ಉಡಾನ್ ಯೋಜನೆಯಡಿ ಅನುದಾನ: ಕರ್ನಾಟಕದ 7 ಕಡೆ ಜಲವಿಮಾನ ನಿಲ್ದಾಣ

0
8

ಎನ್. ಜಯಚಂದ್ರನ್

ಉತ್ತರ ಕನ್ನಡ (ದಾಂಡೇಲಿ): ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮತ್ತು ದಾಂಡೇಲಿ ಸಮೀಪದ ಗಣೇಶಗುಡಿಯ ಕಾಳಿ ನದಿಯ ಹಿನ್ನೀರಿನಲ್ಲಿ ಎರಡು ಸೇರಿದಂತೆ ರಾಜ್ಯದ 7 ಕಡೆಗಳಲ್ಲಿ ಕೇಂದ್ರ ಸರ್ಕಾರದ ಉಡಾನ್ 5.5 ಯೋಜನೆಯಡಿ ಜಲ ವಿಮಾನ ನಿಲ್ದಾಣ ನಿರ್ಮಿಸಲು ಕೇಂದ್ರ ಅನುಮತಿ ನೀಡಿದೆ.

ಕಾರವಾರದ ಕಾಳಿ ನದಿಯ ಸಂಗಮ ಪ್ರದೇಶ ಮತ್ತು ದಾಂಡೇಲಿಯ ಕಾಳಿ ಜಲ ವಿದ್ಯುತ್ ಯೋಜನೆಗೆ ಸಂಬಂಧಿಸಿದ ಸೂಪಾ ಜಲಾಶಯ ಪ್ರದೇಶವನ್ನು ಜಲ ವಿಮಾನ ನಿಲ್ದಾಣಕ್ಕಾಗಿ ಆಯ್ಕೆ ಮಾಡಲಾಗಿದೆ. ಇದು ಸಣ್ಣ ವಿಮಾನಗಳು, ಹೆಲಿಕಾಪ್ಟರ್‌ಗಳು, ಸಿ ಪ್ಲೇನ್‌ಗಳ ಮೂಲಕ 80ಕ್ಕೂ ಹೆಚ್ಚು ಜಲಮೂಲಗಳು, 400ಕ್ಕೂ ಹೆಚ್ಚು ಹೆಲಿಪ್ಯಾಡ್‌ಗಳು ಮತ್ತು ಇತರ ಪ್ರಾದೇಶಿಕ ವಿಮಾನ ನಿಲ್ದಾಣಗಳನ್ನು ಸಂಪರ್ಕಿಸಲು ಮಾರ್ಗಗಳನ್ನು ಅಭಿವೃದ್ಧಿಪಡಿಸಲು ವಿಮಾನಯಾನ ಸಂಸ್ಥೆಗಳಿಗೆ ಅವಕಾಶ ನೀಡುತ್ತದೆ.

ಉಡಾಣ್ ದೂರದ ಗುಡ್ಡಗಾಡು, ದ್ವೀಪ ಪ್ರದೇಶಗಳಿಗೆ ಅಂತಿಮ ಮೈಲಿ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಉಡಾನ್ ಹೊಂದಿದೆ. ಈ ಯೋಜನೆಯು ಪ್ರಾದೇಶಿಕ ಸಂಪರ್ಕವನ್ನು ಸುಧಾರಿಸುವ ಮೂಲಕ ಆರ್ಥಿಕ ಬೆಳವಣಿಗೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಈ ಯೋಜನೆಯಿಂದಾಗಿ ಕಾರವಾರ ಮತ್ತು ದಾಂಡೇಲಿ ಪ್ರವಾಸೋದ್ಯಮದಲ್ಲಿ ಮಹತ್ತರವಾದ ಚೇತರಿಕೆ ಕಂಡುಬರಲಿದೆ. ಸೂಪಾ ಜಲಾಶಯದ ಹಿನ್ನೀರನ್ನು ಈ ಯೋಜನೆಗೆ ಬಳಸಲಾಗುತ್ತದೆ.

ಜಲ ವಿಮಾನ ಎಂದರೇನು?: ಒಂದು ನದಿಯಿಂದ ಮತ್ತೊಂದು ನದಿಗೆ ವಿಮಾನ ನೀರಿನ ಮೇಲೆ ಇಳಿಯುವುದು. ಈ ವಿಮಾನ ನದಿ, ಜಲಾಶಯದಲ್ಲಿ ನಿರ್ಮಿಸಿರುವ ಜಟ್ಟಿಯಲ್ಲಿ (ರನ್ ವೇ) ಇಳಿಯುತ್ತದೆ ಮತ್ತು ಸಮೀಪದ ಏರ್‌ಪೋರ್ಟ್‌ಗಳಲ್ಲಿ ಕೂಡ ವಿಮಾನ ಇಳಿಸಬಹುದಾಗಿದೆ. ಈ ವಿಮಾನಗಳು ಎರಡೂ ರೀತಿಯಲ್ಲಿ ಇಳಿಯುತ್ತದೆ. ಈ ಜಾಗದಲ್ಲಿ ಪರಿಸರ ಮಾಲಿನ್ಯ ಉಂಟಾಗುವುದಿಲ್ಲ. ಇದಕ್ಕೆ 1.5 ಕಿ.ಮೀ. ಉದ್ದ, 10 ಅಡಿ ಆಳದ ಅವಶ್ಯಕತೆ ಇದ್ದು, ಈ ಯೋಜನೆ ವಿದೇಶಗಳಲ್ಲಿ ಈಗಾಗಲೇ ಯಶಸ್ವಿಯಾಗಿದೆ.

ಪ್ರವಾಸೋದ್ಯಮಕ್ಕೆ ಬಲ: ಪ್ರವಾಸೋದ್ಯಮದ ಯಶಸ್ಸಿಗೆ ಈ ಯೋಜನೆ ಮಹತ್ವದ ಕೊಡುಗೆ ನೀಡುವುದರೊಂದಿಗೆ ಪ್ರವಾಸಿಗರನ್ನು ಆಕರ್ಷಿಸಲಿದೆ. ಬಡವರು ಹಾಗೂ ಜನಸಾಮಾನ್ಯರು ಕೂಡ ವಿಮಾನದಲ್ಲಿ ಪ್ರಯಾಣಿಸುವ ಕನಸನ್ನು ನನಸಾಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಉಡಾನ್ ಯೋಜನೆಯನ್ನು ರೂಪಿಸಿದೆ. ಉಡೇ ದೇಶ್ ಕಾ ಆಮ್ ನಾಗರಿಕ್ ಎನ್ನುವ ಘೋಷಣೆ ಮಾತ್ರವಲ್ಲ. ಬದಲಾಗಿ ದೇಶದಲ್ಲಿ ವಿಮಾನ ಪ್ರಯಾಣವನ್ನು ಎಲ್ಲರಿಗೂ ಕೈಗೆಟಕುವಂತೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಲ ವಿಮಾನ ನಿಲ್ದಾಣಗಳು ಎಲ್ಲೆಲ್ಲಿ?
1) ಮೈಸೂರು ಜಿಲ್ಲೆ ಕಬಿನಿ ಅಣೆಕಟ್ಟು ಮತ್ತು ಕೆಆರ್‌ಎಸ್ ಅಣೆಕಟ್ಟು ಪ್ರದೇಶ
2) ಮಂಗಳೂರು-ಸಮುದ್ರಯಾನ
3) ಸಿಗಂದೂರು-ಲಿಂಗನಮಕ್ಕಿ
4) ಬೈಂದೂರು
5) ಮಲ್ಪೆ-ಉಡುಪಿ
6) ಕಾರವಾರ
7) ಸೂಪಾ ಜಲಾಶಯ

Previous articleBigg Boss: ಪತ್ನಿ-ಅಕ್ಕನ ನಡುವೆ ಕಿರಿಕ್; ಬಿಗ್ ಬಾಸ್ ರಂಜಿತ್ ವಿರುದ್ಧ ದೂರು

LEAVE A REPLY

Please enter your comment!
Please enter your name here