ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಹೊತ್ತಿನಲ್ಲಿ ಬಿಜೆಪಿ ಪಕ್ಷದಿಂದ ಉಚ್ಛಾಟನೆಯಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಾಗಲಕೋಟೆಯಲ್ಲಿ ಪ್ರಚಾರ ಮಾಡಬೇಕು ಎಂಬ ಕೂಗು ಬಿಜೆಪಿ ಪಕ್ಷದಿಂದ ಕೇಳಿ ಬರುತ್ತಿದೆ.
ಉಪಚುನಾವಣೆಯಲ್ಲಿ ಹಿಂದೂ ಫೈರ್ ಬ್ರಾಂಡ್ ಯತ್ನಾಳ್ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಬಾಗಲಕೋಟಿಯಲ್ಲಿ ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು ಅವರು ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಒಪ್ಪಿಕೊಂಡಿದ್ದೀವಿ, ಇವತ್ತು ಕೂಡ ನಾವು ಅವರನ್ನು ನಮ್ಮ ನಾಯಕರು ಅಂತಾ ಇದ್ದೀವಿ. ಬೇರೆ ಬೇರೆ ಕಾರಣಗಳಿಂದ ಅವರು ಪ್ರಚಾರಕ್ಕೆ ಹೋಗದಿರುವುದರಿಂದ ನಮ್ಮ ಹಿಂದೂ ಪರ ಕಾರ್ಯಕರ್ತರೆಲ್ಲರೂ ಬಸನಗೌಡ ಪಾಟೀಲ್ ಯತ್ನಾಳ್ ಬನ್ನಿ ಎನ್ನುವ ಕಾರಣಕ್ಕೆ ಒತ್ತಾಯ ಮಾಡುತ್ತಿರುವ ಕಾರಣ ಇಂಥ ಪರಿಸ್ಥಿತಿಯಲ್ಲೂ ಕೂಡ ಅವರು ಬಂದರೆ ನಮಗೆ ಶಕ್ತಿನೇ ಎಂದಿದ್ದಾರೆ.
ಮುಂದುವರೆದು ನಮ್ಮ ರಾಜ್ಯಾಧ್ಯಕ್ಷರಿಗೂ ಯಾವುದೇ ರೀತಿಯಲ್ಲಿ ಇವರು ಬರಬಾರದು ಅವರು ಬರಬಾರದು ಎನ್ನುವುದು ಇಲ್ಲ. ನಮ್ಮ ಪಕ್ಷದ ಸಂಗಮ ಸರಿ ಇದೆ. ಭಾರತೀಯ ಜನತಾ ಪಾರ್ಟಿಯ ಎಲ್ಲಾ ಜಿಲ್ಲೆಗಳ ಎಲ್ಲ ನಾಯಕರು, ಸಚಿವರು ಕೂಡ ಸಂಗಮ ಆಗಿ ಚುನಾವಣೆ ಮಾಡುತ್ತಿದ್ದೇವೆ. ಇವತ್ತು ಕೂಡಲಸಂಗಮದಲ್ಲಿ ನಮ್ಮ ಎಲ್ಲ ಭಾರತೀಯ ಜನತಾ ಪಾರ್ಟಿ ನಾಯಕರೆಲ್ಲರೂ ಕೂಡ ಸಂಗಮ ಆಗಿ ಚುನಾವಣೆ ಮಾಡುತ್ತಿದ್ದೆವೋ ಅವರು ಬೇರೆ ಬೇರೆ ಕಾರಣಗಳಿಂದ ಟೆಕ್ನಿಕಲಿ ಪ್ರಾಬ್ಲಂ ಇರುವ ಕಾರಣ ಇಂಥಾ ಪರಿಸ್ಥಿತಿ ಇರುವ ಕಾರಣ ಎಂಬ ಯೋಚನೆ ಇದೆ. ನಮ್ಮೆಲ್ಲರ ಮನಸ್ಸಿನಲ್ಲಿ ಬಸನಗೌಡ ಪಾಟೀಲ್ ಯತ್ನಾಳ ಬರುವುದರಿಂದ ಪಾರ್ಟಿಗೆ ಲಾಭ ಆಗುತ್ತೆ ಎಂದು ಹೇಳಿದ್ದಾರೆ.
ಇದೇ ವೇಳೆ, ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ಯತ್ನಾಳ್ ಅವರು ಇದಕ್ಕಿಂತ ಮುಂಚೆ ಪಾರ್ಟಿಯಿಂದ ಉಚ್ಛಾಟನೆಯಾಗಿದ್ದಾರೆ. ಅವರಿಗೂ ಕೂಡ ಎಲ್ಲೋ ಒಂದು ಕಡೆ ಇರುಸು ಮುರಿಸು ಇರಬಹುದು ಎಂದಿದ್ದಾರೆ. ಅವರು ದೊಡ್ಡ ನಾಯಕರಿದ್ದಾರೆ, ಎಲ್ಲರೂ ಸೇರಿ ಕೆಲಸ ಮಾಡುವುದಕ್ಕೆ ರೆಡಿ ಇದ್ದೇವೆ.
ಹೆಚ್.ವೈ ಮೇಟಿ ಸಾಹೇಬರ ಅಕಾಲಿಕ ಮರಣದಿಂದ ಉಪ ಚುನಾವಣೆ ನಡೆಯುತ್ತಿದೆ. ಅವರು ಬೇರೆ ಬೇರೆ ಕಾರಣಗಳಿಂದ ದೂರ ಇದ್ದರು, ಅವತ್ತು ಬಿಟ್ಟುಕೊಟ್ಟಿಲ್ಲ ಯತ್ನಾಳ್ ಅವರನ್ನು ಇವತ್ತು ಬಿಟ್ಟುಕೊಟ್ಟಿಲ್ಲ, ಯಾವತ್ತೂ ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ಯಾರು ಇಲ್ಲ ಅಂತ ಅಲ್ಲಾ ಅವರು ಬಂದರೆ ತಪ್ಪು ಏನು ಎಂದು ಶ್ರೀರಾಮುಲು ಪ್ರಶ್ನೆ ಮಾಡಿದ್ದಾರೆ.






















