Fastag: 3 ಸಾವಿರ ರೂ. ವಾರ್ಷಿಕ ಟೋಲ್‌ ಪಾಸ್‌ ಪ್ರಾರಂಭ

1
111

ನವದೆಹಲಿ: ಕಾರು, ಜೀಪ್ ಮತ್ತು ವ್ಯಾನ್‌ ಹೊಂದಿರುವವರಿಗೆ ಇಂದು ಖುಷಿ ಸುದ್ದಿ. ಕೇಂದ್ರ ಸರಕಾರ ಇಂದಿನಿಂದ (ಆಗಸ್ಟ್‌ 15) ಫಾಸ್ಟ್‌ಟ್ಯಾಗ್‌ನಲ್ಲಿ ವಾರ್ಷಿಕ ಪಾಸ್‌ ಅನ್ನು ಅಧಿಕೃತವಾಗಿ ಬಿಡಗಡೆ ಮಾಡಿದೆ.

ಖಾಸಗಿ ವಾಹನಗಳಲ್ಲಿ ಸಂಚರಿಸುವವರು ಇನ್ನು ಕೇವಲ 3 ಸಾವಿರ ರೂ. ವಾರ್ಷಿಕವಾಗಿ ಪಾವತಿಸಿದರೆ ಸಾಕು. ವರ್ಷಪೂರ್ತಿಯಾಗಿ ರಾಷ್ಟ್ರೀಯ ಹೆದ್ದಾರಿ (NH) ಮತ್ತು ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇ (NE) ನಲ್ಲಿ ಸಂಚರಿಸಬಹುದಾಗಿದೆ.

ಫಾಸ್ಟ್‌ಟ್ಯಾಗ್‌ನಲ್ಲಿ ಇನ್ನು ಮುಂದೆ ಖಾಸಗಿ ಕಾರು, ಜೀಪ್ ಮತ್ತು ವ್ಯಾನ್‌ಗಳು 3000 ರೂ. ನೀಡಿ ವಾರ್ಷಿಕ ಪಾಸ್ ಪಡೆದುಕೊಳ್ಳಬಹುದಾಗಿದೆ. ಈ ಪಾಸ್ ತೆಗೆದುಕೊಂಡಲ್ಲಿ ಒಂದು ವರ್ಷಕ್ಕೆ 200 ಹೈವೇಗಳನ್ನು ದಾಟಬಹುದಾಗಿದೆ.

ವಾರ್ಷಿಕ ಪಾಸ್ ಕೇವಲ ವಾಣಿಜ್ಯೇತರ ವಾಹನಗಳಿಗೆ ಮಾತ್ರ ನೀಡಲಾಗುತ್ತದೆ. ಒಂದು ವರ್ಷದಲ್ಲಿ 200ಕ್ಕಿಂತ ಹೆಚ್ಚು ಟೋಲ್‌ನಲ್ಲಿ ಓಡಾಡಿದಲ್ಲೇ, ಕೂಡಲೇ ಮತ್ತೊಮ್ಮೆ ರೀಚಾರ್ಜ್ ಮಾಡಬಹುದಾಗಿದೆ.

ಇದಕ್ಕಾಗಿ `ರಾಜಮಾರ್ಗ್ ಯಾತ್ರಾ’ ಆ್ಯಪ್‌ನಲ್ಲಿ ಪ್ರತ್ಯೇಕವಾದ ಲಿಂಕನ್ನು ಸಕ್ರಿಯಗೊಳಿಸಲಾಗಿದೆ. ನ್ಯಾಷನಲ್ ಹೈವೇ ಪ್ರಾಧಿಕಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ವೆಬ್‌ಸೈಟ್‌ನಲ್ಲೂ ಲಿಂಕ್ ಲಭ್ಯವಿದೆ. ಈ ಮೂಲಕ ವಾರ್ಷಿಕ ಪಾಸ್ ಅನ್ನು ಸಕ್ರಿಯಗೊಳಿಸಬಹುದು.

ಖಾಸಗಿ ವಾಹನಗಳಿಗೆ ಮಾತ್ರ: ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಮಾತ್ರ ಈ ಪಾಸ್ ಅನ್ವಯವಾಗಲಿದೆ. ಇದರಿಂದ ಒಂದು ವರ್ಷದ ಅವಧಿಯಲ್ಲಿ 200 ಟೋಲ್‌ಗಳನ್ನು ದಾಟಬಹುದು. ಇದರಿಂದಾಗಿ ಫಾಸ್ಟ್‌ಟ್ಯಾಗ್‌ನಲ್ಲಿ ಹಣ ಖಾಲಿಯಾಯ್ತು ಎನ್ನುವ ಸಮಸ್ಯೆ ಇರುವುದಿಲ್ಲ. ಅಲ್ಲದೇ ರೀಜಾರ್ಜ್‌ ಮಾಡುವ ಅಗತ್ಯವೂ ಇರುವುದಿಲ್ಲ.

ಯಾವ ಟೋಲ್‌ಗಳಲ್ಲಿ ಅನ್ವಯ: ರಾಷ್ಟ್ರೀಯ ಹೆದ್ದಾರಿ (NH), ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇ (NE) ಟೋಲ್‌ ಪ್ಲಾಜಾಗಳಲ್ಲಿ ಮಾತ್ರ ಪಾಸ್‌ ಬಳಸಿ ಸಂಚರಿಸಲು ಅವಲಕಾಶವಿದೆ. ರಾಜ್ಯ ಹೆದ್ದಾರಿ, ಖಾಸಗಿ ಹೈವೇಗಳಲ್ಲಿ ಫಾಸ್ಟ್‌ಟ್ಯಾಗ್ ಪಾಸ್‌ನಿಂದ ಸಂಚರಿಸಲು ಅವಕಾಶವಿಲ್ಲ

ಎರಡು ಗಂಟೆಗಳಲ್ಲಿ ಪಾಸ್‌ ಸಕ್ರಿಯ: ಫಾಸ್ಟ್‌ಟ್ಯಾಗ್ ಪಾಸ್ ಸಕ್ರಿಯಗೊಳಿಸಲು ವಾಹನ ಸಂಖ್ಯೆಗೆ ಫಾಸ್ಟ್‌ಟ್ಯಾಗ್ ಲಿಂಕ್‌ ಆಗಿರುವುದನ್ನು ಪರಿಶೀಲಿಸಲಾಗುತ್ತದೆ. ಈಗಾಗಲೇ ಫಾಸ್ಟ್‌ಟ್ಯಾಗ್ ಹೊಂದಿರುವವರು ಅದರಲ್ಲಿಯೇ ಪಾಸ್‌ ಸಕ್ರಿಯಗೊಳಿಸಬಹುದಾಗಿದೆ. ಎಲ್ಲ ದಾಖಲೆಗಳು ಸರಿಯಾಗಿದ್ದರೆ 3,000 ರೂ. ಪಾವತಿಸಬಹುದು. ಪಾವತಿ ಮಾಡಿದ ಎರಡು ಗಂಟೆಗಳಲ್ಲಿ ಪಾಸ್‌ ಸಕ್ರಿಯವಾಗುತ್ತದೆ.

5 ಸಾವಿರಕ್ಕೂ ಹೆಚ್ಚು ಉಳಿತಾಯ: 3 ಸಾವಿರ ರೂ. ಪಾವತಿ 200 ಟ್ರಿಪ್‌ಗಳಲ್ಲಿ ಸಂಚರಿಸಲು ಅವಕಾಶ ನೀಡಲಾಗಿದ್ದು, ಇದರಿಂದಾಗಿ ಸುಮಾರು 5,000 ದಿಂದ 7,000 ರೂ. ಉಳಿತಾಯ ಮಾಡಬಹುದು. ಆದರೆ, ಫಾಸ್ಟಾಟ್ಯಾಗ್‌ನ್ನು ವರ್ಗಾಯಿಸುವಂತಿಲ್ಲ. ಒಂದು ವೇಳೆ ವರ್ಗಾಯಿಸಿದರೆ ಪಾಸ್‌ನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ.

Previous articleಇಡಿ ದಾಳಿ : ಶಾಸಕ ಸೈಲ್ ಮನೆಯಲ್ಲಿ ಸಿಕ್ಕಿದ್ದು 1.7 ಕೋಟಿ, 6.7 ಕೆಜಿ ಚಿನ್ನ
Next articleಸ್ವಿಗ್ಗಿ ದರ ಏರಿಕೆ: ಆನ್‌ಲೈನ್ ಆರ್ಡರ್ ಮಾಡುವ ಮೊದಲು ತಿಳಿಯಿರಿ

1 COMMENT

LEAVE A REPLY

Please enter your comment!
Please enter your name here