ಇತಿಹಾಸದಲ್ಲೇ ಇದು ಮೊದಲ ಘಟನೆ: ಸಿದ್ದರಾಮಯ್ಯ

0
25


ಬಳ್ಳಾರಿ: 70 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೇಟ್ ಒಡೆದಿದೆ. ನೀರಿನ ರಭಸಕ್ಕೆ ಗೇಟ್ ಕೊಚ್ಚಿ ಹೋಗಿದೆ ಎಂದು ಸಿಎಂ ಸಿದ್ದರಾಮಯ್ಯ ‌ಹೇಳಿದರು.
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ೧೯ ಕೊಚ್ಚಿ‌ ಹೋಗಿದ್ದನ್ನು ಪರಿಶೀಲಿಸಿ ಮಾದ್ಯಮ ಗೋಷ್ಟಿಯಲ್ಲಿ ಮಾತಾನಾಡಿದರು. ಗೇಟ್ ಆಗಲೇ ತಯಾರು ಮಾಡಲಾಗ್ತಿದೆ.
ನಾಳೆಯಿಂದ ಗೇಟ್ ಕೂಡಿಸೋ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ .
ಕನ್ನಯ್ಯ ನಾಯ್ಡು ಮತ್ತವರ ತಂಡದಿಂದ ಕಾರ್ಯ ನಡೆಯುತ್ತಿದೆ
ಬಹಳ ಅನುಭವಿ ಅವರು, ಅವರ ನೇತೃತ್ವದಲ್ಲಿ ನಾಳೆಯಿಂದ ತಾತ್ಕಾಲಿಕ ಗೇಟ್ ಕೂಡಿಸಲಾಗ್ತದೆ.
ತಜ್ಞರ ಪ್ರಕಾರ 50 ವರ್ಷಕ್ಕೊಮ್ಮೆ ಗೇಟ್ ಬದಲಿಸಬೇಕು.
ಇನ್ಮುಂದೆ ತಜ್ಞರು ಹೇಳಿದಂತೆ, ಜಲಾಶಯ ನಿರ್ವಹಣೆ ಮಾಡಲಾಗುತ್ತದೆ. ಈ ಹಿಂದೆ ಗೇಟ್ ಒಡೆದಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಸಿಎಂ ಇತಿಹಾಸದಲ್ಲಿ ಈ ಹಿಂದೆ ಯಾವತ್ತೂ ಗೇಟ್ ಒಡೆದಿಲ್ಲ.
ಸದ್ಯಕ್ಕೆ ನೀರು ನಿಲ್ಲಿಸೋದೆ ನಮ್ಮ ಗುರಿ. ಗೇಟ್ ಕೊಚ್ಚಿ ಹೋಗಿರೋ ಪ್ರಕರಣಕ್ಕೆ ಯಾರನ್ನ ಹೊಣೆ ಮಾಡ್ತಿರಿ ಅನ್ನೋ ಪ್ರಶ್ನೆಗೆ ನೀರು ನಿಲ್ಲಿಸೋದೇ ಒಂದೇ ನಮ್ಮ ಗುರಿ, ಉಳಿದಿದ್ದೇಲ್ಲಾ ಆ ಮೇಲೆ ಎಂದರು. ಮೊದಲನೇ ಬೆಳೆಗೆ ಯಾವುದೇ ತೊಂದರೆ ಇಲ್ಲ. ಗೇಟ್ ಕೂಡಿಸಿದ ಬಳಿಕವೂ ನಮ್ಮ ಬಳಿ 63 ಟಿಎಂಸಿ ನೀರು ಉಳಿಯುತ್ತದೆ.
ರೈತರು ಯಾವುದೇ ಕಾರಣಕ್ಕೂ ಆತಂಕ ಪಡೋ ಅಗತ್ಯವಿಲ್ಲ.
ಮೊದಲನೇ ಬೆಳೆಗೆ ಬೇಕಾಗುಷ್ಟು ನೀರು ಇದೆ. ಮೊದಲ ಬೆಳೆಗೆ ಬೇಕಾದಷ್ಟು ನೀರು ನೀಡುತ್ತೇವೆ ಎಂದ ಅವರು ಆಂಧ್ರ, ತೆಲಂಗಾಣ ರಾಜ್ಯದ ನಾಯಕರು ನಾವು ಜಂಟಿಯಾಗಿದ್ದೇವೆ ಅಂತ ಹೇಳಿದ ಸಿಎಂಣ ಜಲಾಶಯ ವಿಚಾರದಲ್ಲಿ ರಾಜಕೀಯ ಮಾಡೋಲ್ಲ
ನಾಲ್ಕೈದು ದಿನಗಳಲ್ಲಿ ಗೇಟ್ ಕೂಡಿಸಲಾಗ್ತದೆ. ಮುಂದೆ ಮಳೆಯಾಗೋದಿದೆ, ಜಲಾಶಯ ಭರ್ತಿಯಾಗೋ ನಿರೀಕ್ಷೆ ಇದೆ.
ಇಲ್ಲಿಗೆ ಬಂದು ಬಾಗೀನ ಅರ್ಪಣೆ ಮಾಡುವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ ಗೇಟ್ ಒಡೆಯದೇ ಇದ್ರೆ, ಇವತ್ತು ನಿಗದಿಯಂತೆ ಬಾಗೀನ ಅರ್ಪಣೆ ಮಾಡಬೇಕಿತ್ತು.
ಎರಡನೇ ಬೆಳೆಗೆ ನೀರು ಇಲ್ಲಾ ಅಂದ್ರೆ ಪರಿಹಾರ ಕೊಡ್ತಿರಾ ಎಂದ ಪ್ರಶ್ನೆಗೆ ಮತ್ತೆ ಜಲಾಶಯ ತುಂಬುತ್ತದೆ ನಾನೇ ಬಾಗೀನ ಅರ್ಪಣೆ ಮಾಡುವೆ ಎಂದು ಸಿದ್ದರಾಮಯ್ಯ ‌ಹೇಳಿದರು.

Previous articleಆಂಧ್ರ ಸರಕಾರದಿಂದ ಎಲ್ಲ ಸಹಕಾರ
Next articleಇತಿಹಾಸದಲ್ಲೇ ಇದು ಮೊದಲ ಘಟನೆ