ಅಪಘಾತ: ತಂದೆ-ಮಗ ಸಾವು

0
16

ಗದಗ: ಸಮೀಪದ ಲಕ್ಕುಂಡಿ ಗ್ರಾಮದಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ ಮತ್ತು ಕಾರು ಮಧ್ಯೆ ನಡೆದ ಅಪಘಾತದಲ್ಲಿ ತಂದೆ ಮತ್ತು ಪುತ್ರ ಸಾವನ್ನಪ್ಪಿದ ದಾರುಣ ಘಟನೆ ವರದಿಯಾಗಿದೆ.
ಮೃತರನ್ನು ಹೊಸಪೇಟೆಯ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ.ಎಚ್. ಬಾಲರಾಜ್(64), ಖಾಸಗಿ ಕಾಲೇಜಿನಲ್ಲಿ ಅಧ್ಯಾಪಕರಾಗಿರುವ ಡಾ.ವಿನಯ(28) ಎಂದು ಗುರುತಿಸಲಾಗಿದೆ. ಕಾರು ಹೊಸಪೇಟೆಯಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿತ್ತು. ಗದಗನಿಂದ ಕೊಪ್ಪಳ ಕಡೆಗೆ ಸಾಗುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. ಕಾರು ಬಸ್ಸು ಡಿಕ್ಕಿಯಲ್ಲಿ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆಂದು ಮೂಲಗಳು ತಿಳಿಸಿವೆ. ಗದಗ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Previous articleಕಾರ್ಪೆಂಟರ್ ಆದ ರಾಹುಲ್
Next articleದೇಶದಲ್ಲಿ 1,000 ಖೇಲೋ ಇಂಡಿಯಾ ಕೇಂದ್ರ