Home Advertisement
Home ಸುದ್ದಿ ದೇಶ ಕೋವಿಡ್‌ನಂತಹ ಪರಿಸ್ಥಿತಿ ಎದುರಿಸಲು ಸಿದ್ಧರಾಗಿ

ಕೋವಿಡ್‌ನಂತಹ ಪರಿಸ್ಥಿತಿ ಎದುರಿಸಲು ಸಿದ್ಧರಾಗಿ

0
150

ನವದೆಹಲಿ: ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಒಗ್ಗಟ್ಟಿನಿಂದ ನಿಂತು ಹೇಗೆ ಪರಿಸ್ಥಿತಿ ಎದುರಿಸಿದ್ದೆವೋ ಅದೇ ರೀತಿ, ಈ ಬಾರಿಯೂ ಎಲ್ಲರೂ ಸಿದ್ಧರಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪಶ್ಚಿಮ ಏಷ್ಯಾ ಸಂಘರ್ಷದ ಕುರಿತಂತೆ ಲೋಕಸಭೆಯಲ್ಲಿ ಮಾತನಾಡಿರುವ ಅವರು, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವನ್ನು ಗಮನಿಸಿದರೆ, ಸವಾಲಿನ ಜಾಗತಿಕ ಪರಿಸ್ಥಿತಿ ದೀರ್ಘಕಾಲದವರೆಗೆ ಮುಂದುವರಿಯಬಹುದು ಹೀಗಾಗಿ ನಾವು ಸಿದ್ಧರಾಗಿರಬೇಕು ಎಂದರು.

ಈ ಕಷ್ಟಕರ ಸಂದರ್ಭಗಳ ಪರಿಣಾಮಗಳು ಪ್ರಪಂಚದಾದ್ಯಂತ ದೀರ್ಘಕಾಲ ಉಳಿಯುವ ನಿರೀಕ್ಷೆಯಿದ್ದು, ಕೋವಿಡ್-19 ಪರಿಸ್ಥಿತಿಯನ್ನು ಎದುರಿಸಿದಂತೆಯೇ, ನಾವು ಮತ್ತೆ ಅದೇ ರೀತಿಯಲ್ಲಿ ಪ್ರತಿಕ್ರಿಯಿಸಲು ಸಿದ್ಧರಾಗಿರಬೇಕು ಎಂದರು.

ನಾವೆಲ್ಲ ಈ ಸವಾಲನ್ನು ತಾಳ್ಮೆ ಮತ್ತು ಪರಿಶ್ರಮದಿಂದ ಎದುರಿಸಬೇಕಾಗಿದೆ, ಇದು ನಮ್ಮ ಶಕ್ತಿ. ಎಲ್ಲರೂ ಜಾಗರೂಕರಾಗಿರಬೇಕು. ಈ ಪರಿಸ್ಥಿತಿಯ ಲಾಭ ಪಡೆದು ಸುಳ್ಳು ಹರಡಲು ಪ್ರಯತ್ನಿಸುವ ಜನರಿದ್ದಾರೆ. ಅವರನ್ನು ಯಶಸ್ವಿಯಾಗಲು ಬಿಡಬಾರದು ಎಂದರು.