100 ಕೋಟಿ ಕ್ಲಬ್ ಸೇರಿದ ಕನ್ನಡಿಗರ ಸಿನಿಮಾ ‘ಮಹಾವತಾರ ನರಸಿಂಹ’

0
188

ಕನ್ನಡ ಚಿತ್ರರಂಗದ ದ್ವಿತೀಯಾರ್ಧ ಹೊಸ ಹುಮ್ಮಸ್ಸನ್ನು ನೀಡಿದೆ, ಜುಲೈ ಆರಂಭದಲ್ಲಿ ಎಕ್ಕ, ಜ್ಯೂನಿಯರ್‌, ಸು ಫ್ರಾಮ್‌ಸೋ ನಂತಹ ಚಿತ್ರಗಳು ಪ್ರೇಕ್ಷಕರನ್ನು ಸಿನಿಮಾ ಮಂದಿರಕ್ಕೆ ಸಾಗರೋಪಾದಿಯಲ್ಲಿ ಬರುವಂತೆ ಮಾಡಿವೆ. ಇದೇ ಗೆಲುವಿನ ನಾಗಲೋಟದಲ್ಲಿ ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ನಿಂದ ಭಾರತೀಯ ಸಿನಿಮಾರಂಗದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದು, ಅವರ ಹೊಸ ಅನಿಮೇಷನ್ ಚಿತ್ರ ʻಮಹಾವತಾರ ನರಸಿಂಹ’  ಬಿಡುಗಡೆಗೊಂಡ ಹತ್ತೇ ದಿನದಲ್ಲಿ ಬಾಕ್ಸ್‌ಆಫೀಸ್‌ನಲ್ಲಿ ಕೋಟಿ ಕೋಟಿ ಗಳಿಕೆ ಕಂಡಿದೆ.

ಹೊಂಬಾಳೆ ಫಿಲ್ಮ್ಸ್‌ರವರ ಚಿತ್ರ ‘ಮಹಾವತಾರ ನರಸಿಂಹ’, ಅಶ್ವಿನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿದ್ದು, ಭಾರತದಲ್ಲೇ ಅತಿ ಹೆಚ್ಚು ಗಳಿಕೆ ಕಂಡ ಅನಿಮೇಷನ್ ಚಲನಚಿತ್ರ ಎಂಬ ಇತಿಹಾಸ ಬರೆದಿದೆ. ಸನಾತನ ಮೌಲ್ಯಗಳ ಜತೆಗೆ ಜಾಗತಿಕ ಗುಣಮಟ್ಟದ ಕಥಾ ನಿರೂಪಣೆಯನ್ನು ಬೆಸೆದುಕೊಂಡಿರುವ ಈ ಚಿತ್ರ ಮಕ್ಕಳಿಂದ ದೊಡ್ಡವರವರೆಗೆ ಎಲ್ಲರ ಮನಸೂರೆಗೊಂಡಿದೆ.

ಪುರಾಣ ಕಥೆಗಳಿಗೆ ಹೊಸ ದೃಶ್ಯವೈಭವ ನೀಡಿದ್ದು, ಈ ಚಿತ್ರ ಎಲ್ಲರ ಹೃದಯದಲ್ಲಿ ಶಾಶ್ವತವಾಗಿ ದೃಶ್ಯವನ್ನು ಸೃಷ್ಟಿಸಲು ಯಶಸ್ವಿಯಾಗಿದೆ. ಕರ್ನಾಟಕ ಮೂಲದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಪವರ್‌ಸ್ಟಾರ್‌ಪುನೀತ್‌’ರಾಜಕುಮಾರ’ ಚಿತ್ರದ ಮೂಲಕ ತನ್ನ ಯಶಸ್ಸಿನ ಪಯಣ ಆರಂಭಿಸಿತು. ಸದಾ ಕೌಟುಂಬಿಕ ಮೌಲ್ಯಗಳು, ಸಂಪ್ರದಾಯ ಮತ್ತು ಭಾವನಾತ್ಮಕ ಕಥೆಗಳಿಗೆ ಒತ್ತು ನೀಡುತ್ತಲೇ, ಭಾರತೀಯ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದೆ.

ಜಯಪೂರ್ಣ ದಾಸ್ ಮತ್ತು ರುದ್ರ ಪ್ರತಾಪ್ ಘೋಷ್ ಸಹ-ಬರೆಹ ಬರೆದಿರುವ ‘ಮಹಾವತಾರ ನರಸಿಂಹ’ ತನ್ನ ಅನಿಮೇಷನ್ ಗುಣಮಟ್ಟ, ಆಧ್ಯಾತ್ಮಿಕ ವಿಷಯಗಳು ಮತ್ತು ಆಕರ್ಷಕ ಕಥೆ ಹೇಳುವಿಕೆಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಶಂಸೆ ಗಳಿಸುತ್ತಿದೆ. ಅಶ್ವಿನ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಮತ್ತು ಕ್ಲೀಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ಶಿಲ್ಪಾ ಧವನ್, ಕುಶಾಲ್ ದೇಸಾಯಿ ಮತ್ತು ಚೈತನ್ಯ ದೇಸಾಯಿ ನಿರ್ಮಿಸಿದ್ದಾರೆ. ಇದು ಅದ್ಭುತ ದೃಶ್ಯಗಳು ಮತ್ತು ಆಕರ್ಷಕ ನಿರೂಪಣೆಯನ್ನು ಸಹ ಒಳಗೊಂಡಿದೆ.

ಈ ಚಿತ್ರ ಜುಲೈ 25 ರಂದು ಬಿಡುಗಡೆಯಾಗಿ ಕೇವಲ 5 ದಿನಗಳಲ್ಲಿ BookMyShow ಮೂಲಕ 1 ಮಿಲಿಯನ್ ಟಿಕೆಟ್ ಮಾರಾಟವನ್ನು ತಲುಪುವಲ್ಲಿ ಯಶಸ್ವಿಯಾಗಿತ್ತು. ಇತ್ತೀಚೆಗೆ ಈ ಸಿನಿಮಾ 2 ಮಿಲಿಯನ್ ಟಿಕೆಟ್ ಹಂತದಲ್ಲಿ ಇದ್ದು, ಒಟ್ಟು 2 ಮಿಲಿಯನ್ ಟಿಕೆಟ್ ಮಾರಾಟವನ್ನು ತಲುಪಿದ ಮೊದಲ ಚಿತ್ರವಾಗಿದೆ. ಕನ್ನಡ, ಹಿಂದಿ, ತಮಿಳು, ಮಲಯಾಲಂ, ತೆಲುಗು ಭಾಷೆಗಳಲ್ಲಿ ಬಿಡುಗಡೆಗೊಂಡ ಚಿತ್ರವು ಕೇವಲ 10 ದಿನಗಳಲ್ಲಿ 91 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ವಿಶ್ವ ಬಾಕ್ಸ್ ಆಫೀಸ್​ನಲ್ಲಿ 100 ಕೋಟಿ ರೂಪಾಯಿ ಗಡಿ ತಲುಪಲಿದೆ. ಈ ಚಿತ್ರದ ಬಜೆಟ್ ಕೇವಲ 5 ಕೋಟಿ ರೂ. ಎಂದು ಹೇಳಲಾಗಿದೆ. ಈ ಚಿತ್ರವು IMDb ನಲ್ಲಿ 9.6 ರೇಟಿಂಗ್ ಪಡೆದಿದೆ. ಈ ರೇಟಿಂಗ್ ಭಾರತದಲ್ಲಿ ತಯಾರಾದ ಚಿತ್ರಕ್ಕೆ ಸಿಕ್ಕ ಅತ್ಯಧಿಕ ರೇಟಿಂಗ್ ಆಗಿದೆ.

Previous articleಧರ್ಮಸ್ಥಳದ ಅವಹೇಳನ: ಪ್ರತಿಭಟನೆಗೆ ಸಿದ್ಧವಾದ ಜೈನ ಸಮಾಜ
Next articleನೇಹಾ ಹತ್ಯೆ: ಜಾಮೀನು ಅರ್ಜಿ ವಜಾ, ಹಂತಕನಿಗೆ ಜೈಲೂಟವೇ ಗತಿ

LEAVE A REPLY

Please enter your comment!
Please enter your name here