SK Home Ad
Home ಸುದ್ದಿ ದೇಶ 8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಭರ್ಜರಿ ಏರಿಕೆ? ಸೆಪ್ಟೆಂಬರ್‌ನಲ್ಲೇ ಸಿಗಲಿದೆ ಗುಡ್‌ನ್ಯೂಸ್!

8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಭರ್ಜರಿ ಏರಿಕೆ? ಸೆಪ್ಟೆಂಬರ್‌ನಲ್ಲೇ ಸಿಗಲಿದೆ ಗುಡ್‌ನ್ಯೂಸ್!

0
43

8th Pay Commission: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಎಂಟನೇ ವೇತನ ಆಯೋಗದಿಂದ ಶೀಘ್ರದಲ್ಲೇ ಸಿಹಿಸುದ್ದಿ ಸಿಗುವ ಸಾಧ್ಯತೆಯಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಶೇ. 60 ರಷ್ಟು ತುಟ್ಟಿಭತ್ಯೆಯನ್ನು (DA) ಶೇ. 63 ಕ್ಕೆ ಹೆಚ್ಚಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಈ ಕುರಿತು ಅಧಿಕೃತ ಪ್ರಕಟಣೆ ಸೆಪ್ಟೆಂಬರ್ ತಿಂಗಳಲ್ಲೇ ಹೊರಬೀಳುವ ನಿರೀಕ್ಷೆಯಿದೆ.

ಜಸ್ಟಿಸ್ ರಂಜನಾ ಪ್ರಕಾಶ್ ದೇಸಾಯಿ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಎಂಟನೇ ವೇತನ ಆಯೋಗವು ದೇಶಾದ್ಯಂತ ಸಂಚರಿಸಿ ವಿವಿಧ ನೌಕರರ ಸಂಘಟನೆಗಳು ಮತ್ತು ಪಿಂಚಣಿದಾರರ ಅಹವಾಲುಗಳನ್ನು ಆಲಿಸುತ್ತಿದೆ. ಈ ಬಾರಿ ತುಟ್ಟಿಭತ್ಯೆ ಹೆಚ್ಚಳವಾದರೆ, ಅದು ಜನವರಿ 1, 2026 ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದ್ದು, ನೌಕರರಿಗೆ ಭಾರಿ ಮೊತ್ತದ ಹಿಂಬಾಕಿ ಕೂಡ ಸಿಗಲಿದೆ.

ಇನ್ನು, ಫಿಟ್ಮೆಂಟ್ ಫ್ಯಾಕ್ಟರ್ ಅನ್ನು ಪ್ರಸ್ತುತ ಇರುವ 2.57 ರಿಂದ 3.0 ಅಥವಾ 3.5 ಕ್ಕೆ ಏರಿಸಬೇಕೆಂದು ನೌಕರರ ಸಂಘಟನೆಗಳು ಪಟ್ಟು ಹಿಡಿದಿವೆ. ಒಂದು ವೇಳೆ ಆಯೋಗವು ಈ ಬೇಡಿಕೆಯನ್ನು ಪುರಸ್ಕರಿಸಿದರೆ, ಕನಿಷ್ಠ ಮೂಲ ವೇತನವು 18,000 ರೂಪಾಯಿಗಳಿಂದ ಬರೋಬ್ಬರಿ 34,000 ಅಥವಾ 51,000 ರೂಪಾಯಿಗಳವರೆಗೆ ಏರಿಕೆಯಾಗುವ ಸಾಧ್ಯತೆಯಿದೆ. ಇದರಿಂದ ದೇಶದ 65 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರು ಹಾಗೂ ಲಕ್ಷಾಂತರ ನೌಕರರಿಗೆ ಆರ್ಥಿಕವಾಗಿ ದೊಡ್ಡ ಲಾಭವಾಗಲಿದೆ. ಆಯೋಗವು ತನ್ನ ಅಂತಿಮ ವರದಿಯನ್ನು 2027 ರ ಮೇ ಅಥವಾ ಜೂನ್ ವೇಳೆಗೆ ಸಲ್ಲಿಸುವ ಗಡುವು ಹೊಂದಿದೆ.