ಮುರುಘಾ ಶ್ರೀ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ

0
46

ಬೆಂಗಳೂರು: ಚಿತ್ರದುರ್ಗ ಮರುಘಾ ಮಠದ ಶ್ರೀಗಳ ವಿರುದ್ಧ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಹಿಂದುಸ್ತಾನ್ ಜನತಾ ಪಕ್ಷ ಒತ್ತಾಯಿಸಿದೆ.

ಈ ಬಗ್ಗೆ ಹಿಂದುಸ್ತಾನ್ ಜನತಾ ಪಕ್ಷ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಹರೀಶ್ ಸುಧೀರ್ಘ ಪತ್ರ ಬರೆದಿದ್ದಾರೆ. ರಾಜ್ಯದ ಪ್ರತಿಷ್ಠಿತ ಮಠಗಳಲ್ಲಿ ಒಂದಾಗಿರುವ ಮುರುಘಾ ಶ್ರೀ ಮಠದ ಸ್ವಾಮೀಜಿಗಳ ಮೇಲೆ ಬಂದಿರುವಂತಹ ಲೈಂಗಿಕ ದೌರ್ಜನ್ಯದ ತನಿಖೆ ಸೂಕ್ತ ಮಟ್ಟದಲ್ಲಿ ನಡೆಯುತ್ತಿಲ್ಲ ಎನ್ನುವುದು, ಸಾರ್ವಜನಿಕರಲ್ಲಿ ಅನುಮಾನ ವ್ಯಕ್ತವಾಗುತ್ತಿದೆ. ಆದ್ದರಿಂದ ಈ ಕೇಸನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಹಿಂದುಸ್ತಾನ್ ಜನತಾ ಪಕ್ಷದಿಂದ ಒತ್ತಾಯಿಸಿದೆ.

Previous articleಕೆಲವೊಮ್ಮೆ ಟೀಕೆಗಳು ನಮ್ಮ ಸಂಕಲ್ಪವನ್ನ ಇನ್ನೂ ಗಟ್ಟಿಗೊಳಿಸುತ್ತವೆ : ಪ್ರತಾಪ್​ ಸಿಂಹ..!
Next articleಧರ್ಮಾತೀತವಾಗಿ ಬೆಳೆದಿರೋದು ಬೆಂಗಳೂರಿನ ಶಕ್ತಿ ವರ್ಣಿಸಲು ನೂರು ಪದಗಳು ಸಾಕಾಗಲ್ಲ;ಅಶ್ವತ್ಥ್​​ ನಾರಾಯಣ