‘ಮೇಕ್ ಇನ್ ಇಂಡಿಯಾ’ಗೆ ಮತ್ತೊಂದು ದೊಡ್ಡ ಹೆಜ್ಜೆ: ಸನಂದ್‌ನಲ್ಲಿ ಮೈಕ್ರಾನ್ ಸೆಮಿಕಂಡಕ್ಟರ್ ಘಟಕ ಉದ್ಘಾಟನೆ
ನವದೆಹಲಿ/ಅಹಮದಾಬಾದ್: ವಿಶ್ವದ ಅತಿದೊಡ್ಡ ಸೆಮಿಕಂಡಕ್ಟರ್ ಕಂಪನಿಗಳಲ್ಲಿ ಒಂದಾದ Micron Technology ಗುಜರಾತ್ ರಾಜ್ಯದ ಸನಂದ್‌ನಲ್ಲಿ ನಿರ್ಮಿಸಿರುವ ದೇಶದ ಮೊದಲ ದೊಡ್ಡ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಪರೀಕ್ಷಾ (ATMP) ಸೌಲಭ್ಯವನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿಲಿದ್ದಾರೆ.
ಸುಮಾರು ₹22,500 ಕೋಟಿ ಹೂಡಿಕೆಯಲ್ಲಿ ನಿರ್ಮಾಣವಾಗಿರುವ ಈ ಘಟಕವು ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಮೆಮೊರಿ ಉತ್ಪನ್ನಗಳ ಪೂರೈಕೆಯನ್ನು ಗುರಿಯಾಗಿಸಿಕೊಂಡಿದೆ.
ಇದನ್ನೂ ಓದಿ: ಬೆಂಗಳೂರು–ಮುಂಬೈ ನಡುವೆ ಒನ್‌ವೇ ವಿಶೇಷ ರೈಲು ಸಂಚಾರ
DRAM, NAND ಉತ್ಪಾದನೆಗೆ ಉತ್ತೇಜನ: ಈ ATMP (Assembly, Testing, Marking and Packaging) ಸೌಲಭ್ಯದಲ್ಲಿ DRAM (Dynamic Random Access Memory) ಉತ್ಪನ್ನಗಳ ಜೋಡಣೆ ಮತ್ತು ಪರೀಕ್ಷೆ ಹಾಗೂ NAND ಫ್ಲಾಶ್ ಮೆಮೊರಿ ಉತ್ಪನ್ನಗಳ ಪ್ರೊಸೆಸಿಂಗ್ ಮತ್ತು ಸಾಲಿಡ್ ಸ್ಟೇಟ್ ಡ್ರೈವ್ (SSD) ಸಂಗ್ರಹಣಾ ಸಾಧನಗಳ ತಯಾರಿಕೆ ನಡೆಯಲಿದೆ.
ಮೈಕ್ರಾನ್ ಟೆಕ್ನಾಲಜಿಯ ಅಧ್ಯಕ್ಷ ಹಾಗೂ ಸಿಇಒ ಸಂಜಯ್ ಮೆಹ್ರೋತ್ರಾ ಅವರ ಪ್ರಕಾರ, ಕೃತಕ ಬುದ್ಧಿಮತ್ತೆ (AI) ಯುಗದಲ್ಲಿ ಮೆಮೊರಿ ಮತ್ತು ಸಂಗ್ರಹಣೆ ತಂತ್ರಜ್ಞಾನ ಅತ್ಯಂತ ಪ್ರಮುಖವಾಗಿದೆ. AI ವ್ಯವಸ್ಥೆಗಳು ವೇಗವಾಗಿ ಹಾಗೂ ನೈಜ-ಸಮಯದ ಪ್ರತಿಕ್ರಿಯೆ ನೀಡಲು ಹೆಚ್ಚಿನ ಸಾಮರ್ಥ್ಯದ ಮೆಮೊರಿ ಪರಿಹಾರಗಳನ್ನು ಅವಲಂಬಿಸಿವೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ – ಪುಣೆ ನಡುವೆ ಏಕಮುಖ ವಿಶೇಷ ರೈಲು ಸಂಚಾರ
ಉದ್ಯೋಗಾವಕಾಶಗಳ ಸೃಷ್ಟಿ: ಇನ್ನು ರಾಜ್ಯ ಸರ್ಕಾರ ತಿಳಸಿರುವಂತೆ ಪ್ರಸ್ತುತ ಸುಮಾರು 2,000 ಜನರು ಇಲ್ಲಿ ಉದ್ಯೋಗದಲ್ಲಿದ್ದಾರೆ, ಮುಂದಿನ ಹಂತದಲ್ಲಿ 5,000 ನೇರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ, ವಿಶೇಷಚೇತನರು ಸಹ ನಿರ್ವಾಹಕರು ಹಾಗೂ ತಂತ್ರಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಈ ಘಟಕವು ನುರಿತ ಮಾನವ ಸಂಪನ್ಮೂಲಕ್ಕೆ ದೊಡ್ಡ ಮಟ್ಟದ ಅವಕಾಶಗಳನ್ನು ಕಲ್ಪಿಸಲಿದೆ ಎಂದು ಸರ್ಕಾರ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನ ಭೇಟಿ ನಂತರ ಸನಂದ್ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬಳಿಕ ಅವರು ಚೆನ್ನೈಗೆ ಪ್ರಯಾಣ ಬೆಳೆಸಿದ್ದು, ನಾಳೆ (ಮಾ.1) ತಮಿಳುನಾಡು ಮತ್ತು ಪುದುಚೇರಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ರಾಯಚೂರಿನಲ್ಲಿ ಭೀಕರ ಅಪಘಾತ: ಮೂವರು ಯುವಕರ ದುರ್ಮರಣ
ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಭಾರತವನ್ನು ಜಾಗತಿಕ ಹಬ್ ಆಗಿ ರೂಪಿಸುವ ಗುರಿಯಲ್ಲಿ ಈ ಘಟಕ ಮಹತ್ವದ ಮೈಲಿಗಲ್ಲು ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.
‘ಮೇಕ್ ಇನ್ ಇಂಡಿಯಾ’ಗೆ ಬಲ: ಈ ಘಟಕದಿಂದ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಉತ್ತೇಜನ ನೀಡಿ, ಆಮದು ಅವಲಂಬನೆ ಕಡಿಮೆ ಮಾಡುವ ಉದ್ದೇಶ ಹೊಂದಿದೆ, AI ಮತ್ತು ಡೇಟಾ ಸೆಂಟರ್ ಉದ್ಯಮಗಳಿಗೆ ಬೆಂಬಲ ಹಾಗು ಜಾಗತಿಕ ಸರಬರಾಜು ಸರಪಳಿಯಲ್ಲಿ ಭಾರತದ ಸ್ಥಾನ ಬಲಪಡಿಸುವ ಸಾಧ್ಯತೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.



















