ಚಿತ್ರ: ಫಸ್ಟ್ ಡೇ ಫಸ್ಟ್ ಶೋ
ನಿರ್ದೇಶನ: ಗಿರೀಶ್.ಜಿ
ನಿರ್ಮಾಣ: ಊರ್ಮಿಳಾ ಕಿರಣ್
ತಾರಾಗಣ: ಗಿರೀಶ್.ಜಿ, ಜೀವಿತಾ, ಶೋಭಿತಾ, ರೋಹಿತ್ ಶ್ರೀನಾಥ್, ಬಿ.ಎಂ.ವೆಂಕಟೇಶ್, ಅನಿರುದ್ಧ ಶಾಸ್ತ್ರಿ ಹಾಗೂ ಗಿಲ್ಲಿ ನಟ ಮುಂತಾದವರು.
ರೇಟಿಂಗ್ಸ್: 3
-ಜಿ.ಆರ್.ಬಿ
ಸಿನಿಮಾ ಮೂಲಕ ಹತ್ತಾರು ವಿಷಯಗಳನ್ನು ದಾಟಿಸಬಹುದು. ಪರದೆ ಮೇಲೆ ಸ್ವರ್ಗ-ನರಕ ಎಲ್ಲವನ್ನೂ ಸೃಷ್ಟಿಸಬಹುದು. ಸುಳ್ಳನ್ನು ಸತ್ಯ, ಸತ್ಯವನ್ನು ಸುಳ್ಳು ಎಂಬಂತೆ ಬಿಂಬಿಸಿ ಎಂಥಾ ಭ್ರಮೆಯನ್ನು ಬೇಕಾದರೂ ಸೃಜಿಸಬಹುದು. ಅದು ಸಿನಿಮಾಕ್ಕಿರುವ ಶಕ್ತಿ ಮತ್ತು ಚಮತ್ಕಾರ. ಬೇರೆ ಕಥೆಗಳಿರಲಿ, ಸಿನಿಮಾವೊಂದು ಹೇಗೆ ತಯಾರಾಗುತ್ತದೆ, ಹೇಗೆ ಅದು ಜನರ ಮುಂದೆ ತಲುಪುತ್ತದೆ, ಅದರ ಹಿಂದೆ ಏನೆಲ್ಲ ಕೆಲಸಗಳಾಗುತ್ತವೆ ಎಂಬುದೇ ಒಂದು ರೋಚಕ ಕಥೆ. ಸಿನಿಮಾದೊಳಗೆ ಸಿನಿಮಾ ತೋರಿಸುವ ಪ್ರಯತ್ನ ಸಾಕಷ್ಟು ಸಲ ನಡೆದಿದ್ದು, ಫಸ್ಟ್ ಡೇ ಫಸ್ಟ್ ಶೋ ಚಿತ್ರತಂಡವು ಅದೇ ಜಾಡು ಹಿಡಿದಿದೆ…
ಈ ಸಿನಿಮಾ ಮೂಲಕ ಚಿತ್ರರಂಗದ ಒಳ-ಹೊರಗುಗಳನ್ನು ಅನಾವರಣ ಮಾಡಿದ್ದಾರೆ ನಿರ್ದೇಶಕ ಗಿರೀಶ್ ಜಿ. ಜನ ಥಿಯೇಟರ್‌ಗೆ ಬರಲ್ಲ ಎಂಬ ಕೊರಗು ದೂರವಾಗಿ ಸಿನಿಮಾಗಳು ಜನಭರಿತ ಪ್ರದರ್ಶನ ಕಾಣುವಂತಾಗಲಿ ಅನ್ನೋದು ‘ಫಸ್ಟ್ ಡೇ ಫಸ್ಟ್ ಶೋ’ ಸಿನಿಮಾದ ಆಶಯ.
ಮಾಮೂಲಿ ಧಾಟಿಯಲ್ಲಿ ಕಥೆ ಒಪ್ಪಿಸಿದರೆ ಪ್ರೇಕ್ಷಕ ಒಪ್ಪುವುದಿಲ್ಲ ಎಂಬುದನ್ನು ಅರಿತಿರುವ ನಿರ್ದೇಶಕ, ಪೈರಸಿ ಅಂಶವನ್ನು ಬೆರೆಸಿ ಥ್ರಿಲ್ಲರ್ ಮಾದರಿಯಲ್ಲಿ ‘ಫಸ್ಟ್ ಡೇ…’ ಕಟ್ಟಿಕೊಟ್ಟಿದ್ದಾರೆ.
ನಟನೆಗೂ ಸೈ, ನಿರ್ದೇಶನಕ್ಕೂ ಜೈ ಎಂದಿರುವ ಗಿರೀಶ್ ಸಿನಿಮಾದುದ್ದಕ್ಕೂ ಗಮನ ಸೆಳೆಯುತ್ತಾರೆ. ಜೀವಿತಾ, ಶೋಭಿತಾ, ರೋಹಿತ್, ಬಿ.ಎಂ.ವೆಂಕಟೇಶ್, ಅನಿರುದ್ಧ ಶಾಸ್ತ್ರಿ ಪಾತ್ರಕ್ಕೆ ಪೂರಕವಾಗಿ ನಟಿಸಿದ್ದಾರೆ.