Home ಸುದ್ದಿ ವಿದೇಶ ರಾಯಲ್ ಸೊಸೈಟಿ ಚಿನ್ನದ ಪದಕ ಪಡೆದ ಶ್ರೀನಿವಾಸ ಕುಲಕರ್ಣಿ

ರಾಯಲ್ ಸೊಸೈಟಿ ಚಿನ್ನದ ಪದಕ ಪಡೆದ ಶ್ರೀನಿವಾಸ ಕುಲಕರ್ಣಿ

0
4

ಲಂಡನ್: ಖಗೋಳ ವಿಜ್ಞಾನಿ ಪ್ರೊಫೆಸರ್ ಶ್ರೀನಿವಾಸ ಕುಲಕರ್ಣಿ ಅವರಿಗೆ ಇಂಗ್ಲೆಂಡ್‌ನ ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿಯ ಚಿನ್ನದ ಪದಕ ಲಭಿಸಿದೆ.

ಭಾರತ ಮೂಲದವರಾಗಿರುವ ಶ್ರೀನಿವಾಸ ಕುಲಕರ್ಣಿ ಅವರು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರ ಸಹೋದರ. ಸದ್ಯ ಅಮೆರಿಕದಲ್ಲಿ ನೆಲೆಸಿದ್ದು, ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಸಂಶೋಧನೆಗಳನ್ನು ಕೈಗೊಂಡು ಯಶಸ್ವಿಯಾಗಿದ್ದಾರೆ.

ʻಖಗೋಳ ಭೌತಶಾಸ್ತ್ರದಲ್ಲಿ ಕ್ಷಣಿಕ ಬಹುತರಂಗಾಂತರದ ಕುರಿತಾದ ಸುಸ್ಥಿರ, ನವೀನ ಮತ್ತು ಅಭೂತಪೂರ್ವ ಅನ್ವೇಷಣೆʼಗೆ ಈ ಗೌರವ ಲಭಿಸಿದೆ. ಖ್ಯಾತ ವಿಜ್ಞಾನಿಗಳಾದ ಸ್ಟೀಪನ್ ಹಾಕಿಂಗ್, ಜಾಸ್‌ಲಿನ್ ಬೆಲ್ ಬರ್ನೆಲ್, ಆಲ್ಬರ್ಟ್ ಐನ್‌ಸ್ಟೀನ್ ಮತ್ತು ಎಲ್ವಿನ್ ಹಬಲ್ ಅವರು ಈ ಪದಕ ಪಡೆದಿದ್ದು, ಅವರ ಸಾಲಿಗೆ ಶ್ರೀನಿವಾಸ ಕುಲಕರ್ಣಿ ಸೇರಿದ್ದಾರೆ.

ಇದನ್ನೂ ಓದಿ: ಜಿಲ್ಲಾಧಿಕಾರಿ ಹೆಸರಲ್ಲಿ ಹಣ ವಸೂಲಿಗಿಳಿದ ಸೈಬರ್ ವಂಚಕರು

‘ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಪದಕ ಪಡೆದ ಖ್ಯಾತನಾಮರ ಪಟ್ಟಿಗೆ ನನ್ನನ್ನು ಸೇರಿಸಿರುವುದು ಅಚ್ಚರಿಯಾಗಿದೆ. ಇದು ನನ್ನ ಜೀವನದಲ್ಲಿ ಅತ್ಯಂತ ಸಂತಸ ಕೊಡುವ ವಿಚಾರ ಇದಾಗಿದೆ’ ಎಂದು ಅವರು ಹೇಳಿದ್ದಾರೆ.