ಆರ್ಕಿಟೆಕ್ಟರ್ ಕೋರ್ಸ: ಸೀಟು ಹಂಚಿಕೆ OPTIONS ದಾಖಲಿಸಲು ದಿನಾಂಕ ವಿಸ್ತರಣೆ

0
10

ಆರ್ಕಿಟೆಕ್ಚರ್ ಕೋರ್ಸ್, ವೃತಿನಿರತ ಡಿಪ್ಲೊಮಾ ಅಭ್ಯರ್ಥಿಗಳಿಗೆ ಮೊದಲನೇ ಸುತ್ತಿನ ಸೀಟು ಹಂಚಿಕೆಗೆ ಆಯ್ಕೆ/ಇಚ್ಛೆಗಳನ್ನು ದಾಖಲಿಸಲು ಜುಲೈ 18ರವರೆಗೆ ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ನಿಗದಿತ ಲಿಂಕ್ ಆಯ್ಕೆ ಮಾಡಿ ಆದ್ಯತಾ ಕ್ರಮದಲ್ಲಿ ಇಚ್ಛೆಗಳನ್ನು ದಾಖಲಿಸಬೇಕು.

ಬೆಂಗಳೂರು: ಆರ್ಕಿಟೆಕ್ಟರ್ ಕೋರ್ಸಿಗೆ ಸೀಟ್ ಮ್ಯಾಟ್ರಿಕ್ಸ್ ಮತ್ತು ವೃತ್ತಿನಿರತ ಡಿಪ್ಲೊಮ ಅಭ್ಯರ್ಥಿಗಳಿಗೆ ಸೀಟ್ ಮ್ಯಾಟ್ರಿಕ್ಸ್ ಪ್ರಕಟಣೆ ಮೊದಲನೇ ಸುತ್ತಿನ ಸೀಟು ಹಂಚಿಕೆಗೆ OPTIONS ಗಳನ್ನು ದಾಖಲಿಸಲು ದಿನಾಂಕ ವಿಸ್ತರಣೆ 18-07-2024 ಸಂ.8.00 ರ ವರೆಗೆ
ದಿನಾಂಕ 16-07-2024 ರಂದು ಸರ್ಕಾರವು ನೀಡಿರುವ ಆರ್ಕಿಟೆಕ್ಟರ್ ಕೋರ್ಸಿನ ಸೀಟ್ ಮ್ಯಾಟ್ರಿಕ್ಸ್ ಮತ್ತು ವೃತ್ತಿನಿರತ ಡಿಪ್ಲೊಮ ಅಭ್ಯರ್ಥಿಗಳಿಗೆ ಸೀಟ್ ಮ್ಯಾಟ್ರಿಕ್ಸ್ ಅನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ ಹಾಗು ಮೊದಲನೇ ಸುತ್ತಿನ ಸೀಟು ಹಂಚಿಕೆಗೆ OPTIONS ಗಳನ್ನು ದಾಖಲಿಸಲು ನಾಟಾ ಅರ್ಹ ಅಭ್ಯರ್ಥಿಗಳಿಗೆ ಮತ್ತು ವೃತ್ತಿನಿರತ ಡಿಪ್ಲೊಮ ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ನಿಗದಿತ ಲಿಂಕ್ ಅನ್ನು ಆಯ್ಕೆ ಮಾಡಿ ಆದ್ಯತಾ ಕ್ರಮದಲ್ಲಿ OPTIONS ಗಳನ್ನು ದಾಖಲಿಸಬಹುದಾಗಿದೆ. ಮುಂದುವರಿದು, ಆಡಳಿತ ಮಂಡಳಿಯವರು ಸರ್ಕಾರಕ್ಕೆ ಬಿಟ್ಟುಕೊಟ್ಟ ಸೀಟುಗಳನ್ನು ಸರ್ಕಾರವು ಸೀಟ್ ಮ್ಯಾಟ್ರಿಕ್ಸ್ ಗೆ ಸೇರ್ಪಡೆಗೊಳಿಸುವ ಹಿನ್ನಲೆಯಲ್ಲಿ; ಡಿಪ್ಲೊಮ 2024 ರ ಮೊದಲನೇ ಸುತ್ತಿನ ಸೀಟು ಹಂಚಿಕೆಗೆ ಇಚ್ಛೆ / ಆಯ್ಕೆ (OPTIONS) ಗಳನ್ನು ದಾಖಲಿಸಲು 18-07-2024 ಮ. 2.00 ರ ವರೆಗೆ ದಿನಾಂಕವನ್ನು ವಿಸ್ತರಿಸಲಾಗಿದೆ. ಮೊದಲನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆಯ ನಂತರದ ವೇಳಾಪಟ್ಟಿಯನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

Previous articleರಾಜ್ಯದ ಪ್ರಪ್ರಥಮ ಡಬಲ್ ಡೆಕ್ಕರ್ ಫ್ಲೈ ಓವರ್ ಇಂದಿನಿಂದ ಸೇವೆಗೆ
Next articleದಿನಕ್ಕೊಂದು ಹಗರಣ, ಕ್ಷಣಕ್ಕೊಂದು ಅವ್ಯವಹಾರ ನಡೆಯದಿದ್ದರೆ…