ಅವಿಶ್ವಾಸ ನಿರ್ಣಯದಲ್ಲಿ ಮೋದಿ ಸರ್ಕಾರಕ್ಕೆ ಗೆಲುವು

0
20

ನವದೆಹಲಿ: ಮೋದಿ ಸರ್ಕಾರ ಅವಿಶ್ವಾಸ ನಿರ್ಣಯದಲ್ಲಿ ಗೆಲುವು ಸಾಧಿಸಿದೆ, ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಉತ್ತರ ನೀಡಿದ್ದು. ಮಣಿಪುರ ಜನರ ಜತೆ ಭಾರತ ಇದೆ. ಅಲ್ಲಿ ಮತ್ತೆ ಶಾಂತಿ, ಸುವ್ಯವಸ್ಥೆ ನೆಲೆಸಲಿದೆ. ಮಣಿಪುರ ಜನರೊಂದಿಗೆ ಭಾರತದ ಜನರಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಲು ಕ್ರಮವಹಿಸಲಾಗಿದೆ. ಸರ್ಕಾರ ಸೂಕ್ತ ಕ್ರಮಕೈಗೊಂಡಿದೆ ಎಂದು ಹೇಳುವ ಮೂಲಕ ಪ್ರಧಾನಿ ಭಾಷಣ ಮುಕ್ತಾಯಗೊಳಿಸಿದರು. ನಂತರ ನಡೆದ ಅವಿಶ್ವಾಸ ಮಂಡನೆ ಮೇಲಿನ ಮತಯಾಚನೆಯಲ್ಲಿ ಧ್ವನಿಮತದ ಮೂಲಕ ನಡೆದ ಅವಿಶ್ವಾಸ ನಿರ್ಣಯದಲ್ಲಿ ಮತ ಚಲಾಯಿಸಿದ್ದು ಪ್ರಧಾನಿ ಮೋದಿ ಸರ್ಕಾರಕ್ಕೆ ಗೆಲುವಾಯಿತು. ಮಣಿಪುರ ವಿಚಾರವಾಗಿ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದ ವಿಪಕ್ಷಗಳಿಗೆ ಸೋಲಾಗಿದೆ.

Previous articleಹಿಂಡಲಗಾ ಕಾರಾಗೃಹದ ಇಬ್ಬರು ಸಿಬ್ಬಂದಿ ಅಮಾನತು
Next articleಟ್ರ‍್ಯಾಕ್ಟರ್ ಡಿಕ್ಕಿ: ಸ್ಮಾರಕಕ್ಕೆ ಹಾನಿ