ಇಂದಿನಿಂದ ವಿಧಾನಮಂಡಲ ಅಧಿವೇಶನ.. ಸದನ ಸಮರಕ್ಕೆ ಕಾಂಗ್ರೆಸ್​, ಜೆಡಿಎಸ್, ಬಿಜೆಪಿ ಸಜ್ಜು..!

0
18

ಬೆಂಗಳೂರು: ಇಂದಿನಿಂದ ವಿಧಾನಮಂಡಲ ಅಧಿವೇಶನ ಶುರುವಾಗಲಿದ್ದು, ಸದನ ಸಮರಕ್ಕೆ ಕಾಂಗ್ರೆಸ್​, ಜೆಡಿಎಸ್, ಬಿಜೆಪಿ ಸಜ್ಜಾಗಿದೆ.

ಕೋಲಾಹಲ ಸೃಷ್ಟಿಗೆ ಕಾಂಗ್ರೆಸ್​ ಕಾದಿದ್ದು, ಸಿದ್ದು ಸರ್ಕಾರದ ಹಗರಣ ಅಸ್ತ್ರ ರೆಡಿ ಮಾಡಿದೆ ಬಿಜೆಪಿ.
ಕಾಂಗ್ರೆಸ್​, ಬಿಜೆಪಿಗೆ ಸೆಡ್ಡು ಹೊಡೆಯಲು ದಳಪತಿಗಳ ರಣತಂತ್ರ ಹೂಡಿದ್ದಾರೆ. 10 ದಿನಗಳ ಮಳೆಗಾಲದ ಅಧಿವೇಶನದಲ್ಲಿ ಗುಡುಗು-ಸಿಡಿಲು ಗ್ಯಾರೆಂಟಿಯಾಗಿದ್ದು, ಇಂದು ಅಗಲಿದ ಗಣ್ಯರಿಗೆ ಸಂತಾಪ..ಆನಂತರ ಪ್ರತಾಪ ತೋರಿಸಲಾಗುತ್ತದೆ.
ವಿಧಾನಮಂಡಲ ಅಧಿವೇಶನ ನಾಳೆಯಿಂದ ರಂಗು ಪಡೆಯಲಿದೆ. ಕಾಂಗ್ರೆಸ್​ ಸರ್ಕಾರದ ವಿರುದ್ದ ಚಾರ್ಜ್​ ಶೀಟ್​ ರೆಡಿ ಮಾಡಿದ್ದು, 40 % ಕಮಿಷನ್​ ಆರೋಪ, ಮಳೆ ಹಾನಿ ಪರಿಹಾರ ವಿಳಂಬ, ಬೆಂಗಳೂರಿನ ಮಳೆ ಅವಾಂತರ, ರಾಜಕಾಲುವೆ ಒತ್ತುವರಿ, ರಾಜ್ಯದ ಕಾನೂನು ಸುವ್ಯವಸ್ಥೆ ಸೇರಿ ಹಲವು ಅಸ್ತ್ರಗಳು ರೆಡಿಯಾಗಿದೆ. ಅರ್ಕಾವತಿ ಲೇಔಟ್ ವಿಚಾರ, PSI, ಶಿಕ್ಷಕರ ನೇಮಕಾತಿ ಪ್ರಕರಣ, ಮಳೆ ಹಾನಿಯನ್ನೇ ಪ್ರಮುಖ ಅಸ್ತ್ರ ಮಾಡಿಕೊಳ್ಳಲಿದೆ ಜೆಡಿಎಸ್.

Previous articleನಾನು ಪವರ್​​ ಮಿನಿಸ್ಟರ್​ ಆಗಿದ್ದಾಗ ಹಗರಣ ಆಗಿದ್ರೆ.. ಬಿಜೆಪಿಯವ್ರು ಆಗ ಏನ್​ ಮಾಡ್ತಿದ್ದರು
Next articleಪಿಎಸ್​ಐ ಸ್ಕ್ಯಾಮ್​ ಬಗ್ಗೆ ಪ್ರೀಯಾಂಕ್ ಖರ್ಗೆ ಸುದ್ದಿಗೋಷ್ಠಿ