ಅಮಾನತು ಆದೇಶ ಹಿಂಪಡೆಯುವಂತೆ ಯತ್ನಾಳ್‌ ಪತ್ರ

0
20

ಬೆಂಗಳೂರು: ವಿಧಾನಸಭೆಯಿಂದ ಅಮಾನತುಗೊಂಡ 18 ಬಿಜೆಪಿ ಶಾಸಕರ ಪರವಾಗಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ಪೀಕರ್‌ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಬಿಜೆಪಿಯಿಂದ ಉಚ್ಚಾಟನೆಯಾದರೂ ಪಕ್ಷ ನಿಷ್ಠ ಬಿಡದ ಯತ್ನಾಳ್‌ ಅವರು ಸರ್ಕಾರವನ್ನು ಟೀಕಿಸುವುದು, ಹಿಂದುತ್ವದ ಪರ ಮಾತನಾಡುವುದನ್ನು ನಿಲ್ಲಿಸಿಲ್ಲ. ಬಿಜೆಪಿ ಶಾಸಕರ ಪರವಾಗಿ ದನಿ ಎತ್ತಿದ್ದಾರೆ. ಅವರ ಅಮಾನತು ಮಾಡಿರುವ ಕ್ರಮವನ್ನು ಮರು ಪರಿಶೀಲನೆ ಮಾಡವಂತೆ ಕೋರಿದ್ದಾರೆ.
ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “18 ಶಾಸಕರ ಅಮಾನತು ಹಿಂಪಡೆಯುವಂತೆ ಒತ್ತಾಯಿಸಿ ಕರ್ನಾಟಕ ವಿಧಾನಸಭೆಯ ಗೌರವಾನ್ವಿತ ಸ್ಪೀಕರ್ ಅವರಿಗೆ ಪತ್ರ ಬರೆದಿದ್ದೇನೆ. ಏಕೆಂದರೆ ಅವರಲ್ಲಿ ಹೆಚ್ಚಿನವರು ಮೊದಲ ಬಾರಿಗೆ ಶಾಸಕರು. ಅವರ ಮೇಲೆ ಅಮಾನತು ಅತಿಯಾದ ಮತ್ತು ಕಠಿಣ ಕ್ರಮವಾಗಿದೆ ” ಎಂದು ತಿಳಿಸಿದ್ದಾರೆ.

Previous articleಪ್ರಯತ್ನ ವಿಫಲವಾಗಬಹುದು, ಪ್ರಾರ್ಥನೆ ವಿಫಲವಾಗುವುದಿಲ್ಲ…
Next articleಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ