ನನ್ನ ಚಿತ್ರ–ಧ್ವನಿಯನ್ನು ದುರುಪಯೋಗ ಮಾಡಿ ನಕಲಿ ಹೂಡಿಕೆ ಪ್ರಚಾರ: ಸುಧಾ ಮೂರ್ತಿ
ಬೆಂಗಳೂರು: ರಾಜ್ಯಸಭಾ ಸದಸ್ಯೆ, ಲೇಖಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಸುಧಾ ಮೂರ್ತಿ ಅವರ ಹೆಸರು, ಚಿತ್ರ ಮತ್ತು ಧ್ವನಿಯನ್ನು ದುರುಪಯೋಗಪಡಿಸಿಕೊಂಡು ಹಣಕಾಸು ಯೋಜನೆಗಳು ಮತ್ತು ಹೂಡಿಕೆಗಳನ್ನು ಪ್ರಚಾರ ಮಾಡುವ ನಕಲಿ (ಡೀಪ್‌ಫೇಕ್) ವೀಡಿಯೊಗಳು ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿವೆ ಎಂದು ಸುಧಾ ಮೂರ್ತಿ ಅವರು ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸ್ವತಃ ವಿಡಿಯೋ ಸಂದೇಶವನ್ನು ಹಂಚಿಕೊಂಡಿರುವ ಸುಧಾ ಮೂರ್ತಿ, “ನನ್ನ ಅರಿವಿಲ್ಲದೆ ಅಥವಾ ನನ್ನ ಒಪ್ಪಿಗೆಯಿಲ್ಲದೆ ಈ ವೀಡಿಯೊಗಳನ್ನು ರಚಿಸಲಾಗಿದೆ. ಇವು ಸಂಪೂರ್ಣವಾಗಿ ನಕಲಿ ಡೀಪ್‌ಫೇಕ್‌ಗಳಾಗಿವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಸುನೀತಾ ವಿಲಿಯಮ್ಸ್ ನಾಸಾದಿಂದ ನಿವೃತ್ತಿ: 27 ವರ್ಷಗಳ ಬಾಹ್ಯಾಕಾಶ ಸೇವೆಗೆ ಗುಡ್‌ಬೈ
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಸ್ಪಷ್ಟನೆ: ತಮ್ಮ ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಸುಧಾ ಮೂರ್ತಿ, ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಕೆಲವು ವೀಡಿಯೊಗಳಲ್ಲಿ ತಮ್ಮ ಮುಖಭಾವ, ಧ್ವನಿ ಮತ್ತು ಹೆಸರು ಬಳಸಿ, ಹಣಕಾಸು ಯೋಜನೆಗಳು, ಹೂಡಿಕೆ ಸಲಹೆಗಳು, ವೇಗವಾಗಿ ಲಾಭ ನೀಡುವ ಆಮಿಷಗಳ ಕುರಿತಂತೆ ಪ್ರಚಾರ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇಂತಹ ವೀಡಿಯೊಗಳಿಗೆ ತಮ್ಮ ಯಾವುದೇ ಸಂಬಂಧವಿಲ್ಲ ಎಂದು ಅವರು ಖಡಾಖಂಡಿತವಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Smart Energyಯ ಪ್ರಮುಖ ಕೇಂದ್ರವಾಗಿ ಕರ್ನಾಟಕ ರೂಪುಗೊಳ್ಳಲಿದೆ
“ಈ ವೀಡಿಯೊಗಳನ್ನು ನಂಬಿ ಹಣಕಾಸು ನಿರ್ಧಾರ ಕೈಗೊಳ್ಳಬೇಡಿ”: ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಸುಧಾ ಮೂರ್ತಿ, “ಈ ಮೋಸದ ವೀಡಿಯೊಗಳನ್ನು ಆಧರಿಸಿ ಯಾವುದೇ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಇವು ಸಂಪೂರ್ಣವಾಗಿ ವಂಚನೆಗೆ ಸಂಬಂಧಿಸಿದವು” ಎಂದು ಮನವಿ ಮಾಡಿದ್ದಾರೆ.
ಹಣ ಹೂಡಿಕೆ, ಬ್ಯಾಂಕ್ ವ್ಯವಹಾರಗಳು ಅಥವಾ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವ ಮೊದಲು ಅಧಿಕೃತ ಮೂಲಗಳ ಮೂಲಕ ಮಾಹಿತಿಯನ್ನು ಪರಿಶೀಲಿಸುವಂತೆ ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ದೇಶಿ ಕೈಗಾರಿಕೆಗೆ ಬಲ: ಪ್ರತಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ಗುರಿ
ಅನುಮಾನಾಸ್ಪದ ವಿಷಯ ಕಂಡರೆ ವರದಿ ಮಾಡಲು ಕರೆ: ಡೀಪ್‌ಫೇಕ್ ಮತ್ತು ಆನ್‌ಲೈನ್ ವಂಚನೆಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಾಮಾನ್ಯ ನಾಗರಿಕರು ಹೆಚ್ಚು ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಿರುವ ಸುಧಾ ಮೂರ್ತಿ, “ನೀವು ಇಂತಹ ಯಾವುದೇ ಅನುಮಾನಾಸ್ಪದ ವೀಡಿಯೊಗಳು ಅಥವಾ ಸಂದೇಶಗಳನ್ನು ಕಂಡರೆ, ಅವುಗಳನ್ನು ತಕ್ಷಣ ಸಂಬಂಧಿಸಿದ ಸಾಮಾಜಿಕ ಜಾಲತಾಣ ಅಥವಾ ಅಧಿಕಾರಿಗಳಿಗೆ ವರದಿ ಮಾಡಿ” ಎಂದು ಮನವಿ ಮಾಡಿದ್ದಾರೆ.
ಡೀಪ್‌ಫೇಕ್ ಅಪಾಯ ಹೆಚ್ಚುತ್ತಿರುವ ಆತಂಕ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ರಚಿಸಲಾಗುವ ಡೀಪ್‌ಫೇಕ್ ವೀಡಿಯೊಗಳು, ಪ್ರಸಿದ್ಧ ವ್ಯಕ್ತಿಗಳ ಮುಖ ಹಾಗೂ ಧ್ವನಿಯನ್ನು ಹೋಲುವಂತೆ ತಯಾರಾಗಿ, ಜನರನ್ನು ತಪ್ಪು ದಾರಿಗೆಳೆಯುವ ಹಾಗೂ ಹಣಕಾಸು ವಂಚನೆ ನಡೆಸುವ ಮತ್ತು ನಂಬಿಕೆ ದುರುಪಯೋಗಪಡಿಸಿಕೊಳ್ಳುವ ಗಂಭೀರ ಅಪಾಯವಾಗುತ್ತಿದೆ.
ಇದನ್ನೂ ಓದಿ: ದೇಶಿ ಕೈಗಾರಿಕೆಗೆ ಬಲ: ಪ್ರತಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ಗುರಿ
ಸಾರ್ವಜನಿಕ ವಲಯದಲ್ಲಿ ಗೌರವ ಪಡೆದಿರುವ ವ್ಯಕ್ತಿಗಳನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿರುವ ಇಂತಹ ವಂಚನೆಗಳ ವಿರುದ್ಧ ಸಾಮಾಜಿಕ ಜಾಗೃತಿ ಮತ್ತು ಕಾನೂನು ಕ್ರಮ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ: ಈ ಘಟನೆ, “ಆನ್‌ಲೈನ್‌ನಲ್ಲಿ ಕಾಣಿಸುವ ಎಲ್ಲವೂ ಸತ್ಯವಲ್ಲ” (ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು) ಎಂಬಂತೆ “ವೀಡಿಯೊ ಇದ್ದರೂ ಪರಿಶೀಲನೆ ಅಗತ್ಯ” ಎಂಬ ಕಠಿಣ ಸತ್ಯವನ್ನು ಮತ್ತೊಮ್ಮೆ ನೆನಪಿಸಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು, ಯಾವುದೇ ಆಮಿಷಗಳಿಗೆ ಒಳಗಾಗದೆ ವಿವೇಕದಿಂದ ನಿರ್ಧಾರ ಕೈಗೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.





















