ಶಿವಮೊಗ್ಗ: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಯಶವಂತಪುರದಿಂದ ಶಿವಮೊಗ್ಗ ಮಾರ್ಗವಾಗಿ ತಾಳಗುಪ್ಪಗೆ ಹೆಚ್ಚುವರಿ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
ಪ್ರಯಾಣಿಕರ ಹೆಚ್ಚಿದ ಬೇಡಿಕೆಯನ್ನು ಪೂರೈಸುವ ಸಲುವಾಗಿ ರೈಲು ಗಾಡಿ ಸಂಖ್ಯೆ 06584 / 06588 ಯಶವಂತಪುರ-ತಾಳಗುಪ್ಪ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಪ್ರತಿ ದಿಕ್ಕಿನಲ್ಲಿ ತಲಾ ಎರಡು ಹೆಚ್ಚುವರಿ ಟ್ರಿಪ್‌ಗಳಿಗೆ ನೈಋತ್ಯ ರೈಲ್ವೆಯು ವಿಸ್ತರಿಸಿದೆ.
ರೈಲು ಗಾಡಿ ಸಂಖ್ಯೆ 06587 ಯಶವಂತಪುರ-ತಾಳಗುಪ್ಪ ವಿಶೇಷ ಎಕ್ಸ್‌ಪ್ರೆಸ್ ರೈಲು ಆಗಸ್ಟ್ 1 ಮತ್ತು 8 ರಂದು (ಶುಕ್ರವಾರ) ಯಶವಂತಪುರದಿಂದ ರಾತ್ರಿ 10.30 ಕ್ಕೆ ಹೊರಟು ಮರುದಿನ (ಶನಿವಾರ) ಬೆಳಗಿನ ಜಾವ 4.15 ಕ್ಕೆ ತಾಳಗುಪ್ಪ ತಲುಪಲಿದೆ. ಈ ರೈಲು ತುಮಕೂರು (11:18 PM), ತಿಪಟೂರು (12:13 AM), ಅರಸೀಕೆರೆ (12:33 AM) ಬೀರೂರು (01:13 AM), ತರಿಕೇರೆ (1:43 AM), ಭದ್ರಾವತಿ (02:00 AM), ಶಿವಮೊಗ್ಗ ಟೌನ್ (02:20 AM), ಆನಂದಪುರಂ (03:10 AM) ಮತ್ತು ಜಂಬಗಾರು (03:35 AM) ನಿಲ್ದಾಣಗಳಲ್ಲಿ ಆಗಮಿಸಿ, ನಿರ್ಗಮಿಸಲಿದೆ.
ಅದೇ ರೀತಿ ರೈಲು ಗಾಡಿ ಸಂಖ್ಯೆ 06588 ತಾಳಗುಪ್ಪ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಆಗಸ್ಟ್ 2 ಮತ್ತು 9 (ಶನಿವಾರ) ತಾಳಗುಪ್ಪದಿಂದ ಬೆಳಿಗ್ಗೆ 8.15 ಕ್ಕೆ ಹೊರಟು, ಅದೇ ದಿನ ಸಂಜೆ 4.50 ಕ್ಕೆ ಯಶವಂತಪುರ ತಲುಪಲಿದೆ.
ಮಾರ್ಗ ಮಧ್ಯೆ ಈ ರೈಲು ಸಾಗರ ಜಂಬಗಾರು (08:30 AM), ಆನಂದಪುರಂ (09:00 AM), ಶಿವಮೊಗ್ಗ ಟೌನ್ (09:45 AM), ಭದ್ರಾವತಿ (10:15 AM), ತರೀಕೆರೆ (10:30 AM), ಬೀರೂರು (11:00 AM), ಅರಸೀಕೆರೆ (12:00 PM), ತಿಪಟೂರು (12:28 PM) ಮತ್ತು ತುಮಕೂರು (03:18 PM) ನಿಲ್ದಾಣಗಳಲ್ಲಿ ಆಗಮಿಸಲಿದೆ.
ಈ ರೈಲು ಎರಡೂ ಮಾರ್ಗದಲ್ಲಿ ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಆನಂದಪುರಂ ಮತ್ತು ಸಾಗರ ಜಂಬಗಾರು ರೈಲು ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿದೆ.
ಮುಂಗಾರು ಮಳೆ ಸುರಿಯುತ್ತಿದ್ದು ಪ್ರವಾಸಿ ತಾಣಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿವೆ. ವಿಶ್ವ ವಿಖ್ಯಾತ ಜೋಗ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು ಇದನ್ನು ನೋಡಲು ಪ್ರವಾಸಿಗರು ಬರುತ್ತಿದ್ದಾರೆ. ಅಲ್ಲದೇ ಮಲೆನಾಡಿನ ಸೊಬಗನ್ನು ಕಣ್ತುಂಬಿಕೊಳ್ಳಲು ಬರುತ್ತಿರುವ ಪ್ರವಾಸಿಗರ ಸಂಖ್ಯೆ ಪ್ರತಿದಿನವೂ ಹೆಚ್ಚುತ್ತಿದೆ. ಹೀಗಾಗಿ ನೈಋತ್ಯ ರೈಲ್ವೆ ಪ್ರಯಾಣಿಕರಿಗೆ ಹೆಚ್ಚುವರಿ ಎಕ್ಸ್‌ಪ್ರೆಸ್ ರೈಲುಗಳನ್ನು ನೀಡಿದ್ದು ಪ್ರಯಾಣಿಕರು ಕೂಡ ಅನುಕೂಲವಾಗಲಿದೆ.