Home Advertisement
Home ಸುದ್ದಿ ದೇಶ ರೆಪೋ ದರ 5.25% ಯಥಾಸ್ಥಿತಿ – EMI, FD ಮೇಲೆ ಪರಿಣಾಮ ಏನು?

ರೆಪೋ ದರ 5.25% ಯಥಾಸ್ಥಿತಿ – EMI, FD ಮೇಲೆ ಪರಿಣಾಮ ಏನು?

0
80

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾನಿಟರಿ ಪಾಲಿಸಿ ಸಮಿತಿಯು (MPC) ಇತ್ತೀಚಿನ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ತೀರ್ಮಾನಿಸಿದೆ. ಇದರೊಂದಿಗೆ ಪ್ರಸ್ತುತ ರೆಪೋ ದರವು ಶೇ. 5.25 ಮಟ್ಟದಲ್ಲೇ ಮುಂದುವರಿಯಲಿದೆ.

ಎರಡು ದಿನಗಳ ಕಾಲ ನಡೆದ ಎಂಪಿಸಿ ಸಭೆಯ ಬಳಿಕ ಸಂಜಯ್ ಮಲ್ಹೋತ್ರಾ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಘೋಷಿಸಿದರು. ಜಾಗತಿಕ ಆರ್ಥಿಕ ಅನಿಶ್ಚಿತತೆ, ವಿಶೇಷವಾಗಿ ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹಾಗೂ ತೈಲ ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಜಾಗತಿಕ ಪರಿಸ್ಥಿತಿ ಪ್ರಭಾವ: ಇತ್ತೀಚಿನ ಪಶ್ಚಿಮ ಏಷ್ಯಾ ಉದ್ವಿಗ್ನತೆ, ವಿಶೇಷವಾಗಿ ಹಾರ್ಮುಜ್ ಜಲಸಂಧಿ ಸುತ್ತಲಿನ ಅಶಾಂತಿ, ಜಾಗತಿಕ ಇಂಧನ ಪೂರೈಕೆಗೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಇದರಿಂದ ಕಚ್ಚಾ ತೈಲ ಬೆಲೆಗಳಲ್ಲಿ ಏರಿಕೆ ಕಂಡುಬಂದಿದ್ದು, ಇದು ಭಾರತದಲ್ಲಿಯೂ ಹಣದುಬ್ಬರ ಹೆಚ್ಚಿಸುವ ಭೀತಿ ಉಂಟುಮಾಡಿತ್ತು. ಇದನ್ನು ಮನಗಂಡು, ಆರ್‌ಬಿಐ ಎಚ್ಚರಿಕೆಯ ನಿಲುವು ತೆಗೆದುಕೊಂಡಿದ್ದು, ಬಡ್ಡಿದರ ಇಳಿಕೆ ಮಾಡುವುದನ್ನು ಮುಂದೂಡಿದೆ.

ಆರ್ಥಿಕ ಸೂಚಕಗಳ ಅಂದಾಜು: ಆರ್‌ಬಿಐ 2026–27ರ ಆರ್ಥಿಕ ವರ್ಷದ ಜಿಡಿಪಿ ಬೆಳವಣಿಗೆ ಮತ್ತು ಹಣದುಬ್ಬರದ ಅಂದಾಜುಗಳನ್ನು ಕೂಡ ಪ್ರಕಟಿಸಿದೆ. ದೇಶೀಯ ಆರ್ಥಿಕತೆ ಸ್ಥಿರವಾಗಿದ್ದರೂ, ಜಾಗತಿಕ ಅನಿಶ್ಚಿತತೆಗಳಿಂದ ಮುಂದಿನ ದಿನಗಳಲ್ಲಿ ಎಚ್ಚರಿಕೆಯ ನೀತಿ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಹಿಂದಿನ ನಿರ್ಧಾರಗಳುಳ ಡಿಸೆಂಬರ್ 2025ರಲ್ಲಿ ರೆಪೋ ದರವನ್ನು 5.50%ರಿಂದ 5.25%ಕ್ಕೆ ಇಳಿಸಲಾಗಿತ್ತು ನಂತರ ಫೆಬ್ರವರಿ 2026ರ ಸಭೆಯಲ್ಲೂ ದರ ಯಥಾಸ್ಥಿತಿಯಲ್ಲಿ ಉಳಿಸಲಾಗಿತ್ತು ಈಗಿನ ಸಭೆಯಲ್ಲೂ ಅದೇ ನಿಲುವು ಮುಂದುವರಿಸಲಾಗಿದೆ.

ಜನರಿಗೆ ಏನು ಪರಿಣಾಮ? : ಸಾಲಗಳು (EMI) ಬಡ್ಡಿದರ ಸ್ಥಿರವಾಗಿರುವುದರಿಂದ EMIಗಳಲ್ಲಿ ಬದಲಾವಣೆ ಇರುವುದಿಲ್ಲ, ಹಣದುಬ್ಬರ ನಿಯಂತ್ರಣದಲ್ಲಿಡಲು ಆರ್‌ಬಿಐ ಈ ಕ್ರಮ ಅನುಸರಿಸಿದೆ. FD ಬಡ್ಡಿಯಂತಹ ಬ್ಯಾಂಕ್ ಠೇವಣಿ ಬಡ್ಡಿದರಗಳ ಮೇಲೆ ಸ್ಥಿರ ಪರಿಣಾಮ ಇರಲಿದೆ.