ಅಭಿಮಾನಿಗಳಿಗೆ ಕ್ಷಮೆ ಕೋರಿದ ದರ್ಶನ್
ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜನುಮದಿನಕ್ಕೆ ಇನ್ನು ೦8 ದಿನಗಳು ಬಾಕಿ ಇರುವಂತೆ ತಮ್ಮ ಸೆಲೆಬ್ರಿಟಿ (ಅಭಿಮಾನಿಗಳಿಗೆ) ಕ್ಷಮೆ ಕೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ಹಂಚಿಕೊಂಡಿರುವ ಅವರು ‘ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಇದೊಂದು ವರ್ಷ ಕ್ಷಮಿಸಿಬಿಡಿ ಎಂದಿದ್ದಾರೆ, ಫೆಬ್ರವರಿ 16ರಂದು ಜನ್ಮದಿನ ಆಚರಿಸಿಕೊಳ್ಳಲ್ಲ ನನಗೆ ಬೆನ್ನು ನೋವು ಇದೆ. ತುಂಬಾ ಹೊತ್ತು ನಿಲ್ಲೋಕೆ ಆಗಲ್ಲ. ನಿಮಗೆ ಧನ್ಯವಾದ ಹೇಳಬೇಕು ಎನ್ನುವ ಆಸೆ ನನಗೂ ಇದೆ ಇದೊಂದು ವರ್ಷ ಕ್ಷಮಿಸಿಬಿಡಿ’ ಎಂದು ಅವರು ಕೋರಿದ್ದು, ‘ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ. ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಕ್ಷಮೆ ಇರಲಿ’ ಎಂದು ದರ್ಶನ್ ತಮ್ಮ ಅಭಿಮಾನಿಗಳಿಗೆ ವಿಡಿಯೋ ಮೂಲಕ ಸಂದೇಶ ತಿಳಿಸಿದ್ದಾರೆ.