Home Advertisement
Home ಸುದ್ದಿ ದೇಶ ಅಬ್ಬಾ…! ಈ ಮಾವಿನ ಹಣ್ಣಿಗೆ ಇಷ್ಟೊಂದು ಬೆಲೆನಾ…?

ಅಬ್ಬಾ…! ಈ ಮಾವಿನ ಹಣ್ಣಿಗೆ ಇಷ್ಟೊಂದು ಬೆಲೆನಾ…?

0
12

ಪಣಜಿ: ಗೋವಾದ ಮಾವಿನ ಹಣ್ಣಿನ ರಾಜ ಎಂದೇ ಪ್ರಸಿದ್ಧಿ ಪಡೆದಿರುವ ಮಾನಕುರಾದ್ ಮಾವಿನ ಹಣ್ಣು ಗೋವಾದ ಮಾರುಕಟ್ಟೆಗೆ ಬಂದಿದ್ದು ಒಂದು ಹಣ್ಣಿಗೆ 600 ರೂ. ಗಳಿಗೆ ಹಾಗೂ ಒಂದು ಡಜನ್‌ಗೆ 7200 ರೂ. ಗಳಂತೆ ಮಾರಾಟ ಮಾಡಲಾಗುತ್ತಿದೆ.

ಗೋವಾದ ಮಾನಕುರಾದ್ ಮಾವಿನ ಹಣ್ಣು ಸಕ್ಕರೆಯಷ್ಟೇ ಸಿಹಿಯಾಗಿರುವುದರಿಂದ ಇದನ್ನು ಗೋವಾದ ಮಾವಿನ ಹಣ್ಣಿನ ರಾಜಾ ಎಂದೇ ಕರೆಯಲಾಗುತ್ತದೆ.

ಈ ಮಾವಿನ ಹಣ್ಣು ಪ್ರತಿ ವರ್ಷ ಮೊದಲು ಮಾರುಕಟ್ಟೆಗೆ ಬಂದಾಗ ಸರಾಸರಿ ಡಜನ್ ಗೆ 5 ರಿಂದ 7 ಸಾವಿರ ರೂ ಗಳವರೆಗೆ ದರ ಇರುವುದು ಸರ್ವೇಸಾಮಾನ್ಯ. ಬೇರೆ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಆವಕ ಹೆಚ್ಚಾದಂತೆಯೇ ಹಾಗೂ ಮಾನಕುರಾದ್ ಮಾವಿನ ಹಣ್ಣಿನ ಆವಕದಲ್ಲಿಯೂ ಹೆಚ್ಚಳವಾದಂತೆಯೇ ಈ ಮಾವಿನ ಹಣ್ಣಿನ ದರದಲ್ಲಿ ಕೊಂಚ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಅತ್ಯಂತ ಕಡಿಮೆ ಎಂದರೆ 2500 ರೂ.ಗಳಿಂದ 3000 ರೂ.ಗಳ ವರೆಗೆ ಬಂದು ನಿಲ್ಲುತ್ತದೆ.

ದರ ಇಷ್ಟೊಂದು ಹೆಚ್ಚಿದ್ದರೂ ಕೂಡ ಈ ಮಾವಿನ ಹಣ್ಣು ಖರೀದಿಸುವವರಿಗೇನೂ ಕೊರತೆಯಿಲ್ಲ. ಮಾನಕುರಾದ್ ಮಾರುಕಟ್ಟೆಗೆ ಆವಕವಾಗುತ್ತಿದ್ದಂತೆಯೇ ಗ್ರಾಹಕರು ಈ ಹಣ್ಣು ಖರೀದಿಗೆ ಮುಗಿಬೀಳುವುತ್ತಿರುವುದು ಸರ್ವೇಸಾಮಾನ್ಯವಾಗಿದೆ.

Previous articleಇ-ಮೇಲ್ ಹ್ಯಾಕ್: ಕಾರ್ಖಾನೆಗೆ 78 ಲಕ್ಷ ರೂ. ವಂಚನೆ
Next articleಮಹಿಳೆಯರಿಗೆ ಅಗೌರವ ಹೇಳಿಕೆ: ಭಾರತಿ ಸಭಾತ್ಯಾಗ