ಹುತಾತ್ಮ ಅರಣ್ಯ ರಕ್ಷಕರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಬೊಮ್ಮಾಯಿ

0
19

ಬೆಂಗಳೂರು: ಹುತಾತ್ಮ ಅರಣ್ಯ ರಕ್ಷಕರ ಕುಟುಂಬಕ್ಕೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು 50 ಲಕ್ಷ ರೂ‌ ಗೆ ಏರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಘೋಷಿಸಿದ್ದಾರೆ. ಇಂದು ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ‘ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ 2022’ ರಲ್ಲಿ ಭಾಗವಹಿಸಿ ಮಹತ್ವದ ಘೋಷಣೆ ಮಾಡಿದ್ದಾರೆ.

ಈ ವರ್ಷ ಅರಣ್ಯ ಹೆಚ್ಚಿಸಲು ‌ವಿಶೇಷ‌ ಕಾರ್ಯಕ್ರಮಗಳನ್ನ‌ು ಇಲಾಖೆ‌ ಮಾಡಿದೆ. ಅರಣ್ಯ ಇಲಾಖೆಯ ಸೇವೆಗೆ ಅಭಿನಂದನೆ ಸಲ್ಲಿಸುತ್ತೇನೆ. ಶೇ. 21ರಷ್ಟಿರುವ ಅರಣ್ಯವನ್ನ‌ು ಶೇ.30 ಕ್ಕೆ ಹೆಚ್ಚಿಸುವುದು ನಮ್ಮ ಗುರಿ. ಬಂಜರು ಭೂಮಿ, ‌ಗುಡ್ಡ‌ಗಾಡುಗಳಲ್ಲಿ‌ ಗಿಡ‌ಮರ ಬೆಳೆಸಬೇಕು ಎಂದು ಸಿಎಂ ಮನವಿ ಮಾಡಿದರು.

Previous articleಸಿಎಂ ಪತ್ರಿಕಾ ಸಂಯೋಜಕರಾಗಿದ್ದ ಗುರುಲಿಂಗಸ್ವಾಮಿ ಅವರನ್ನ ನೆನೆದು ಭಾವುಕರಾದ; ಸಿಎಂ ಬೊಮ್ಮಾಯಿ..!
Next articleಬಳ್ಳಾರಿಯಲ್ಲಿ ಡಿಕೆಶಿಗೆ ಸೇಬಿನ ಹಾರ, ಸೇಬಿಗಾಗಿ ಮುಗಿಬಿದ್ದ ಜನರು