Home ಸುದ್ದಿ ದೇಶ ತಾಯಿ, ಪತ್ನಿಯನ್ನು ಕೊಂದು ತಲೆಮಾಂಸ ಬಗೆದು ತಿಂದ ಕಿರಾತಕ!

ತಾಯಿ, ಪತ್ನಿಯನ್ನು ಕೊಂದು ತಲೆಮಾಂಸ ಬಗೆದು ತಿಂದ ಕಿರಾತಕ!

0
1

ಲಖನೌ: ಉತ್ತರಪ್ರದೇಶದ ಕುಶಿ ನಗರದಲ್ಲಿ ಮದ್ಯ ಹಾಗೂ ಗಾಂಜಾ ವ್ಯಸನಿಯೊಬ್ಬ ತನ್ನ ತಾಯಿ ಮತ್ತು ಹೆಂಡತಿಯನ್ನು ಅಮಾನುಷ ರೀತಿಯಲ್ಲಿ ಕೊಂದು ಅವರ ಶವಗಳನ್ನು ವಿರೂಪಗೊಳಿಸಿ ತಲೆಬುರುಡೆಗಳ ಮಾಂಸವನ್ನು ಬಗೆದು ತಿಂದಿದ್ದಾನೆ.

ತಾಯಿ ರೂನಾದೇವಿ(60) ಮತ್ತು ಹೆಂಡತಿ ಪ್ರಿಯಾಂಕಾ(28) ಮೇಲೆ ಆಗಾಗ ಹಲ್ಲೆ ನಡೆಸುತ್ತಿದ್ದ ಸಿಕಂದರ್ ಗುಪ್ತಾ(30) ಎಂಬಾತನೇ ಈ ಕೃತ್ಯವೆಸಗಿದವನು. ಆತ ಸೋಮವಾರ ಬೆಳಗ್ಗೆ ಮನೆಯ ಮೇಲ್ಛಾವಣೆ ಮೇಲೆ ಅವರಿಬ್ಬರ ಮೇಲೆ ಕೋಲುಗಳಿಂದ ಥಳಿಸಿದ್ದಾನೆ. ನಂತರ ಸಿಮೆಂಟ್ ಇಟ್ಟಿಗೆಗಳನ್ನು ಅವರ ತಲೆ ಮೇಲೆ ಪದೇ ಪದೇ ಎತ್ತಿಹಾಕಿ ಕೊಂದು ಹಾಕಿದ್ದಲ್ಲದೆ, ಆನಂತರ ಶವಗಳನ್ನು ವಿರೂಪಗೊಳಿಸಿ ತಲೆಬರುಡೆಯ ಮಾಂಸ ತಿನ್ನುವ ಮೂಲಕ ಮಾನಸಿಕ ವಿಕೃತಿ ಮೆರೆದಿದ್ದಾನೆ.

ಇದನ್ನೂ ಓದಿ: ಕೈಕೊಟ್ಟ ಗೂಗಲ್ ಮ್ಯಾಪ್ ವಿದೇಶಿ ಮಹಿಳೆ ರಕ್ಷಿಸಿದ ಸಿಂಧು

ಆರೋಪಿ ಸಿಕಂದರ್ ಮುಂಬೈನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಒಂದು ತಿಂಗಳ ಹಿಂದೆ ಗ್ರಾಮಕ್ಕೆ ಮರಳಿದ್ದ. ಸೋಮವಾರ ಬೆಳಗ್ಗೆ ಆತನ ಮನೆ ಕಡೆಯಿಂದ ಬರುತ್ತಿದ್ದ ಕಿರುಚಾಟ ಕೇಳಿ ಗ್ರಾಮಸ್ಥರು ಅಲ್ಲಿಗೆ ಹೋದಾಗ ಆತ ತನ್ನ ಹೆಂಡತಿ ಹಾಗೂ ತಾಯಿಯನ್ನು ಕೊಂದು ಅವರ ತಲೆ ಮಾಂಸವನ್ನು ಜಗಿದು ತಿನ್ನುತ್ತಿದ್ದುದಲ್ಲದೆ, ಗ್ರಾಮಸ್ಥರ ಮೇಲೆಯೂ ಎಸೆಯಲಾರಂಭಿಸಿದ. ಇದರಿಂದ ಭಯಭೀತರಾದ ಗ್ರಾಮಸ್ಥರು ಅಲ್ಲಿಂದ ಕಾಲ್ಕಿತ್ತರು.