Home Advertisement
Home ಸುದ್ದಿ ದೇಶ ಮೊನಾಲಿಸಾ ಪತಿ ಮೇಲೆ ಪೋಕ್ಸೋ ಕೇಸ್ ದಾಖಲು

ಮೊನಾಲಿಸಾ ಪತಿ ಮೇಲೆ ಪೋಕ್ಸೋ ಕೇಸ್ ದಾಖಲು

0
46

ಭೋಪಾಲ್: ಪ್ರಯಾಗ್‌ರಾಜ್ ಕುಂಭಮೇಳ ಖ್ಯಾತಿಯ ಮೊನಾಲಿಸಾ ಮದವೆಯಾಗಿದ್ದ ಮುಸ್ಲಿಂ ಯುವಕ ಫರ್ಮಾನ್ ಖಾನ್ ಮೇಲೆ ಪೋಕ್ಸೋ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ತನಿಖೆಯಲ್ಲಿ ಮೊನಾಲಿಸಾ ಮದುವೆ ಆಗುವ ಸಂದರ್ಭದಲ್ಲಿ ಅಪ್ರಾಪ್ತೆಯಾಗಿದ್ದಳು ಎಂದು ಬೆಳಕಿಗೆ ಬಂದಿದ್ದು ಮದುವೆಯನ್ನು ರದ್ದು ಮಾಡುವಂತೆ ಸೂಚಿಸಿದೆ.

ಕೇರಳದ ದೇವಸ್ಥಾನವೊಂದರಲ್ಲಿ ಆಧಾರ್ ದಾಖಲೆ ತೋರಿಸಿ ಮದುವೆಯಾಗಿದ್ದ ದಂಪತಿ, ಮದುವೆ ನೋಂದಣಿ ಮಾಡಲು ಜನನ ಪ್ರಮಾಣ ಪತ್ರ ಲಗತ್ತಿಸುವ ವೇಳೆ ಆಕೆಯ ವಯಸ್ಸು ವಿವಾಹದ ಸಂದರ್ಭ ಕೇವಲ 16 ವರ್ಷ 2 ತಿಂಗಳಾಗಿತ್ತು ಎಂದು ತಿಳಿದುಬಂದಿದೆ.