“Zero Bills Homes” ಮಾದರಿ: V2G (Vehicle to Grid) ತಂತ್ರಜ್ಞಾನಕ್ಕೆ ಒತ್ತು
ಬೆಂಗಳೂರು: ಭಾರತದ ಸ್ಮಾರ್ಟ್ ಎನರ್ಜಿ ನವೀನತೆಯ ಪ್ರಮುಖ ಕೇಂದ್ರವಾಗಿ ಕರ್ನಾಟಕ ಹೊರಹೊಮ್ಮಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಗ್ರಿಡ್ ದಕ್ಷತೆ, ಬೇಡಿಕೆ–ಪೂರೈಕೆ ಸಮತೋಲನ ಮತ್ತು ನವೀಕರಿಸಬಹುದಾದ ಇಂಧನ ಏಕೀಕರಣಕ್ಕೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಆಕ್ಟೋಪಸ್ ಎನರ್ಜಿ (Octopus Energy) ಸಂಸ್ಥೆಯ ಸಹಸ್ಥಾಪಕರಾದ ಸ್ಟುವರ್ಟ್ ಜ್ಯಾಕ್ಸನ್ ಅವರೊಂದಿಗೆ ಸಚಿವರು ಸುದೀರ್ಘ ಹಾಗೂ ಆಳವಾದ ತಾಂತ್ರಿಕ ಚರ್ಚೆ ನಡೆಸಿದ್ದಾರೆ.
ಸ್ಮಾರ್ಟ್ ಮೀಟರಿಂಗ್ ಮತ್ತು ಡಿಜಿಟಲ್ ಎನರ್ಜಿ ಪ್ಲಾಟ್‌ಫಾರ್ಮ್‌ಗಳ ಚರ್ಚೆ: ಈ ಚರ್ಚೆಯಲ್ಲಿ, ಸ್ಮಾರ್ಟ್ ಮೀಟರಿಂಗ್ ವ್ಯವಸ್ಥೆ. ಡಿಜಿಟಲ್ ಎನರ್ಜಿ ಪ್ಲಾಟ್‌ಫಾರ್ಮ್‌ಗಳು. ಡೈನಾಮಿಕ್ ಟ್ಯಾರಿಫ್ ಮಾದರಿಗಳು. ಮೂಲಕ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ದಕ್ಷ, ಪಾರದರ್ಶಕ ಮತ್ತು ಗ್ರಾಹಕ ಸ್ನೇಹಿಯಾಗಿ ರೂಪಿಸುವ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.
ಇದನ್ನೂ ಓದಿ: ದೇಶಿ ಕೈಗಾರಿಕೆಗೆ ಬಲ: ಪ್ರತಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ಗುರಿ
ಇಂತಹ ತಂತ್ರಜ್ಞಾನ ಆಧಾರಿತ ಪರಿಹಾರಗಳು, ವಿದ್ಯುತ್ ಗ್ರಿಡ್ ಮೇಲಿನ ಒತ್ತಡ ಕಡಿಮೆ ಮಾಡುವುದು ಅಲ್ಲದೆ ಬೇಡಿಕೆ ಮತ್ತು ಪೂರೈಕೆಯನ್ನು ಸಮತೋಲನದಲ್ಲಿಡುವುದು ಸೇರಿದಂತೆ ನವೀಕರಿಸಬಹುದಾದ ಇಂಧನವನ್ನು ಪರಿಣಾಮಕಾರಿಯಾಗಿ ಗ್ರಿಡ್‌ಗೆ ಸೇರಿಸುವುದು ಎಂಬ ಪ್ರಮುಖ ಗುರಿಗಳನ್ನು ಸಾಧಿಸಲು ಸಹಕಾರಿಯಾಗಲಿವೆ ಎಂದು ಸಚಿವರು ಅಭಿಪ್ರಾಯಪಟ್ಟರು.
V2G (Vehicle to Grid) ತಂತ್ರಜ್ಞಾನಕ್ಕೆ ಒತ್ತು: Octopus Energy ಕಂಪನಿಯ ನಿಯೋಗದೊಂದಿಗೆ, ವಿಹಿಕಲ್ ಟು ಗ್ರಿಡ್ (V2G) ತಂತ್ರಜ್ಞಾನ ಕುರಿತಾದ ವಿಚಾರ ವಿನಿಮಯವೂ ನಡೆಯಿತು. ಈ ತಂತ್ರಜ್ಞಾನದಲ್ಲಿ, ವಿದ್ಯುತ್ ವಾಹನಗಳ ಬ್ಯಾಟರಿಗಳನ್ನು ವಿದ್ಯುತ್ ಗ್ರಿಡ್‌ನ ಭಾಗವಾಗಿಸಿ ಅಗತ್ಯವಿರುವಾಗ ಗ್ರಿಡ್‌ಗೆ ವಿದ್ಯುತ್ ಹಿಂತಿರುಗಿಸುವ ವ್ಯವಸ್ಥೆ ಅಳವಡಿಸಲಾಗುತ್ತದೆ. ಇದರಿಂದ, ವಿದ್ಯುತ್ ಬೇಡಿಕೆ ಗರಿಷ್ಠವಾಗಿರುವ ಸಮಯದಲ್ಲಿ ಗ್ರಿಡ್ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದಾಗಿದೆ.
ಇದನ್ನೂ ಓದಿ: ಸುನೀತಾ ವಿಲಿಯಮ್ಸ್ ನಾಸಾದಿಂದ ನಿವೃತ್ತಿ: 27 ವರ್ಷಗಳ ಬಾಹ್ಯಾಕಾಶ ಸೇವೆಗೆ ಗುಡ್‌ಬೈ
“Zero Bills Homes” ಮಾದರಿ: ಭವಿಷ್ಯದ ಗೃಹ ವಸತಿ ಚರ್ಚೆಯ ಮತ್ತೊಂದು ಪ್ರಮುಖ ಅಂಶವಾಗಿದ್ದು, Octopus Energy ಸಂಸ್ಥೆಯ “Zero Bills Homes” ಮಾದರಿ ಆಗಿದೆ. ಈ ಮಾದರಿಯಲ್ಲಿ, ವಿತರಣಾ ಮಟ್ಟದಲ್ಲಿ ಡಿಜಿಟಲ್ ನಿಯಂತ್ರಣ ಹಾಗೂ ಎನರ್ಜಿ ಸಂಗ್ರಹಣಾ ವ್ಯವಸ್ಥೆ. ಸ್ಮಾರ್ಟ್ ಉಪಕರಣಗಳ ಸಂಯೋಜನೆಗಳ ಮೂಲಕ ನೆಟ್-ಜೀರೋ ಗೃಹ ವಸತಿ ಗುರಿ ಸಾಧಿಸುವ ಯೋಜನೆ ಇದೆ.
ಇದು ಯಶಸ್ವಿಯಾಗಿ ಜಾರಿಯಾದಲ್ಲಿ, ಗ್ರಾಹಕರ ವಿದ್ಯುತ್ ಬಿಲ್‌ಗಳಲ್ಲಿ ಗಣನೀಯ ಉಳಿತಾಯವಾಗುವದಲ್ಲದೆ, ಪರಿಸರ ಸ್ನೇಹಿ ಜೀವನಶೈಲಿಯಲ್ಲಿ ರಾಜ್ಯದ ಕಾರ್ಬನ್ ಉತ್ಸರ್ಗದಲ್ಲಿ ಇಳಿಕೆ ಸಾಧ್ಯವಾಗಲಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Lokayan 2026: INS ಸುದರ್ಶಿನಿ 13 ದೇಶಗಳ 18 ಬಂದರುಗಳಿಗೆ ಭೇಟಿ
BESCOM ಜತೆ ಚರ್ಚೆಗೆ ಭರವಸೆ: ಈ ಎಲ್ಲಾ ತಂತ್ರಜ್ಞಾನಗಳ ಅನುಷ್ಠಾನ ಕುರಿತು ಮುಂದಿನ ಹಂತದ ಚರ್ಚೆಗಾಗಿ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಜತೆ ಮಾತುಕತೆ ನಡೆಸಲು ಅನುಕೂಲ ಕಲ್ಪಿಸುವ ಭರವಸೆಯನ್ನು ಸಚಿವ ಎಂ.ಬಿ. ಪಾಟೀಲ ನೀಡಿದ್ದಾರೆ. ಕರ್ನಾಟಕವನ್ನು ಸ್ಮಾರ್ಟ್ ಎನರ್ಜಿ, ಗ್ರೀನ್ ಟೆಕ್ನಾಲಜಿ, ನವೀನ ವಿದ್ಯುತ್ ಪರಿಹಾರಗಳ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲೂ ಮುಂಚೂಣಿಯ ರಾಜ್ಯವಾಗಿ ರೂಪಿಸುವ ಉದ್ದೇಶ ಸರ್ಕಾರಕ್ಕಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.






















