ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಗುವಾಹಟಿಯಲ್ಲಿ ನಟಿ ತಮನ್ನಾ ಅವರನ್ನು 8 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
HPZ ಟೋಕನ್ ಆ್ಯಪ್‌ನಲ್ಲಿ ಅನೇಕರು ಹೂಡಿಕೆ ಮಾಡಿ ಮೋಸ ಹೋಗಿರುವ ಪ್ರಕರಣಗಳು ಆ್ಯಪ್‌ನಲ್ಲಿವೆ. ಈ ಆ್ಯಪ್‌ಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಣ ಪಡೆದ ಆರೋಪದ ಮೇಲೆ ತಮನ್ನಾ ಅವರನ್ನು ಇಡಿ ವಿಚಾರಣೆ ನಡೆಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಿಲ್ಕಿ ಬ್ಯೂಟಿ, ನಟಿ ತಮನ್ನಾ ಭಾಟಿಯಾ ಗುರುವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಬಿಟ್‌ಕಾಯಿನ್ , ಕ್ರಿಪ್ಟೋಕರೆನ್ಸಿಗಳ ನೆಪದಲ್ಲಿ ಹಣ ದುಪ್ಪಟ್ಟು ಮಾಡುವುದಾಗಿ ಹಲವು ಹೂಡಿಕೆದಾರರನ್ನು ವಂಚಿಸಿದ ‘HPZ ಟೋಕನ್’ ಮೊಬೈಲ್ ಆ್ಯಪ್ ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ತಮನ್ನಾ ಭಾಟಿಯಾ ಅವರನ್ನು ಇಡಿ ವಿಚಾರಣೆ ನಡೆಸಿತು.