Home Advertisement
Home ಸುದ್ದಿ ದೇಶ 76 ವರ್ಷಗಳ ಬಳಿಕ ಸ್ಥಳಾಂತರ: ‘ಸೇವಾ ತೀರ್ಥ’ಕ್ಕೆ PMO ಶಿಫ್ಟ್

76 ವರ್ಷಗಳ ಬಳಿಕ ಸ್ಥಳಾಂತರ: ‘ಸೇವಾ ತೀರ್ಥ’ಕ್ಕೆ PMO ಶಿಫ್ಟ್

0
85

76 ವರ್ಷಗಳ ಬಳಿಕ ನವದೆಹಲಿಯಲ್ಲಿ ಹೊಸ ಯುಗದ ಪ್ರಧಾನಿ ಕಾರ್ಯಾಲಯ ಆರಂಭ: ದಕ್ಷಿಣ ಬ್ಲಾಕ್‌ನಿಂದ ‘ಸೇವಾ ತೀರ್ಥ’ಕ್ಕೆ ಪಿಎಂಒ ಸ್ಥಳಾಂತರ

ನವದೆಹಲಿ: ಸ್ವಾತಂತ್ರ್ಯಾನಂತರದ ಅತಿದೊಡ್ಡ ಆಡಳಿತಾತ್ಮಕ ಬದಲಾವಣೆಗಳಲ್ಲಿ ಒಂದಾಗಿ, ಪ್ರಧಾನಿ ಕಾರ್ಯಾಲಯದ ವಿಳಾಸವು 76 ವರ್ಷಗಳ ಬಳಿಕ ಬದಲಾಗಿದೆ. 1947ರಿಂದ ದಕ್ಷಿಣ ಬ್ಲಾಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಧಾನಮಂತ್ರಿ ಕಾರ್ಯಾಲಯ (ಪಿಎಂಒ) ಇನ್ನು ಮುಂದೆ ನವದೆಹಲಿಯ ಕೇಂದ್ರ ಭಾಗದಲ್ಲಿರುವ ನೂತನ ಸಂಕೀರ್ಣ ‘ಸೇವಾ ತೀರ್ಥ’ಕ್ಕೆ ಸ್ಥಳಾಂತರಗೊಳ್ಳಲಿದೆ.

ಉತ್ತರಾಯಣ ಪುಣ್ಯಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಕಚೇರಿಗೆ ಅಧಿಕೃತವಾಗಿ ಪ್ರವೇಶಿಸಲಿದ್ದಾರೆ ಎನ್ನಲಾಗಿದೆ. ಸುಮಾರು 2 ಲಕ್ಷಕ್ಕೂ ಹೆಚ್ಚು ಚದರಡಿ ವಿಸ್ತೀರ್ಣ ಹೊಂದಿರುವ ಈ ಭವ್ಯ ಕಟ್ಟಡ ಅತ್ಯಾಧುನಿಕ ಸೌಲಭ್ಯಗಳು, ಉನ್ನತ ಭದ್ರತೆ ಹಾಗೂ ಭೂಕಂಪ ನಿರೋಧಕ ವಿನ್ಯಾಸವನ್ನು ಒಳಗೊಂಡಿದೆ.

ಇದನ್ನೂ ಓದಿ: ತಮಿಳುನಾಡು:ವಿಜಯ್ ರ‍್ಯಾಲಿಯಲ್ಲಿ ಹೃದಯಾಘಾತದಿಂದ ವ್ಯಕ್ತಿ ಸಾವು

ಏನಿದು ‘ಸೇವಾ ತೀರ್ಥ’?: ‘ಸೇವೆಯ ಯಾತ್ರೆ’ ಎಂಬ ಅರ್ಥವನ್ನು ಸಾರುವಂತೆ ಪ್ರಧಾನಿ ಕಾರ್ಯಾಲಯಕ್ಕೆ ‘ಸೇವಾ ತೀರ್ಥ’ ಎಂದು ಹೆಸರಿಡಲಾಗಿದೆ. ಇದು ನೂತನ ಸಂಸತ್ ಭವನ ಸೇರಿದಂತೆ ಸೆಂಟ್ರಲ್ ವಿಸ್ತಾ ಯೋಜನೆ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿದೆ. ಇದುವರೆಗೆ ‘ಪಿಎಂಒ’ ಎಂದು ಕರೆಯಲ್ಪಡುತ್ತಿದ್ದ ಕಚೇರಿಗೆ ಸಾಂಪ್ರದಾಯಿಕ ಹೆಸರನ್ನು ನೀಡುವ ಮೂಲಕ ಆಡಳಿತದಿಂದ ಸೇವೆಯತ್ತ ಸಾಗುವ ಸಂಕೇತವನ್ನು ಸರ್ಕಾರ ನೀಡಿದೆ. ಇದೇ ಮಾದರಿಯಲ್ಲಿ ‘ರಾಜಪಥ’ವನ್ನು ‘ಕರ್ತವ್ಯ ಪಥ’ ಎಂದು ಮರುನಾಮಕರಣ ಮಾಡಲಾಗಿತ್ತು.

ಸೇವಾ ತೀರ್ಥದಲ್ಲಿರುವ ವಿಭಾಗಗಳು: ಸೇವಾ ತೀರ್ಥ ಸಂಕೀರ್ಣವು ಮೂರು ಪ್ರಮುಖ ವಿಭಾಗಗಳನ್ನು ಒಳಗೊಂಡಿದೆ ಸೇವಾ ತೀರ್ಥ – 1ರಲ್ಲಿ ಪ್ರಧಾನಮಂತ್ರಿ ಹಾಗೂ ಉನ್ನತ ಅಧಿಕಾರಿಗಳ ಕಾರ್ಯಾಲಯ. ಮತ್ತು ಸೇವಾ ತೀರ್ಥ – 2ರಲ್ಲಿ ಸಂಪುಟ ಕಾರ್ಯದರ್ಶಿಗಳ ಕಚೇರಿ (2025ರಿಂದಲೇ ಕಾರ್ಯಾರಂಭ). ಹಾಗೂ ಸೇವಾ ತೀರ್ಥ – 3ರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಭದ್ರತಾ ಸಮಿತಿ ಕಾರ್ಯದರ್ಶಿಗಳ ಕಚೇರಿ. ಇದಲ್ಲದೆ ‘ಇಂಡಿಯಾ ಹೌಸ್’ ಎಂಬ ವಿಶೇಷ ಸಮ್ಮೇಳನ ಸಭಾಂಗಣವೂ ಇಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ ದ್ವಿಪಕ್ಷೀಯ ಮಾತುಕತೆಗಳು ಹಾಗೂ ಪ್ರಮುಖ ರಾಜತಾಂತ್ರಿಕ ಚರ್ಚೆಗಳು ನಡೆಯಲಿವೆ.

ಇದನ್ನೂ ಓದಿ: ‘ಹಣ ತೆಗೆದುಕೊಳ್ಳಿ, ವಿಸಿಲ್‌ ಹಾಕಿ’ – TVK ವಿಜಯ್ ಕರೆ

ಭಾರತೀಯ ವಾಸ್ತುಶಿಲ್ಪದ ಮಿಶ್ರಣ: ಸೇವಾ ತೀರ್ಥದಲ್ಲಿ ಭಾರತೀಯ ಸಾಂಪ್ರದಾಯಿಕ ವಾಸ್ತುಶಿಲ್ಪ ಮತ್ತು ಆಧುನಿಕ ವಿನ್ಯಾಸವನ್ನು ಸಮತೋಲನವಾಗಿ ಬೆರೆಸಲಾಗಿದೆ. ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾಕೃತಿಗಳು ಮತ್ತು ಚಿತ್ರಗಳನ್ನು ಇಲ್ಲಿ ಸ್ಥಾಪಿಸಲಾಗಿದೆ. ಇದರೊಂದಿಗೆ ವಸಾಹತುಶಾಹಿ ಶೈಲಿಯ ಸೌತ್ ಬ್ಲಾಕ್ ಕಟ್ಟಡದಿಂದ ಭಾರತೀಯ ಶೈಲಿಯ ಕಟ್ಟಡಕ್ಕೆ ಪಿಎಂಒ ಸ್ಥಳಾಂತರಗೊಂಡಿದೆ.

ವಿಸ್ತೀರ್ಣ ಮತ್ತು ವೆಚ್ಚ: ಅಧಿಕೃತ ಮಾಹಿತಿಯ ಪ್ರಕಾರ ಒಟ್ಟು ವಿಸ್ತೀರ್ಣ: 2,26,203 ಚದರ ಅಡಿ ಇದ್ದು ₹1,189 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ ಇದರ ನಿರ್ಮಾಣ ನಿರ್ವಹಣೆಯನ್ನು Larsen & Toubro ಕೇಂದ್ರ ಲೋಕೋಪಯೋಗಿ ಇಲಾಖೆಯ ಮೇಲ್ವಿಚಾರಣೆಯಲ್ಲಿ ಈ ಯೋಜನೆ ಪೂರ್ಣಗೊಂಡಿದೆ. ಸೇವಾ ತೀರ್ಥದ ಸಮೀಪದಲ್ಲೇ ಪ್ರಧಾನಮಂತ್ರಿಯ ನೂತನ ನಿವಾಸವೂ ನಿರ್ಮಾಣ ಹಂತದಲ್ಲಿದ್ದು, ಅದು ಪೂರ್ಣಗೊಂಡ ಬಳಿಕ ಅಲ್ಲಿಗೂ ಸ್ಥಳಾಂತರವಾಗಲಿದೆ.

ಇದನ್ನೂ ಓದಿ: ಕೆನಡಾ ಶೂಟೌಟ್ ಪ್ರಕರಣ: ಕನ್ನಡಿಗ ಚಂದನ್ ಕುಮಾರ್ ಪಾರ್ಥಿವ ಶರೀರ ಭಾರತಕ್ಕೆ

ಭದ್ರತಾ ವ್ಯವಸ್ಥೆ: ಭದ್ರತೆಯ ದೃಷ್ಟಿಯಿಂದ ಸೇವಾ ತೀರ್ಥ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು ಎನ್‌ಕ್ರಿಪ್ಟೆಡ್ ಸಂವಹನ ವ್ಯವಸ್ಥೆ, ಸುಧಾರಿತ ಸೈಬರ್ ಭದ್ರತೆ, ಭೂಕಂಪ ನಿರೋಧಕ ವಿನ್ಯಾಸ, ತುರ್ತು ಪರಿಸ್ಥಿತಿಯಲ್ಲಿ ನಿರಂತರ ಕಾರ್ಯನಿರ್ವಹಣಾ ವ್ಯವಸ್ಥೆ ಹಾಗೂ ಪ್ರಧಾನಮಂತ್ರಿಯ ಭದ್ರತೆಗೆ ನಿಯೋಜಿತ ವಿಶೇಷ ಭದ್ರತಾ ಪಡೆ ಹೊಸ ತಂತ್ರಜ್ಞಾನ ಆಧಾರಿತ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಿದೆ.

21ನೇ ಶತಮಾನದ ಆಡಳಿತದ ಪ್ರತೀಕ: ದಕ್ಷಿಣ ಬ್ಲಾಕ್‌ನಿಂದ ಕೇಂದ್ರ ಭಾಗದ ಸೇವಾ ತೀರ್ಥಕ್ಕೆ ಪಿಎಂಒ ಸ್ಥಳಾಂತರಗೊಂಡಿರುವುದು ಕೇವಲ ಕಟ್ಟಡ ಬದಲಾವಣೆ ಮಾತ್ರವಲ್ಲ. ಇದು 21ನೇ ಶತಮಾನದ ಆಡಳಿತ, ಪಾರದರ್ಶಕತೆ ಮತ್ತು ಜನಕೇಂದ್ರಿತ ವ್ಯವಸ್ಥೆಯ ಮಹತ್ವಾಕಾಂಕ್ಷೆಯ ಪ್ರತೀಕವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Previous articleಶಾಲಾ ಬಾಗಿಲಿಗೆ ಸಿಲುಕಿ ತುಂಡಾಯ್ತು ಬಾಲಕಿಯ ಬೆರಳುಗಳು
Next articleಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋಸೈಮನ್ ನಿಧನ