಳನ್ನೇ ಈ ಸಮಯದಲ್ಲಿ ಆಯ್ಕೆ ಮಾಡಿದೆ. ಆದರೆ ಕಾಂಗ್ರೆಸ್ ಇಂದಿರಾಗಾಂಧಿ ಕಾಲದಲ್ಲಿ ನಿಜಲಿಂಗಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ ನಡುವೆ ಇಳಿಸಿತು. ರಾಜೀವಗಾಂಧಿ ವಿರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಮಾಡಿ ಅವಧಿಪೂರ್ಣದಲ್ಲಿಯೇ ಕೆಳಗಿಳಿಸಿದರು ಎಂದು ಟೀಕಿಸಿದರು.
2024ರಲ್ಲಿ ಬರುವ ಲೋಕಸಭೆ ಚುನಾವಣೆಯಲ್ಲಿ ಸಹ ನರೇಂದ್ರ ಮೋದಿಯವರನ್ನು ಮತ್ತೇ ಪ್ರಧಾನಿ ಮಾಡುವ ಶಕ್ತಿ ನಿಮ್ಮ ಕೈಯಲ್ಲಿ ಇದೆ ಅದಕ್ಕಾಗಿ ಈಗಲೇ ಸಿದ್ಧತೆ ಮಾಡಿರಿ ಎಂದು ಕರೆಕೊಟ್ಟರು.

Previous articleಮಾಜಿ ಶಾಸಕರ ಮನೆಯಲ್ಲಿ ದರೋಡೆ
Next articleಕಾಂಗ್ರೆಸ್ ಪಕ್ಷದಲ್ಲಿ ಗುಲಾಮಗಿರಿ: ಯತ್ನಾಳ‌