ರಾಜ್ಯಸಭಾ ಚುನಾವಣೆ 2026: BJP 9 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

0
69

ನವದೆಹಲಿ: ಮಾರ್ಚ್ 16ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ Bharatiya Janata Party (ಬಿಜೆಪಿ) ತನ್ನ ಮೊದಲ ಪಟ್ಟಿಯಲ್ಲಿ 9 ಅಭ್ಯರ್ಥಿಗಳ ಹೆಸರನ್ನು ಮಂಗಳವಾರ ಪ್ರಕಟಿಸಿದೆ. ದೇಶಾದ್ಯಂತ ಒಟ್ಟು 37 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿ ಮೊದಲ ಹಂತದಲ್ಲಿ ಆಯ್ದ ರಾಜ್ಯಗಳ ಅಭ್ಯರ್ಥಿಗಳನ್ನು ಘೋಷಿಸಿದೆ.

ಬಿಹಾರದಿಂದ ನಿತಿನ್ ನವೀನ್ ಸ್ಪರ್ಧೆ: ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರನ್ನು ಬಿಹಾರದಿಂದ ರಾಜ್ಯಸಭಾ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಅವರೊಂದಿಗೆ ಶಿವೇಶ್ ಕುಮಾರ್ ಕೂಡ ಬಿಹಾರದಿಂದ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ 59 ಲಕ್ಷ ಮೌಲ್ಯದ 24 ಕೆ.ಜಿ. ಬೆಳ್ಳಿ ಆಭರಣ ಕಳವು

ಇತರ ರಾಜ್ಯಗಳ ಅಭ್ಯರ್ಥಿಗಳು: ಅಸ್ಸಾಂ: ತೇರಶ್ ಗೋವಾಲಾ, ಜೋಗೆನ್ ಮೋಹನ್, ಛತ್ತೀಸ್‌ಗಢ: ಲಕ್ಷ್ಮಿ ವರ್ಮಾ, ಹರಿಯಾಣ: ಸಂಜಯ್ ಭಾಟಿಯಾ, ಒಡಿಶಾ: ಸುಜಿತ್ ಕುಮಾರ್, ಮನಮೋಹನ್ ಸಮಲ್, ಪಶ್ಚಿಮ ಬಂಗಾಳ: ರಾಹುಲ್ ಸಿನ್ಹಾ

ಬಿಜೆಪಿ ಪ್ರಕಟಿಸಿದ ಪಟ್ಟಿಯ ಪ್ರಕಾರ, ಈ ಹೆಸರುಗಳು ವಿವಿಧ ರಾಜ್ಯ ಘಟಕಗಳ ಶಿಫಾರಸ್ಸಿನ ಆಧಾರದ ಮೇಲೆ ಅಂತಿಮಗೊಳಿಸಲಾಗಿದೆ.

ಇದನ್ನೂ ಓದಿ: ಕಲಬುರಗಿ: ಹುಸಿ ಬಾಂಬ್ ಬೆದರಿಕೆ – ಕೋರ್ಟ್ ಕಲಾಪ ರದ್ದು

ಪಕ್ಷದ ವಲಯಗಳಿಂದ ಲಭಿಸಿರುವ ಮಾಹಿತಿಯಂತೆ, ಇನ್ನೂ ಕೆಲವು ರಾಜ್ಯಗಳಿಗೆ ಸಂಬಂಧಿಸಿದ ಅಭ್ಯರ್ಥಿಗಳ ಹೆಸರುಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ಅಂತಿಮ ಚರ್ಚೆಯ ನಂತರ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ರಾಜ್ಯಸಭಾ ಚುನಾವಣೆಯಲ್ಲಿ ಸಂಖ್ಯಾಬಲದ ಆಧಾರದ ಮೇಲೆ ಕೆಲವು ಅಭ್ಯರ್ಥಿಗಳು ಪ್ರತಿಸ್ಪರ್ಧೆಯಿಲ್ಲದೇ ಆಯ್ಕೆಯಾಗುವ ಸಾಧ್ಯತೆಯೂ ಇದೆ ಎಂದು ರಾಜಕೀಯ ವಲಯಗಳು ವಿಶ್ಲೇಷಿಸಿವೆ.