Home Advertisement
Home ತಾಜಾ ಸುದ್ದಿ ಆಸ್ಪತ್ರೆಯಲ್ಲಿ ಬೆಂಕಿ ಹೊರಗೋಡಿದ ರೋಗಿಗಳು

ಆಸ್ಪತ್ರೆಯಲ್ಲಿ ಬೆಂಕಿ ಹೊರಗೋಡಿದ ರೋಗಿಗಳು

0
108

ಹಾಸನ: ಶಂಕರ ಮಠ ರಸ್ತೆಯಲ್ಲಿನ ಮಂಜುನಾಥ ಆಸ್ಪತ್ರೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಜೀವವುಳಿಸಿಕೊಳ್ಳಲು ರೋಗಿಗಳು ಹೊರಗೆ ಓಡಿ ಬಂದರು.
ಆಸ್ಪತ್ರೆಯ ಎಕ್ಸ್ ರೇ ಕೊಠಡಿಯಲ್ಲಿ ಹೊತ್ತಿಕೊಂಡ ಬೆಂಕಿಯಿಂದ ಕೆಲ ನಿಮಿಷಗಳಲ್ಲೇ ಇಡೀ ಆಸ್ಪತ್ರೆ ದಟ್ಟ ಹೊಗೆಯಿಂದ ಕೂಡಿತು. ಒಳಗಿದ್ದ ಆಸ್ಪತ್ರೆ ಸಿಬ್ಬಂದಿ ಕಿಟಕಿ ಗಾಜುಗಳನ್ನು ಒಡೆದು ಹೊಗೆ ಹೊರ ಹೋಗುವಂತೆ ಮಾಡಿದರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಅನಾಹುತ ತಪ್ಪಿಸಿದರು. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

Previous articleಹಸೆಮಣೆ ಏರಬೇಕಿದ್ದ ಯುವತಿ ಆತ್ಮಹತ್ಯೆ
Next articleಸಿಲಿಂಡರ್ ಸಿಡಿದು ಮಹಿಳೆ ಸಾವು