ಬೆಂಗಳೂರು: ವಿಕಿಪೀಡಿಯಾ ಖ್ಯಾತಿಯ ವಿಕಾಸ್ ಅಂಧನಾಗಿ ನಟ ಜಗ್ಗೇಶ್ ಅವರಿಗೆ ಕಥೆ ಹೇಳಿದ್ದಾರೆ.
ಹೌದು… ಈ ತರಹದ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ನವರಸನಾಯಕ ಜಗ್ಗೇಶ್ ಅಭಿನಯದ ರಂಗನಾಯಕ ಸಿನಿಮಾ ಪ್ರಚಾರಕ್ಕಾಗಿ ವಿಕ್ಕಿಪೀಡಿಯಾದ ವಿಕಾಸ್ ಜತೆ ಒಂದು ವಿಡಿಯೋ ಮಾಡಿದ್ದಾರೆ. ವಿಡಿಯೋ ಆರಂಭದಲ್ಲೇ ಕಥೆ ಹೇಳಲು ಬರುವ ನಾಣಿ ಮಗ ಮಾಣಿ (ವಿಕಿಪೀಡಿಯಾ ವಿಕಾಸ್) ಅಂದನಾಗಿ ಕಥೆ ಹೇಳುವ ಮೂಲಕ ಹಲವು ಸಂದೇಶದ ಕಚುಗಳಿ ಇಡುತ್ತಾ ರಂಗನಾಯಕ ಸಿನಿಮಾದ ಪ್ರಮೋಷನ್ ಮಾಡಿದ್ದಾರೆ. ಗುರುಪ್ರಸಾದ್ ನಿರ್ದೇಶನದ ಈ ಸಿನಿಮಾ ಮಾರ್ಚ್ 8 ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ನೀವು ಒಮ್ಮೆ ಹಾಸ್ಯಭರಿತ ದೃಶ್ಯ ನೋಡಿ…