ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

0
39

ಬಾಗಲಕೋಟೆ(ಇಳಕಲ್): ಅಪರಿಚಿತ ವಾಹನ ಡಿಕ್ಕಿ ಹೊಡೆದು ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಸೋಲಾಪುರ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ೫೦ರ ಅಗ್ನಿಶಾಮಕ ದಳದ ಕಚೇರಿಯ ಎದುರು ನಡೆದಿದೆ.
ಹುನಗುಂದ ತಾಲೂಕಿನ ಅಮರಾವತಿ ಗ್ರಾಮದ ಯುವಕ ಮಂಜುನಾಥ ಕಂಬಳಿ(೨೩) ಎಂಬಾತ ತನ್ನ ಬೈಕ್ ಮೇಲೆ ಇಳಕಲ್‌ನತ್ತ ಬರುತ್ತಿದ್ದಾಗ ಹೈವೇಯಲ್ಲಿ ಹೊರಟ ಲಾರಿ ಯುವಕನ ಬೈಕಿಗೆ ಗುದ್ದಿ ಪರಾರಿಯಾಗಿದೆ. ಲಾರಿ ಹಾಯ್ದ ಪರಿಣಾಮವಾಗಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಕುರಿತು ಇಳಕಲ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleವಿಧಾನ ಪರಿಷತ್ ಸ್ಥಾನದಿಂದ ನಾರಾಯಣ ಸ್ವಾಮಿ ಅನರ್ಹಗೊಳಿಸುವಂತೆ ರಾಜ್ಯಪಾಲರಿಗೆ ಮನವಿ
Next articleಸಿದ್ದರಾಮಯ್ಯ ವಿರುದ್ಧ ಯಾರೂ ಮಾತನಾಡಿಲ್ಲ