Home ಸುದ್ದಿ ದೇಶ ಕೈಕೊಟ್ಟ ಗೂಗಲ್ ಮ್ಯಾಪ್ ವಿದೇಶಿ ಮಹಿಳೆ ರಕ್ಷಿಸಿದ ಸಿಂಧು

ಕೈಕೊಟ್ಟ ಗೂಗಲ್ ಮ್ಯಾಪ್ ವಿದೇಶಿ ಮಹಿಳೆ ರಕ್ಷಿಸಿದ ಸಿಂಧು

0
3

ಪಣಜಿ: ಗೂಗಲ್ ಮ್ಯಾಪ್ ನಂಬಿ ತಪ್ಪಾಗಿ ದಕ್ಷಿಣ ಗೋವಾದ ನಿರ್ಜನ ಪ್ರದೇಶದಲ್ಲಿ ರಾತ್ರಿ 10 ಗಂಟೆಯ ವೇಳೆ ಸಿಲುಕಿದ್ದ ವಿದೇಶಿ ಮಹಿಳೆಗೆ ಸ್ಥಳೀಯ ಮಹಿಳೆಯೊಬ್ಬರು ಸಹಾಯ ಮಾಡಿದ ಘಟನೆ ನಡೆದಿದೆ.

ಈ ವಿದೇಶಿ ಮಹಿಳೆ ಗೋವಾಕ್ಕೆ ಪ್ರವಾಸಕ್ಕೆ ಬಂದಿದ್ದು, ದಕ್ಷಿಣ ಗೋವಾದಲ್ಲಿರುವ ತನ್ನ ಹೋಟೆಲ್‌ಗೆ ರಾತ್ರಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈಕೆಗೆ ಗೂಗಲ್ ಮ್ಯಾಪ್ ತಪ್ಪು ದಾರಿ ತೋರಿಸಿದೆ. ಮುಖ್ಯ ರಸ್ತೆಯಿಂದ ನಿರ್ಜನ ಪ್ರದೇಶದ ಕಾಡು ದಾರಿಗೆ ಕರೆದುಕೊಂಡು ಹೋಗಿ ನಿಲ್ಲಿಸಿದೆ. ಇದರಿಂದಾಗಿ ಈ ವಿದೇಶಿ ಮಹಿಳೆಯು ಭಯಭೀತರಾಗಿ ದಿಕ್ಕು ತೋಚದೆಯೇ ಅಲ್ಲಿಯೇ ಅಳುತ್ತ ಕುಳಿತಿದ್ದಳು ಎನ್ನಲಾಗಿದೆ.

ಇದನ್ನೂ ಓದಿ: ಗಿಗ್‌ ಕಾರ್ಮಿಕರಿಗೆ ಬಿಗ್‌ ರಿಲೀಫ್‌: 10 ನಿಮಿಷದ ಡೆಲಿವರಿಗೆ ಬ್ರೇಕ್

ಸಿಂಧುಕುಮಾರಿ ಎಂಬ ಸ್ಥಳೀಯ ಮಹಿಳೆ ಇದೇ ಮಾರ್ಗವಾಗಿ ಬಂದಿದ್ದು, ವಿದೇಶಿ ಮಹಿಳೆ ನಿರ್ಜನ ಪ್ರದೇಶದಲ್ಲಿ ಕುಳಿತು ಅಳುತ್ತಿರುವುದನ್ನು ಕಂಡು ತಮ್ಮ ಬೈಕ್ ನಿಲ್ಲಿಸಿದ್ದಾರೆ. ನಂತರ ಆಕೆಯನ್ನು ಅವಳು ತಂಗಿದ್ದ ರೆಸಾರ್ಟ್‌ಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ.

ಘಟನೆಯು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸಿಂಧುಕುಮಾರಿ ಅವರು ವಿದೇಶಿ ಮಹಿಳೆಗೆ ಮಾಡಿದ ಸಹಾಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.