ಬೆಂಗಳೂರು: #IPL2025 ರ RCBಯ ಮೊದಲ ತವರು ಪಂದ್ಯಕ್ಕೆ, ನಗರದ ಚಿನ್ನಸ್ವಾಮಿಗೆ ನಿಮ್ಮನ್ನು ಸ್ವಾಗತಿಸಲು ನಾವು ಕಾತರದಿಂದ ಕಾಯುತ್ತಿದ್ದೇವೆ ಎಂದು ಆರ್‌ಸಿಬಿ ತಿಳಿಸಿದೆ,
ಇತ್ತಿಚೆಗೆ ನಡೆದ #RCBUnbox ಕೇವಲ ಟ್ರೇಲರ್ ಆಗಿತ್ತು. ಸಂಪೂರ್ಣ ಸಿನಿಮಾಗಾಗಿ ನಿಮ್ಮ ಟಿಕೆಟ್‌ಗಳನ್ನು ಪಡೆಯಿರಿ, ಐಪಿಎಲ್ 18ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತವರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿರುವ ಪಂದ್ಯಗಳ ಆನ್‌ಲೈನ್ ಟಿಕೆಟ್ ಇಂದಿನಿಂದ ಲಭ್ಯವಾಗಿವೆ, ಆರಂಭಿಕ 4 ಪಂದ್ಯಗಳ ಟಿಕೆಟ್‌ಗಳನ್ನು ಮಾತ್ರ ಆರ್‌ಸಿಬಿ ಫ್ರಾಂಚೈಸಿಯ ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿಸಬಹುದಾಗಿದೆ. #RCBvGT ಗಾಗಿ ಟಿಕೆಟ್‌ಗಳು ಇಂದು RCB ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ ಎಂದು ತಿಳಿಸಿದೆ.