ಸುಪ್ರಸಿದ್ಧ ಜಪಾನೀ ಆರ್ಕಿಟೆಕ್ಟ್ ಅಕೀಹೀಸ ಹಿರಾಟಾ ಅವರೊಡನೆ, ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಸಂವಾದ ನಡೆಸಿಕೊಟ್ಟ ಟೋಟೋ ಇಂಡಿಯಾ

0
68

ಭಾರತ: ನಮ್ಮ ಬೆಂಗಳೂರುದಲ್ಲಿ ಈ ಬಾರಿ ಆರ್ಕಿಟೆಕ್ಟ್ ಸಂವಾದದ ತನ್ನ ಇತ್ತೀಚಿನ ಚಾಪ್ಟರ್ ಮೂಲಕ ವಿನ್ಯಾಸ ಸಹೋದ್ಯೋಗಿಗಳೊಳಗೆ ಸಂವಾದ ಮತ್ತು ಪ್ರೇರಣೆ ಪ್ರೋತ್ಸಾಹಿಸಲು ತನ್ನ ಬದ್ಧತೆಯನ್ನುಟೋಟೋ ಇಂಡಿಯಾ ಮುಂದುವರಿಸಿದೆ.

ಕಾರ್ಯಕ್ರಮವು, ವಿನ್ಯಾಸ, ಸಂಸ್ಕೃತಿ ಹಾಗೂ ಆವಿಷ್ಕಾರದ ಮಧ್ಯಂತರವನ್ನು ಶೋಧಿಸುವ ಒಂದು ತಲ್ಲೀನ ಹಾಗೂ ಪರಸ್ಪರಸಂವಾದದ ಸಂಜೆಗಾಗಿ ಮುಂಚೂಣಿ ಆರ್ಕೀಟೆಕ್ಟ್‌ಗಳು, ವಿನ್ಯಾಸಕಾರರು ಹಾಗೂ ಉದ್ದಿಮೆ ವೃತ್ತಿಪರರನ್ನು ಒಂದುಗೂಡಿಸಿತು.

ಜೈವಿಕ ರಚನೆಗಳನ್ನು ಆಧುನಿಕ ಕಾರ್ಯತತ್ಪರತೆಯೊಂದಿಗೆ ಮೇಳೈಸುವ ವಿಶಿಷ್ಟ ದೃಷ್ಟಿಕೋನಕ್ಕಾಗಿ ಹೆಸರುವಾಸಿಯಾದ ಸೆಲೆಬ್ರಿಟಿ ಜಪಾನೀ ಆರ್ಕಿಟೆಕ್ಟ್ ಆದ ಶ್ರೀ ಅಕೀಹೀಸ ಹಿರಾಟಾ ಅವರಿಂದ ವಾಟರ್ಸ್ ಎಡ್ಜೆ ಆಫ್ ದಿ ಹ್ಯೂಮನ್” ಕುರಿತಾದ ವಿಶೇಷ ಸಂವಾದವು ಅಧಿವೇಶನದ ಮುಖ್ಯಾಂಶವಾಗಿತ್ತು.

ವೆನಿಸ್ ಬೈಯೆನ್ನೇಲ್‌ನಲ್ಲಿ ಗೋಲ್ಡನ್ ಲಯನ್ ಲಯನ್ ವಿಜೇತರಾದ ಶ್ರೀ ಅಕೀಹೀಸ ಹಿರಾಟಾ ಸಾನ್, ಪರಿಕಲ್ಪನೆಗಳನ್ನು ಜೀವಂತ ಎನಿಸುವ ಕ್ಷೇತ್ರಗಳನ್ನಾಗಿ ಪರಿವರ್ತಿಸುವ ಆರ್ಕಿಟೆಕ್ಟ್ ಆಗಿ ವಿಶ್ವವ್ಯಾಪಿಯಾಗಿ ಹೆಸರುವಾಸಿಯಾಗಿದ್ದಾರೆ.

ಅಕೀಹೀಸ ಹಿರಾಟಾ ಅವರು, ಟ್ರೇ-ನೆಸ್ ಹೌಸ್ ಟೋಕ್ಯೋ, 2017, ಆರ್ಟ್ ಮ್ಯೂಸಿಯಮ್ ಅಂಡ್ ಲೈಬ್ರರಿ, ಓಟ ಗಮ್ಮ, 2017, ಗ್ಲೋಬಲ್ ಬೌಲ್ ಟೋಕ್ಯೋ 2021, HARAKADO Tokyo,2023 ಒಳಗೊಂಡಂತೆ ತಮ್ಮ ಪ್ರಮುಖ ಕೃತಿಗಳ ಕುರಿತು ಅಂತದೃಷ್ಟಿಗಳನ್ನು ಹಂಚಿಕೊಂಡರು.

ಟೊಕ್ಯೋದಲ್ಲಿ ಟ್ರೀ-ನೆಸ್ ಹೌಸ್‌ನ ಲಂಬ ಉದ್ಯಾನಗಳಿಂದ ಹಿಡಿದು, ಓಟೋದಲ್ಲಿ ಆರ್ಟ್ ಮ್ಯೂಸಿಯಮ್ ಮತ್ತು ಲೈಬ್ರರಿಯ ಮುಕ್ತ ಆಲಿಂಗನದವರೆಗೆ ಅವರ ಕೃತಿಗಳು ಕಾಡುಗಳು, ಬೆಳಕು ಮತ್ತು ಚಲನೆಯನ್ನು ಪಿಸುಗುಡುವ ಕೃತಿಗಳಾಗಿದ್ದು… ಅಲ್ಲಿನ ರಚನೆಗಳು ವಿನ್ಯಾಸವೇ ಎಕಾಲಜಿ ಎಂಬಂತಿವೆ.

ಕಾರ್ಯಕ್ರಮದ ಮುಖ್ಯಾಂಶಗಳ ಬಗ್ಗೆ ಮಾತನಾಡುವುದಾದರೆ-ಟೋಟೋ ಇಂಡಿಯಾ ನಾಯಕತ್ವವು ಭಾರತೀಯ ಮಾರಕಟ್ಟೆಯಡೆಗೆ ಬ್ರ್ಯಾಂಡ್‌ನ ನಿರಂತರ ಬೆಳವಣಿಗೆ ಮತ್ತು ದೀರ್ಘಾವಧಿ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಟೋಟೋ ಇಂಡಿಯಾ, ವರ್ಷದಿಂದ ವರ್ಷಕ್ಕೆ, ಶೇಕಡ 120ಕ್ಕಿಂತ ಹೆಚ್ಚಿನ ಬೆಳವಣಿಗೆ ಪ್ರಮಾಣ ದಾಖಲಿಸಿ ಸರಿಸುಮಾರು ₹500 ಕೋಟಿ ವಹಿವಾಟು ತಲುಪುವ ಗುರಿ ಹೊಂದಿದೆ ಎಂದು ಹಂಚಿಕೊಂಡಿದೆ.

ತನ್ನ ರೀಟೇಲ್ ಹೆಜ್ಜೆಗುರುತನ್ನು ವಿಸ್ತರಿಸುವ ಮೂಲಕ ತನ್ನ ಅಸ್ತಿತ್ವವನ್ನು ಇನ್ನಷ್ಟು ಬಲಪಡಿಸುವ ಗುರಿ ಹೊಂದಿರುವ ಸಂಸ್ಥೆಯು ಭಾರತೀಯ ಗ್ರಾಹಕರಿಗಾಗಿಯೇ ವಿಶೇಷಾಗ ತಯಾರಿಸಲಾದ ಹೊಸ ಉತ್ಪನ್ನ ಆವಿಷ್ಕಾರಗಳನ್ನು ಪರಿಚಯಿಸಿ, ಪ್ರಮುಖ ನಗರಗಳಾದ್ಯಂತ ಇರುವ ಆರ್ಕಿಟೆಕ್ಟ್‌ಗಳು ಹಾಗೂ ವಿನ್ಯಾಸಕರುಗಳೊಡನೆ ತನ್ನ ತೊಡಗಿಕೊಳ್ಳುವಿಕೆಯನ್ನು ಆಳಗೊಳಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಮಾತುಕತೆಯ ಸಂದರ್ಭದಲ್ಲಿ ಅಕೀಹೀಸ ಹಿರಾಟಾ ಅವರು, ಆರ್ಕಿಟೆಕ್ಚರ್, ಜೀವನ ಮತ್ತು ಕ್ಷೇತ್ರ ವಿಲೀನಗೊಳ್ಳುವ ಮಾನವೀಯತೆಯ ಸರಹದ್ದುಗಳಲ್ಲಿ ಇರುವ ತಮ್ಮ ದೂರದೃಷ್ಟಿಯನ್ನು ಹಂಚಿಕೊಂಡರು. ಎಂಟಾಗ್ಲ್ಮೆಂಟ್ ಮತ್ತು ರಿವರ್ಬರೇಶನ್ ಮೂಲಕ ಅವರು, ಪರಿಸರ ಹಾಗೂ ಜೀವನದ ಯುಗದಲ್ಲಿ ಸಂಪರ್ಕಗಳನ್ನು ಮತ್ತು ಪ್ರತಿಧ್ವನಿಗಳನ್ನು ರೂಪಿಸುವ ಹೊಸ ವಿಧಾನಗಳನ್ನು ಶೋಧಿಸುವರು.

ಸೃಜನಶೀಲ ಸಹಯೋಗಕ್ಕಾಗಿ ಬೆಂಗಳೂರು ಆರ್ಕಿಟೆಕ್ಟ್ ಟಾಕ್ ಒಂದು ಸೇತುವಾಗಲಿದ್ದು, ಆಲೋಚನಾಪೂರ್ವಕ ವಿನ್ಯಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನವು, ಇನ್ನೂ ಉತ್ತಮವಾದ ಪರಿಸರಗಳನ್ನು ರೂಪಿಸಲು ಯಾವ ರೀತಿ ಒಂದುಗೂಡಬಲ್ಲದು ಎಂಬುದನ್ನು ಎತ್ತಿತೋರಿಸುತ್ತದೆ.

ಈ ರೀತಿಯ ಉಪಕ್ರಮಗಳ ಮೂಲಕ ಟೋಟೋ ಇಂಡಿಯಾ ಆರ್ಕಿಟೆಕ್ಟ್ ಮತ್ತು ವಿನ್ಯಾಸ ಸಮುದಾಯದೊಡನೆ ತನ್ನ ಸಂಬಂಧವನ್ನು ಬಲಪಡಿಸಿಕೊಳ್ಳುವ ಸಮಯದಲ್ಲೇ ಈ ಕ್ಷೇತ್ರದಲ್ಲಿರುವ ಅತ್ಯಂತ ದಾರ್ಶನಿಕ ಮನಸ್ಸುಗಳಿಂದ ಪ್ರೇರಣೆ, ಆವಿಷ್ಕಾರ ಹಾಗೂ ಅಂತರ್ದೃಷ್ಟಿಗಳನ್ನು ಒದಗಿಸಲದೆ.

Previous articleಪ್ರೀ ವೆಡ್ಡಿಂಗ್ ಶೂಟ್‌‌ ಮುಗಿಸಿ ಮನೆ ಸೇರಬೇಕಿದ್ದ ಜೋಡಿ ದುರಂತ ಅಂತ್ಯ
Next articleಹಣಕ್ಕಾಗಿ ಅನಗತ್ಯ ಸಿಸೇರಿಯನ್ ಹೆರಿಗೆ: ಆಸ್ಪತ್ರೆಗಳ ವಿರುದ್ಧ ಕ್ರಮ

LEAVE A REPLY

Please enter your comment!
Please enter your name here