ಅಜ್ಜಿ ಮೊಮ್ಮಕ್ಕಳ ಅಂತಿಮ ಸಂಸ್ಕಾರ

0
28


ಸಂ.ಕ. ಸಮಾಚಾರ, ದೇರಳಕಟ್ಟೆ: ಮಳೆ ದುರಂತದಿಂದ ಸಾವನ್ನಪ್ಪಿದ ಅಜ್ಜಿ ಪ್ರೇಮಾ, ಮಕ್ಕಳಾದ ಆರ್ಯನ್, ಆರುಷ್ ಅಂತಿಮ ಸಂಸ್ಕಾರ ದುರಂತ ಘಟಿಸಿದ ಸ್ಥಳದಿಂದ ಸ್ವಲ್ಪ ದೂರದಲ್ಲೇ ಖಾಲಿ ಜಾಗದಲ್ಲಿ ಇಂದು ನಡೆಯಿತು.
ಮಕ್ಕಳಿಬ್ಬರನ್ನು ಮಣ್ಣಿನಲ್ಲಿ ದಫನ ಮಾಡಲಾಯಿತು. ಪ್ರೇಮಾ ಅವರ ಅಂತಿಮ ಸಂಸ್ಕಾರವೂ ಸ್ಥಳದಲ್ಲೇ ನಡೆಯಿತು. ಈ ಸಂದರ್ಭದಲ್ಲಿ ಕುಟುಂಬಸ್ಥರು, ಬಂಧು ಮಿತ್ರರು ಪಾಲ್ಗೊಂಡಿದ್ದರು. ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಇಂತಹ ಪರಿಸ್ಥಿತಿ ಯಾರಿಗೂ ಬಾರದಿರಲಿ ಎಂಬ ಪ್ರಾರ್ಥನೆ ದುಃಖಿತರ ಅಂತರಾಳದಿಂದ ಹೊರ ಬರುತ್ತಿತ್ತು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೀತಾರಾಮ ಅವರ ಪತ್ನಿ ಅಶ್ವಿನಿ ಅವರ ಕಾಲು ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಕಾಂತಪ್ಪ ಪೂಜಾರಿ ಹಾಗೂ ಅಶ್ವಿನಿ ಅವರ ಚಿಕಿತ್ಸೆ ಮುಂದುವರಿದಿದೆ.

Previous articleಚಿಕ್ಕಮಗಳೂರಿನಿಂದ ತಿರುಪತಿಗೆ ರೈಲು
Next articleಬೆಂಗಳೂರು – ವಿಜಯಪುರ ರೈಲು ಪ್ರಯಾಣ: ಸೋಮಣ್ಣ ಜೊತೆ ಎಂ ಬಿ ಪಾಟೀಲ್ ಮಾತುಕತೆ