ಬೆಂಗಳೂರಲ್ಲಿ ಜನರ ಸಂಚಾರಕ್ಕೆ ಸ್ಮಾರ್ಟ್‌ ಯೋಜನೆ, ವಿವರಗಳು

0
112

ಬೆಂಗಳೂರು: ಬೆಂಗಳೂರು ನಗರದ ಸಂಚಾರ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ, ಬೆಂಗಳೂರು ಮಹಾನಗರವು MadeForBLR: Mobility Blueprint 2030 ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಯ ಉದ್ದೇಶ 2030ರ ಒಳಗೆ ಬೆಂಗಳೂರಿನಲ್ಲಿ ಶೇ 70ರಷ್ಟು ಜನರು ಸಾರ್ವಜನಿಕ ಸಾರಿಗೆ ಬಳಸುವಂತೆ ಉತ್ತೇಜಿಸುವುದು.

ಈ ಯೋಜನೆಯ ಪ್ರಮುಖ ಅಂಶ ಮೆಟ್ರೋ ಟಿಕೆಟ್‌ ಬುಕ್ ಮಾಡುವುದು ಮತ್ತು ರೈಲುಗಳನ್ನು ಟ್ರ್ಯಾಕ್ ಮಾಡುವುದರಿಂದ ಹಿಡಿದು, ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕಕ್ಕಾಗಿ ಆಟೋ ಸವಾರಿ ಬುಕ್ ಮಾಡುವವರೆಗೆ ಸಹಾಯ ನೀಡುವುದು.

ನಮ್ಮ ಟ್ರಾನ್ಸಿಟ್ ಒಂದು-ನಿಲುಗಡೆ ಪರಿಹಾರವನ್ನು ನೀಡುತ್ತದೆ. ಪ್ರಯಾಣದ ಸುಲಭತೆ ಮತ್ತು ಅನುಕೂಲತೆ ಉತ್ತೇಜಿಸುತ್ತದೆ. ಬಿಎಂಟಿಸಿ ಮತ್ತು ಮೆಟ್ರೋ ಸೇವೆ ಮಾಹಿತಿ ಸಾರ್ವಜನಿಕ ಸಾರಿಗೆ ಬಳಕೆದಾರರು ಮೊಬೈಲ್‌ ಆಪ್‌ ಮೂಲಕ ತಾವು ಹೋಗಬೇಕಾದ ಸ್ಥಳಗಳಿಗೆ ಸುಲಭವಾಗಿ ಪ್ರಯಾಣ ಮಾಡಲು ಅನುಕೂಲ ಕಲ್ಪಿಸಲಿದೆ.

Enroute Mobility Challenge ಹೆಸರಿನ ಸ್ಪರ್ಧೆಯ ಮೂಲಕ Tummoc ಮತ್ತು Namma Yatri ಎಂಬ ಎರಡು ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್‌ಗಳಲ್ಲಿ ನಿಖರವಾದ ಬಸ್, ಮೆಟ್ರೋ ವೇಳಾಪಟ್ಟಿ, ನಿಖರ ಲೈವ್ ಟ್ರ್ಯಾಕಿಂಗ್‌ ಹಾಗೂ ಟಿಕೆಟ್ ಬುಕ್ಕಿಂಗ್, ಕೊನೆಯ ಮೈಲಿನ ಸಂಪರ್ಕದ ಮಾಹಿತಿ ಎಲ್ಲೂ ದೊರೆಯಲಿದೆ.

ಈ ಯೋಜನೆಯು WRI India, ITS Bengaluru, MBRDI, ಮತ್ತು Villgro ಸಂಸ್ಥೆಗಳ ಸಹಭಾಗಿತ್ವದೊಂದಿಗೆ ರೂಪುಗೊಂಡಿದ್ದು, ಸರ್ಕಾರದ “Brand Bengaluru” ಅಭಿಯಾನದ ಭಾಗವಾಗಿದೆ. ದೈನಂದಿನ ಪ್ರಯಾಣವನ್ನು ಸ್ಮಾರ್ಟ್, ವೇಗ ಮತ್ತು ಹೆಚ್ಚು ಪ್ರಯಾಣಿಕ ಸ್ನೇಹಿಯನ್ನಾಗಿ ಮಾಡಲು ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿರುವುದಾಗಿ ರೈಡ್-ಹೇಲಿಂಗ್ ಅಪ್ಲಿಕೇಶನ್ ನಮ್ಮ ಯಾತ್ರಿ ತಿಳಿಸಿದೆ.

ನಮ್ಮ ಟ್ರಾನ್ಸಿಟ್ ಎಂದು ಕರೆಯಲ್ಪಡುವ ಈ ವೈಶಿಷ್ಟ್ಯವು ಮೆಟ್ರೋ, ಆಟೋಗಳು ಮತ್ತು ಕ್ಯಾಬ್‌ಗಳ ರಿಯಲ್ ಟೈಂ ಮಾಹಿತಿ ನೀಡಲಿದೆ. ಯಾವ ಮೆಟ್ರೋ ನಿಲ್ದಾಣಕ್ಕೆ ಹೋಗಬೇಕು, ಯಾವ ಪ್ಲಾಟ್‌ಫಾರ್ಮ್ ಮತ್ತು ಗೇಟ್ ಅನ್ನು ಬಳಸಬೇಕು ಮತ್ತು ಎಲ್ಲಿ ಇಂಟರ್ ಚೇಂಜ್ ಮಾಡಬೇಕು ಎಂದು ಮಾಹಿತಿ ಬೆರಳ ತುದಿಯಲ್ಲಿ ಸಿಗಲಿದೆ.

ಏಕೀಕೃತ, ಮಲ್ಟಿಮೋಡಲ್ ಪ್ಲಾಟ್‌ಫಾರ್ಮ್ ಪ್ರಸ್ತುತ ಬಳಕೆದಾರರಿಗೆ ಲಭ್ಯವಿದೆ ಮತ್ತು ಒಂದು ವಾರದಲ್ಲಿ ಎಲ್ಲಾ ಬಳಕೆದಾರರಿಗೆ ಇದನ್ನು ಬಿಡುಗಡೆ ಮಾಡಲಾಗುತ್ತದೆ. ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಸುಲಭವಾಗಿ ಮತ್ತು ಆಕರ್ಷಕವಾಗಿ ಮಾಡುವುದು ಇದರ ಉದ್ದೇಶ.

2030ರೊಳಗೆ ಶೇ 70ರಷ್ಟು ಜನರು ಪ್ರಯಾಣಕ್ಕಾಗಿ ಸಾರ್ವಜನಿಕ ಸಾರಿಗೆ ಬಳಕೆಗೆ ಪ್ರೇರೆಪಿಸುವುದು, ಎಲ್ಲ ಬಸ್-ಮೆಟ್ರೋ ಸೇವೆಗಳ ಡಿಜಿಟಲೀಕರಣಗೊಳಿಸುವುದು, ಐಟಿ ಆಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆ, ಎಲೆಕ್ಟ್ರಿಕ್ ವಾಹನ ಬಳಕೆ ಉತ್ತೇಜಿಸುವುದು ಆಗಿದೆ.

Previous articleಥೈಲ್ಯಾಂಡ್ ಪ್ರವಾಸ: ಭಾರತೀಯರಿಗೆ ಮುನ್ನೆಚ್ಚರಿಕೆ ಕೊಟ್ಟ ರಾಯಭಾರ ಕಚೇರಿ
Next articleSky Deck Bengaluru: ಡಿಕೆಶಿ ಕನಸಿನ ಯೋಜನೆ ಬಿಡಿಎಗೆ ಹಸ್ತಾಂತರ

LEAVE A REPLY

Please enter your comment!
Please enter your name here