Home Advertisement
Home ಸುದ್ದಿ ದೇಶ ನರಕಯಾತನೆ ಅಂತ್ಯ, ನೋವಿಲ್ಲದೆ ಪ್ರಾಣ ಬಿಟ್ಟ ಹರೀಶ್‌ ರಾಣಾ

ನರಕಯಾತನೆ ಅಂತ್ಯ, ನೋವಿಲ್ಲದೆ ಪ್ರಾಣ ಬಿಟ್ಟ ಹರೀಶ್‌ ರಾಣಾ

0
99

ನವದೆಹಲಿ: ದೇಶದ ಮೊದಲ ಪರೋಕ್ಷ ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ (31) ಅವರ 13 ವರ್ಷಗಳಿಂದ ಬದುಕಿಗಾಗಿ ನಡೆದ ಮೌನ ಹೋರಾಟ ಅಂತ್ಯಗೊಂಡಿದೆ.

13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಹರೀಶ್‌ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ಹರೀಶ್‌, 2013ರಲ್ಲಿ ತಾನಿದ್ದ ಪಿಜಿಯ ನಾಲ್ಕನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ತಲೆಗೆ ತೀವ್ರ ಪೆಟ್ಟಾಗಿತ್ತು. ಇದರಿಂದಾಗಿ ಮೆದುಳಿನ ಗಾಯದಿಂದಾಗಿ ಕೋಮಾದಲ್ಲಿದ್ದರು.

ಅಂದಿನಿಂದಲೂ ದಶಕಕ್ಕೂ ಹೆಚ್ಚು ಕಾಲ ಹರೀಶ್‌ ತಂದೆ-ತಾಯಿ ಮಗನಿಗೆ ಚಿಕಿತ್ಸೆ ಕೊಡಿಸುತ್ತ ಬಂದಿದ್ದರು. ಆದರೆ, ಯಾವುದೇ ಚೇತರಿಕೆ ಕಾಣಲಿಲ್ಲ. ಬಳಿಕ ವೈದ್ಯರು ಕೂಡ ಹರೀಶ್ ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲ ಎಂದು ವರದಿ ನೀಡಿದ್ದರು. ಬಳಿಕ ಆತನಿಗೆ ದಯಾಮರಣ ನೀಡಬೇಕು ಎಂದು ಕೋರಿ ಪೋಷಕರು ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದರು.

ಸರ್ವೋಚ್ಚ ನ್ಯಾಯಾಲಯವು 2026ರ ಮಾರ್ಚ್ 11ರಂದು ಅವರ ಕುಟುಂಬದ ಮನವಿಯ ಮೇರೆಗೆ ನಿಷ್ಕ್ರಿಯ ದಯಾಮರಣಕ್ಕೆ ಅನುಮೋದನೆ ನೀಡಿದ್ದು, ಮಾರ್ಚ್‌ 14 ರಂದು ಕೋರ್ಟ್ ತೀರ್ಪಿನ ಪ್ರಕಾರ ಏಮ್ಸ್ ದಯಾಮರಣ ಪ್ರಕ್ರಿಯೆ ಆರಂಭಿಸಿತ್ತು. 11ನೇ ದಿನದಂದು ಅವರು ಕೊನೆಯುಸಿರೆಳೆದಿದ್ದಾರೆ. ಇದು ಭಾರತದ ಇತಿಹಾಸದಲ್ಲಿ ಮೊದಲ ಪ್ರಕರಣವಾಗಿದೆ.