KSRTC ಬಸ್‌ನಲ್ಲೇ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ

0
51

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕುಟುಂಬಸ್ಥರ ಆಕ್ರೋಶ

ಬೆಳಗಾವಿ: ಡ್ಯೂಟಿ ಬದಲಿಸಲಿಲ್ಲ ಎಂದು ಕೆಎಸ್‌ಆರ್‌ಟಿಸಿ ಮೆಕ್ಯಾನಿಕ್ ಬಸ್‌ನಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬೆಳಗಾವಿಯ ಡಿಪೋ 1 ರಲ್ಲಿ ಅಳ್ನಾವರ್ ಬೆಳಗಾವಿ ಬಸ್‌ನಲ್ಲಿ ಸಾರಿಗೆ ಸಂಸ್ಥೆಯ ಮೆಕ್ಯಾನಿಕಲ್‌ ಸಿಬ್ಬಂದಿ ಕೆ.ಟಿ. ಕಮಡೊಳ್ಳಿ(58) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ, ನಗರ ಕೇಂದ್ರ ಬಸ್ ನಿಲ್ದಾಣದ ಡಿಪೋ 1ದಲ್ಲಿ ಮಾ.7ರ ಶುಕ್ರವಾರ ಮಧ್ಯರಾತ್ರಿ ನಡೆದಿದೆ.
ಬೆಳಗಾವಿಯ ಹಳೆ ಗಾಂಧಿ ನಗರದ ನಿವಾಸಿ ಕೇಶವ್, ಬಸ್ ವಾಶಿಂಗ್‌ನಲ್ಲಿ ಬಸ್‌ಗಳ ಪಂಚರ್‌ ತೆಗೆಯುವ ಕೆಲಸ‌ ಮಾಡುತ್ತಿದ್ದರು. ಬೆನ್ನು ನೋವಿದ್ದರೂ ಸಹ ಪಂಚರ್ ತೆಗೆಯುವ ಕೆಲಸವನ್ನು ಅಧಿಕಾರಿಗಳು ಹಚ್ಚಿದ್ದರು, ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದ ಕಮಡೊಳ್ಳಿ ಹಗುರವಾದ ಕೆಲಸ ನೀಡುವಂತೆ ಹಾಗೂ ಡ್ಯೂಟಿ ಬದಲಿಸುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಳ್ಳುತ್ತಿದ್ದರು. ಆದರೆ ಇದಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿರಲಿಲ್ಲ. ಡಿಪೋ ಮ್ಯಾನೇಜರ್ ಲಿಂಗರಾಜ್ ಲಾಠಿ, ಸಹಾಯಕ ಕಾರ್ಯ ಅಧೀಕ್ಷಕ ಅನಿಲ್ ಬಾಂದೇಕರ್‌ಗೆ ಕುಟುಂಬಸ್ಥರು ಮನವಿ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಮಾನಸಿಕ ಒತ್ತಡ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತನ ಪತ್ನಿ ಆರೋಪಿಸಿದ್ದಾರೆ. ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Previous articleಪ್ರೊ. ಸಿದ್ದಲಿಂಗ ಪಟ್ಟಣಶೆಟ್ಟರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Next articleನಾಳೆ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ