Home Advertisement
Home ಸುದ್ದಿ ರಾಜ್ಯ KEA ನೇಮಕಾತಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ

KEA ನೇಮಕಾತಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ

0
95

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ವು ಕಲ್ಯಾಣ ಕರ್ನಾಟಕ ವೃಂದದ ವಿವಿಧ ನಿಗಮ/ಮಂಡಳಿಗಳ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ನೀಡಿದ್ದು, ಲಿಖಿತ ಪರೀಕ್ಷೆಗಳ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.

ಬೆಂಗಳೂರು ಜಲಮಂಡಳಿ (BWSSB), ಕರ್ನಾಟಕ ರಾಜ್ಯ ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಕಾರ್ಪೊರೇಷನ್ (KSSIDC), ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS) ಸೇರಿದಂತೆ ವಿವಿಧ ಸಂಸ್ಥೆಗಳ ಹುದ್ದೆಗಳ ಭರ್ತಿಗೆ ಪರೀಕ್ಷೆಗಳು ನಡೆಯಲಿವೆ.

ಏಪ್ರಿಲ್ 26ಕ್ಕೆ ಮೊದಲ ಹಂತದ ಪರೀಕ್ಷೆ: KEA ಪ್ರಕಟಿಸಿದ ವೇಳಾಪಟ್ಟಿಯ ಪ್ರಕಾರ, KSSIDC ಮತ್ತು BWSSB ಸಂಸ್ಥೆಗಳಲ್ಲಿನ ವ್ಯವಸ್ಥಾಪಕರು (Managers), ಸಹಾಯಕ ವ್ಯವಸ್ಥಾಪಕರು (Assistant Managers) ಸಹಾಯಕ ಎಂಜಿನಿಯರ್ (Electrical), ಹುದ್ದೆಗಳಿಗೆ ಏಪ್ರಿಲ್ 26ರಂದು ಲಿಖಿತ ಪರೀಕ್ಷೆ ನಡೆಯಲಿದೆ.

ಮೇ 10ರಂದು ಎರಡನೇ ಹಂತದ ಪರೀಕ್ಷೆ: ಮುಂದಿನ ಹಂತದಲ್ಲಿ, RGUHS, KSSIDC, BWSSB, ಹಾಗೂ ಕೃಷಿ ಮಾರಾಟ ಇಲಾಖೆಯ ವಿವಿಧ ಹುದ್ದೆಗಳಿಗೆ ಸಾಮಾನ್ಯ ಜ್ಞಾನ (General Knowledge) ಮತ್ತು ನಿರ್ದಿಷ್ಟ ವಿಷಯಗಳ ಪ್ರಶ್ನಾಪತ್ರಿಕೆಗಳೊಂದಿಗೆ ಮೇ 10ರಂದು ಪರೀಕ್ಷೆ ನಡೆಸಲಾಗುತ್ತದೆ.

ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು: KEA ಕಾರ್ಯನಿರ್ವಾಹಕ ನಿರ್ದೇಶಕ ಹೆ. ಪ್ರಸನ್ನ ನೀಡಿರುವ ಸೂಚನೆಗಳ ಪ್ರಕಾರ ಪರೀಕ್ಷಾ ಕೇಂದ್ರಗಳಲ್ಲಿ ಮುಖ ಚಹರೆ ಗುರುತಿಸುವ ತಂತ್ರಜ್ಞಾನ (Face Recognition) ಬಳಸಿ ಪರಿಶೀಲನೆ ನಡೆಯಲಿದೆ. ಆದ್ದರಿಂದ ಅಭ್ಯರ್ಥಿಗಳು ಕನಿಷ್ಠ 2 ಗಂಟೆಗಳ ಮೊದಲು ಕೇಂದ್ರಕ್ಕೆ ಹಾಜರಾಗಬೇಕು. ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನ (Negative Marking) ಇರುತ್ತದೆ. ಉತ್ತರಿಸದೇ ಇರುವ ಪ್ರಶ್ನೆಗಳಿಗೆ ಕೊನೆಯ ಬೆಲ್ ನಂತರ ಹೆಚ್ಚುವರಿ 5 ನಿಮಿಷ ನೀಡಲಾಗುತ್ತದೆ. ಯಾವುದೇ ಆಯ್ಕೆಯನ್ನು ಗುರುತಿಸದಿದ್ದರೆ ಪ್ರತಿ ಪ್ರಶ್ನೆಗೆ 1/4 ಅಂಕ ಕಡಿತ ಮಾಡಲಾಗುತ್ತದೆ ಎಂದು KEA ಸ್ಪಷ್ಟಪಡಿಸಿದೆ.

ಈ ವೇಳಾಪಟ್ಟಿ ಪ್ರಕಟವಾದ ಹಿನ್ನೆಲೆಯಲ್ಲಿ, ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಲ್ಲಿ ಚಟುವಟಿಕೆ ಹೆಚ್ಚಾಗಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಈ ನೇಮಕಾತಿಯನ್ನು ಮಹತ್ವದ ಅವಕಾಶವಾಗಿ ಪರಿಗಣಿಸಿದ್ದಾರೆ.

KEA ಪ್ರಕಟಿಸಿರುವ ಹೊಸ ನಿಯಮಗಳು ಮತ್ತು ತಾಂತ್ರಿಕ ಕ್ರಮಗಳು ಪರೀಕ್ಷಾ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ಕಟ್ಟುನಿಟ್ಟಾಗಿಸಲು ಸಹಾಯ ಮಾಡಲಿವೆ.