India-England 3rd Test: ರಾಹುಲ್ ಶತಕದ ದಾಖಲೆ, ಭಾರತ 387ಕ್ಕೆ ಆಲೌಟ್

0
33

ಭಾರತ-ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಶತಕ ಸಿಡಿಸುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ.

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಇಂದು ರಾಹುಲ್‌ ತಮ್ಮ ವೃತ್ತಿಜೀವನದಲ್ಲಿ 10ನೇ ಶತಕವನ್ನು ಪೂರೈಸಿದರು. ಅಲ್ಲದೇ ಈ ಟೆಸ್ಟ್‌ ಸರಣಿಯಲ್ಲಿ ಇದು ಅವರ ಎರಡನೇ ಶತಕವಾಗಿದೆ. ಇದರೊಂದಿಗೆ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಒಂದಕ್ಕಿಂತ ಹೆಚ್ಚು ಶತಕ ಗಳಿಸಿದ 2ನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ರಾಹುಲ್‌ ಪಾತ್ರರಾದರು.

ಮೊದಲ ಟೆಸ್ಟ್‌ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು 247 ಎಸೆತಗಳಲ್ಲಿ 137 ರನ್‌ ಗಳಿಸಿ ಔಟಾಗಿದ್ದ ರಾಹುಲ್‌ ಇಂದು 177 ಎಸೆತಗಳಲ್ಲಿ 100 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದಾರೆ.

ಯಶಸ್ವಿ ಜೈಸ್ವಾಲ್ ಅವರೊಂದಿಗೆ ಇನ್ನಿಂಗ್ಸ್‌ ಆರಂಭಿಸಿದ ಕೆ.ಎಲ್. ರಾಹುಲ್ 5 ವಿಕೆಟ್‌ಗಳ ಜತೆಯಾಟ ನಡೆಸಿದರು. ಆರಂಭದಲ್ಲಿ ಜೈಸ್ವಾಲ್ ಕೇವಲ 13 ರನ್‌ಗಳಿಗೆ ಪೆವಿಲಿಯನ್‌ ಸೇರಿದರೆ, ಕೆ.ಎಲ್. ರಾಹುಲ್ ಕರುಣ್ ನಾಯರ್ ಜೊತೆ 61 ರನ್‌ಗಳ ಜತೆಯಾಟ ನಡೆಸಿದರು. ಗಿಲ್‌ ಕೂಡ ಕೇವಲ 16 ರನ್‌ಗಳಿಗೆ ತಮ್ಮ ಆಟವನ್ನು ಮುಗಿಸಿ ಹೊರ ನಡೆದರು.

ನಾಲ್ಕನೇ ವಿಕೆಟ್‌ಗೆ ರಿಷಭ್ ಪಂತ್ ಮತ್ತು ರಾಹುಲ್‌ ಜೋಡಿ 141 ರನ್‌ಗಳ ಜತೆಯಾಟದೊಂದಿಗೆ ತಂಡವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ದರು. ಆದರೆ, ರಿಷಭ್ ಪಂತ್ 74 ರನ್‌ಗಳಿಗೆ ರನೌಟ್ ಆದರು. ಇವರ ಬೆನ್ನಲ್ಲೇ ರಾಹುಲ್‌ ಕೂಡ ವಿಕೆಟ್‌ ಒಪ್ಪಿಸಿದರು.

ರವೀಂದ್ರ ಜಡೇಜಾ 72 ರನ್‌ಗಳ ಉಪಯುಕ್ತ ಕಾಣಿಕೆಯನ್ನು ನೀಡಿದ್ದು ಬಿಟ್ಟರೆ, ಬಳಿಕ ಬಂದ ಆಟಗಾರರು ಹೆಚ್ಚು ಕಾಲ ಕ್ರಿಸ್‌ನಲ್ಲಿ ನಿಲ್ಲಲಿಲ್ಲ.

ಅಂತಿಮವಾಗಿ ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಇಂಗ್ಲೆಂಡ್‌ ಹಾಗೂ ಭಾರತ ಎರಡೂ ತಂಡಗಳು ಮೊದಲ ಇನ್ನಿಂಗ್ಸ್‌ನಲ್ಲಿ ಸಮಾನ ರನ್‌ಗಳಿಗೆ ಆಲೌಟ್‌ ಆಗಿರುವುದು ಎರಡೂ ತಂಡಗಳಿಗೆ ಎರಡನೇ ಇನ್ನಿಂಗ್ಸ್‌ ನಿರ್ಣಾಯಕವಾಗಿದೆ.

Previous articleಬಿಜೆಪಿ ಟಾರ್ಗೆಟ್‌ ಲಿಸ್ಟ್‌ನಲ್ಲಿ ನಾನೂ ಸೇರಿ 55 ʼಕೈʼ ಶಾಸಕರು
Next articleಬ್ರಿಕ್ಸ್: ಭಾರತದ ಸಮತೋಲನದ ನಡೆ