ಗುಜರಾತ್ ಮುಖ್ಯಮಂತ್ರಿ ಸ್ಥಾನದಿಂದ ಪ್ರಾರಂಭವಾದ ಸೇವೆ – ಇಂದಿಗೆ ದೇಶದ ನಾಯಕತ್ವದ 24 ವರ್ಷಗಳ ಪಯಣ
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕ ಹುದ್ದೆಯಲ್ಲಿ ತಮ್ಮ 24ನೇ ವರ್ಷದ ಪಯಣವನ್ನು ಇಂದು ಪೂರೈಸಿದ್ದಾರೆ. 2001ರ ಅಕ್ಟೋಬರ್ 7ರಂದು ಅವರು ಮೊಟ್ಟ ಮೊದಲ ಬಾರಿಗೆ ಗುಜರಾತ್‌ನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ದಿನದಿಂದ ಇಂದಿನವರೆಗೆ, ಅವರು ನಿರಂತರವಾಗಿ ಆಡಳಿತ ಮತ್ತು ಸಾರ್ವಜನಿಕ ಸೇವೆಯ ಮುಂಚೂಣಿಯಲ್ಲಿ ಇದ್ದಾರೆ.
13 ವರ್ಷಗಳ ಕಾಲ (2001–2014) ಅವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. 2014ರಲ್ಲಿ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಅವರು, ಇದೀಗ 11 ವರ್ಷಗಳ ಕಾಲ ರಾಷ್ಟ್ರದ ಆಡಳಿತದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದು, “2001ರ ಈ ದಿನದಂದು ನಾನು ಮೊದಲ ಬಾರಿಗೆ ಗುಜರಾತ್‌ನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದೆ. ನನ್ನ ಸಹ ಭಾರತೀಯರ ಆಶೀರ್ವಾದದಿಂದ ಇಂದು ನಾನು ಸರ್ಕಾರದ ಮುಖ್ಯಸ್ಥನಾಗಿ 25ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ. ನನ್ನ ಜೀವನದ ಪ್ರತಿಯೊಂದು ಕ್ಷಣವೂ ದೇಶದ ಸೇವೆಗೆ ಅರ್ಪಿತವಾಗಿದೆ. ನಮ್ಮ ಜನರ ಜೀವನವನ್ನು ಸುಧಾರಿಸುವುದು ಮತ್ತು ನಮ್ಮ ಮಹಾನ್ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವುದು ನನ್ನ ನಿರಂತರ ಪ್ರಯತ್ನವಾಗಿದೆ” ಎಂದು ಹೇಳಿದ್ದಾರೆ.
ಮೋದಿ ಅವರ ಈ ದೀರ್ಘ ರಾಜಕೀಯ ಪಯಣವು ಭಾರತೀಯ ರಾಜಕೀಯ ಇತಿಹಾಸದಲ್ಲೇ ಅಪರೂಪವಾದುದಾಗಿ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಅವರ ಆಡಳಿತ ಶೈಲಿ, ನಿಷ್ಣಾತ ಸಂಘಟನೆ ಶಕ್ತಿ ಮತ್ತು ಸಾರ್ವಜನಿಕ ಸಂಪರ್ಕ ತಂತ್ರಗಳು ರಾಜಕೀಯ ನಾಯಕತ್ವದ ಹೊಸ ಮಾದರಿಯನ್ನು ರೂಪಿಸಿದ್ದವೆಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಗುಜರಾತ್‌ನ ಅಭಿವೃದ್ಧಿಯಿಂದ ಪ್ರಾರಂಭವಾದ ಅವರ ಪ್ರಯಾಣವು, ಇಂದು ಭಾರತದ ಜಾಗತಿಕ ನಾಯಕತ್ವದ ಪ್ರತಿನಿಧಿಯಾಗಿ ಬೆಳೆಯುವ ಮಟ್ಟಕ್ಕೆ ತಲುಪಿದೆ.